ತುರುವೇಕೆರೆ
ತುರುವೇಕೆರೆ ವಿಧಾನಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಎಲ್ಲಾ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ಪಟ್ಟಣದ ಸರ್ಕಾರಿ ಪಧವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ನೆಡೆದ ಮಸ್ಟಿರಿಂಗ್ ಕೇಂದ್ರದಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಗಂಡು ಮತದಾರರು 90932 ಹೆಣ್ಣು 91718 ಇತರೆ 2 ಸೇರಿ ಒಟ್ಟು 182652 ಮತದಾರಿದ್ದಾರೆ, ಕ್ಷೇತ್ರದ 229 ಮತಗಟ್ಟೆಗಳ ಪೈಕಿ 46 ಸೂಕ್ಷ್ಮ ಮತ ಕೇಂದ್ರಗಳು 5 ಸಖಿ ಮತಗಟ್ಟೆ, ಮೂನಿಯೂರು ವಿಶೇಷ ಚೇತನ ಮತಗಟ್ಟೆ, ಗೋಣಿ ತುಮಕೂರು, ಮಾವಿನಕೆರೆ ಯುವ ಮತಗಟ್ಟೆಗಳನ್ನು ಮಾಡಲಾಗಿದೆ. ಒಂದು ಮತಗಟ್ಟೆಗೆ ಪಿಆರ್.ಓ ಎಪಿಆರ್.ಓ 1 ಹೋಂ ಗಾರ್ಡ್, 1 ಪೊಲೀಸ್ ಪೇದೆಯೊಂದಿಗೆ ಸೇರಿ 6 ರಿಂದ 10 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ಸೂಕ್ಷ್ಮ ಮತಗಟ್ಟೆಗಳಿಗೆ ವೆಬ್ ಕ್ಯಾಮರಾಗಳನ್ನು ಅಳವಡಿಸಿ ಪ್ರತಿಯೊಬ್ಬರ ಚಲನ ವಲನಗಳ ಬಗ್ಗೆ ನಿಗಾ ವಹಿಸಲಾಗಿದೆ. ಎಲ್ಲಾ ಮತಘಟ್ಟೆಗಳಲ್ಲೂ ವಿಡಿಯೋ ಚಿತ್ರೀಕರಣದೊಂದಿಗೆ ಸೂಕ್ಷ್ಮವಾಗಿ ಗಮನಿಸಲಾಗುವುದು. 1 ಕೆಎಸ್.ಆರ್.ಪಿ. ತುಕಡಿ ಸೇರಿ ಪೋಲೀಸರು ಸೇರಿ 500 ಮಂದಿ ಅರೆಸೇನಾ ಪಡೆ. 19 ಸೆಕ್ಟರಲ್ ಆಫೀಸರ್‍ಗಳನ್ನು ನಿಯೋಜಿಸಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಮತದಾನಕ್ಕೆ ಬರುವ ನಾಗರೀಕರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲಾ ಮೂಲಭೂತ ಸೌಕರ್ಯ ಕೈಗೊಳ್ಳಲಾಗಿದೆ. ಬೆಳಗ್ಗೆ 7 ರಿಂದ ಸಂಜೆ 6 ರ ವರೆಗೆ ಮತದಾನ ನಡೆಯಲಿದ್ದು, ಮತದಾರರು ತಮ್ಮ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಎಂದು ಮನವಿ ಮಾಡಿದ್ದಾರೆ.