ತುರುವೇಕೆರೆ
ತುರುವೇಕೆರೆ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ಮಸಾಲಜಯರಾಮ್ ಗೆಲುವಿಗೆ ಮತ ನೀಡುವಂತೆ ಅವರ ಪತ್ನಿ ಸುನಂದಾ ಜಯರಾಮ್ ಕ್ಷೇತ್ರದಲ್ಲಿ ಮನೆ ಮನೆ ಪ್ರಚಾರ ಮಾಡುತ್ತಿದ್ದಾರೆ.
ತಾಲೂಕಿನ ಮಾಯಸಂದ್ರ ಹೋಬಳಿಯ ಜಡಿಂiÀi ಗ್ರಾಮದಲ್ಲಿ ಶುಕ್ರವಾರ ಮನೆ ಮನೆ ಪ್ರಚಾರ ಕೈಗೊಂಡು ಮಾತನಾಡಿದ ಅವರು ನಾಮಪತ್ರ ಸಲ್ಲಿಸಿದ ದಿನದಿಂದಲೂ ತಾಲೂಕಿನಾದ್ಯಂತ ಪ್ರತಿ ನಿತ್ಯ ನೂರಾರು ಮಹಿಳಾ ಕಾರ್ಯಕರ್ತರೊಂದಿಗೆ ಪ್ರಚಾರ ಮಾಡುತ್ತಿದ್ದು. ಈಗಾಗಲೇ ದಂಡಿನಶಿವರ ಹೋಬಳಿಯಲ್ಲಿ ಎಲ್ಲ ಪಂಚಾಯಿತಿಗಳಲ್ಲಿ ಪ್ರಚಾರ ಮುಗಿಸಿದ್ದು, ಇಂದಿನಿಂದ ಮಾಯಸಂದ್ರ ಹೋಬಳಿಯಲ್ಲಿ ಚುನಾವಣಾ ಪ್ರಚಾರ ಪ್ರಾರಂಬಿಸಿದ್ದು ಗ್ರಾಮಗಳ ಎಲ್ಲ ಮನೆ ಮನೆಗೆ ತೆರಳಿ ಕರಪತ್ರ ನೀಡಿ ತಮ್ಮ ಪತಿ ಬಿಜೆಪಿ ಅಭ್ಯರ್ರ್ಥಿಗೆ ಮತ ನೀಡುವಂತೆ ಕೈ ಮುಗಿದು ಕೇಳುತ್ತಿದ್ದೇನೆ. ಈಗಾಗಲೇ ಸುಮಾರು 5 ವರ್ಷಗಳ ಕಾಲ ಶಾಸಕರಾಗಿ ಕ್ಷೇತ್ರದಲ್ಲಿ ಅಭಿವೃದಿ ಕೆಲಸ ಮಾಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಪಕ್ಷದಿಂದ ಸ್ಪರ್ದಿಸಿದ್ದು ಸ್ಪರ್ದಿಸಿದ್ದು ಎಲ್ಲ ಕಡೆಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಚಾರದ ವೇಳೆ ಹಳ್ಳಿಗಳಲ್ಲಿ ನಮ್ಮನ್ನು ಸ್ವಾಗತ ಕೋರಿ ಅರಿಶಿಣ, ಕುಂಕುಮ ನೀಡಿ ಆಶೀರ್ವಾದ ನೀಡುತ್ತಿದ್ದಾರೆ. ನನ್ನ ಪತಿ ಮಸಾಲಜಯರಾಮ್‍ರವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಯಸಂದ್ರ ಬಿಜೆಪಿ ಹೋಬಳಿ ಅಧ್ಯಕ್ಷ ಗಿರೀಶ್ ಮಾತನಾಡಿ ಮಸಾಲಜಯರಾಮ್ ಮಾಯಸಂದ್ರ ಹೋಬಳಿಯಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಅವರ ಅಭಿವೃದ್ದಿ ಕೆಲಸಗಳೇ ಗೆಲುವಿಗೆ ಶ್ರೀರಕ್ಷೆಯಾಗಿದೆ.
ಈ ಭಾರಿ ಹೋಬಳಿಯಲ್ಲಿ ಅತೀ ಹೆಚ್ಚು ಮತ ಕೊಡುವ ಮೂಲಕ ಮತ್ತೊಮ್ಮೆ ಶಾಸಕರನ್ನಾಗಿ ಮಾಡುವುದರ ಜೊತೆಗೆ ಮಂತ್ರಿಯಾಗಲಿದ್ದಾರೆ ಎಂದರು.
ಈ ಸಂದರ್ಬದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ವರದರಾಜು, ಯಶೋಧರ, ದಲಿತ ಮುಖಂಡ ಸುಬ್ರಮಣಿ ಮುಖಂಡರಾದ ಮಹಾವೀರ ಬಾಬು, ಹರಿಕಾರನಹಳ್ಳಿಪ್ರಸಾದ್, ಸಿದ್ದಪಾಜಿ, ಭರತ್, ನಾರಾಣಪ್ಪ, ಸುನಿಲ್, ನಂದೀಶ್, ಶಂಕರಪ್ಪ, ನಾಗರಾಜು, ರೇಷ್ಮ, ರಾದಮಣಿ, ಚಂದ್ರಚೂಡಾ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.