ತುಮಕೂರು


ಪ್ರಾಣಿಗಳ ಜೀವ ಉಳಿಸುವಂತಹ ಪುಣ್ಯದ ಕೆಲಸ ಮಾಡುತ್ತಿರುವ ನಿಮ್ಮಗಳ ಸೇವೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹಳ್ಳಿಗಳನ್ನು ತಲುಪುವಂತಾಗಲಿ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ವಿದ್ಯಾಕುಮಾರಿ ಆಶಯ ವ್ಯಕ್ತಪಡಿಸಿದ್ದಾರೆ.
ನಗರದ ಅರ್ಬನ್ ರೆಸ್ಟಾಟ್‍ನಲ್ಲಿ ಪಶುವೈದ್ಯಕೀಯ ಸಂಘ(ರಿ) ತುಮಕೂರು, ಪಶುಪಾಲನೆ ಮತ್ತ ಪಶುವೈದ್ಯಕೀಯ ಸೇವಾ ಇಲಾಖೆ ಜಂಟಿಯಾಗಿ ಆಯೋಜಸಿದ್ದ ವಿಶ್ವ ಪಶುವೈದ್ಯಕೀಯ ದಿನಾಚರಣೆ ಹಾಗೂ ತಾಂತ್ರಿಕ ವಿಚಾರ ಸಂಕೀರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ನಮ್ಮ ಇತಿಮಿತಿಗಳ ನಡುವೆಯೂ ಹೆಚ್ಚು ಗ್ರಾಮಗಳನ್ನು ನಿಗಧಿತ ಅವಧಿಯೊಳಗೆ ತಲುಪುವಂತಾಗದರೆ, ಅದರಿಂದ ಮೂಕ ಪ್ರಾಣಿಗಳಿಗೆ ಜೊತೆಗೆ,ಅವುಗಳ ಮಾಲೀಕರಿಗೆ ಹೆಚ್ಚಿನ ಲಾಭ ಉಂಟಾಗುತ್ತದೆ ಎಂದರು
ಇಂತಹ ದಿನಾಚರಣೆಗಳ ನಾವು ಹೇಗೆ ಕಾರ್ಯನಿರ್ವಹಿಸುತ್ತಿದೇವೆ.ನಮ್ಮ ಜವಾಬ್ದಾರಿಗಳೇನು,ನಮ್ಮಗಳ ಕರ್ತವ್ಯ ಸಮರ್ಪಕವಾಗಿದೆಯೆ ಎಂದು ಪುನರ್ ಮನನ ಮಾಡಿಕೊಳ್ಳಲು ಇರುವ ಒಂದು ಅವಕಾಶ ಎಂದೇ ಭಾವಿಸಬೇಕಾಗುತ್ತದೆ. ಪ್ರಕೃತಿಯ ಒಂದು ಭಾಗವಾದ ಪ್ರಾಣಿಗಳ ಸೇವೆಯ ಉದ್ದೇಶ ನಿಮ್ಮ ಉದ್ದೇಶವಾಗಿದೆ.ಪಶುಪಾಲನೆ ಗ್ರಾಮೀಣ ಜನರ ಒಂದು ಅಂಗವಾಗಿದೆ.ಪ್ರಾಣಿಗಳಿಗೆ ರೋಗ, ರುಜೀನಗಳು ಕಾಣಿಸಿಕೊಂಡಾಗ ಅವರ ಯಾತನೆ ಹೇಳತೀರದು.ಈ ಬಾರಿಯ ಘೋಷ್ಯವಾಕ್ಯ ಎಲ್ಲರನ್ನು ಒಳಗೊಳ್ಳುವಿಕೆ ಅತ್ಯಂತ ಮಹತ್ವದ ಸಂದೇಶವಾಗಿದೆ ಎಂದರು.
ಪಶುವೈದ್ಯಕೀಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆ ಇರುವುದು ಸತ್ಯ.ಆದರೆ ಅದೇ ನಾವು ನೀಡುವ ಸೇವೆಗೆ ಏರುಪೇರಿಗೆ ಕಾರಣವಾಗಬಾರದು.331 ಗ್ರಾಮಪಂಚಾಯಿತಿಗಳಿಗೆ ಇರುವುದು 200 ಜನ ಪಿಡಿಓ ಮಾತ್ರ.ಆದರೂ ನಾವು ನೀಡುವ ಸೇವೆಯಲ್ಲಿ ವೆತ್ಯಯ ಆಗದಂತೆ ನೋಡಿಕೊಳ್ಳಬೇಕಾಗಿದೆ.
ನಾನು ಭಾರತೀಯ ಪ್ರಜೆ ಎಂದು ಹೇಳಿಕೊಳ್ಳಲು ಇರುವ ಏಕೈಕ ಹಕ್ಕು ಎಂದರೆ ಅದು ಮತದಾನ.ಈ ನಿಟ್ಟಿನಲ್ಲಿ ತಾವೆಲ್ಲರೂ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವಂತೆ ಸಿ.ಇ.ಓ ಹಾಗೂ ಸ್ವೀಪ್ ಕಮಿಟಿ ಅಧ್ಯಕ್ಷರು ಆಗಿರುವ ಡಾ.ಕೆ.ವಿದ್ಯಾಕುಮಾರ್ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಜಿ.ವಿ.ಜಯಣ್ಣ ವಹಿಸಿದ್ದರು.ಕರ್ನಾಟಕ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ.ವೈ.ಟಿ. ಕಾಂತರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಡಾ.ಟಿ.ಪಿ.ಸುರೇಶ್,ಕೊರಟಗೆರೆ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಶ್ರೀಧರ್ ವಿವೇಷ ಉಪನ್ಯಾಸ ನೀಡಿದರು.ಡಾ.ಸುರೇಶ್.ಬಿ., ಪಶುವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಪುರುಷೋತ್ತಮ್ ಎಸ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

(Visited 1 times, 1 visits today)