ಮಧುಗಿರಿ
ತಾಲೂಕಿನ ಎಲ್ಲಾ ಪಿಡಿಓ ಗಳು ಸಮರ್ಪಕವಾಗಿ ಕೆಲಸ ನಿರ್ವಹಿಸಿ, ಸರ್ಕಾರದ ಕೆಲಸ ಆದರೆ ಆಯ್ತು, ಹೋದರೆ ಹೋಯಿತು ಎಂಬ ಬೇಜವಾಬ್ದಾರಿ ಬೇಡ ಜನರಿಗೆ ತೊಂದರೆಯಾಗದAತೆ ಕೆಲಸ ಮಾಡಿ ಎಂದು ಶಾಸಕ ಕೆ.ಎನ್. ರಾಜಣ್ಣ ತಾಕೀತು ಮಾಡಿದರು.
ಪಟ್ಟಣದ ತಾ.ಪಂ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಕೆಲಸ ನಿರ್ವಹಿಸಿ. ಗ್ರಾಮಗಳಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿ, ವಾಟರ್ ಮನ್ ಗಳು ಉತ್ತಮವಾಗಿ ಕೆಲಸ ನಿರ್ವಹಿಸಿದರೆ ನಿಮಗೇ ಒಳ್ಳೆಯ ಹೆಸರು ಬರುತ್ತದೆ. ವಾರದಲ್ಲಿ ಒಂದು ದಿನ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಿಗೆ ಬೇಟಿ ನೀಡಿ ಪರಿಶೀಲಿಸಿ. ಶಾಲಾ ಕೊಠಡಿಗಳು, ಅಂಗನವಾಡಿಗಳು ಇನ್ನಿತರೆ ಶಾಶ್ವತ ಕಾಮಗಾರಿ ಕೆಲಸಗಳನ್ನು ಹೆಚ್ಚಾಗಿ ನಿರ್ವಹಿಸಿ. ಗ್ರಾಮದ ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ಕೊರತೆ ಬಾರದಂತೆ ಕೆಲಸ ನಿರ್ವಹಿಸಿ, ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಇರುವಂತೆ ನೋಡಿಕೊಳ್ಳಿ.
ನಾನು ಯಾರಿಗೂ ತೊಂದರೆ ನೀಡಲು ಬಂದಿಲ್ಲ. ಜನರಿಗೆ ಅನುಕೂಲ ಮಾಡಲು ಬಂದಿದ್ದೇನೆ. ಮನುಷ್ಯ ಎಂದ ಮೇಲೆ ತಪುö್ಪಗಳಾಗುವುದು ಸಹಜ. ತಪ್ಪನ್ನು ತಿದ್ದಿಕೊಂಡು, ಜನರಿಗೆ ಉತ್ತಮ ಕೆಲಸ ನಿರ್ವಹಿಸಿ ಎಂದು ಪಿಡಿಓ ಗಳಿಗೆ ಸೂಚಿಸಿದರು.
ಉಚಿತ ನೋಟ್ ಪುಸ್ತಕ ವಿತರಣೆ ಏಕಿಲ್ಲ :
ನನ್ನ ಅವಧಿಯಲ್ಲಿ ಎಲ್ಲಾ ಗ್ರಾ.ಪಂ ವ್ಯಾಪ್ತಿಗಳಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗ ನೋಟ್ ಪುಸ್ತಕಗಳನ್ನು ವಿತರಿಸುತ್ತಿದ್ದು, ಈಗ ಯಾಕೆ ನಿಲ್ಲಿಸಿದ್ದೀರಾ…?
ಈಗ ಮತ್ತೆ ಉಚಿತವಾಗಿ ನೋಟ್ ಪುಸ್ತಕಗಳನ್ನು ನೀಡಬೇಕು. ಯಾವ ರೀತಿ ಕೊಡಬೇಕು ನೀವೇ ಹೇಳಿ, ಒಟ್ಟನಲ್ಲಿ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ನೀಡಬೇಕು ಎಂದು ಸೂಚಿಸಿದರು.
ಕೋಟೆಕಲ್ಲಪ್ಪನ ದೇವಸ್ಥಾನದ ಬೋರ್ ವೆಲ್ ಮೋಟಾರ್ ಸುಟ್ಟು ಹೋಗಿದ್ದು, ನೀರಿನ ಸಂಪರ್ಕ ಕಡಿತಗೊಂಡಿದ್ದು, ನೀರಿಲ್ಲದೆ ಭಕ್ತಾಧಿಗಳಿಗೆ ತೊಂದರೆಯಾಗುತ್ತಿದೆ ಎನ್ನುವ ಆರೋಪಗಳಿವೆ. ಈ ಭಾಗದ ಪಿಡಿಓಗಳು ತಕ್ಷಣ ನೀರಿನ ವ್ಯವಸ್ಥೆ ಮಾಡಬೇಕು ಎಂದಾಗ ಸಮಸ್ಯೆ ರೆಡಿಯಾಗಿದೆ ಎಂದು ಪಿಡಿಓ ತಿಳಿಸಿದಾಗ, ಸರಿಯಾಗಿ ಹೇಳಿ, ಇಲ್ಲ ಯಾರಿಗಾದರೂ ಕರೆ ಮಾಡಿ ತಿಳಿದುಕೊಳ್ಳಿ, ಈಗಲೇ ಅಲ್ಲಿಗೆ ಯಾರನ್ನಾದರೂ ಕಳುಹಿಸಿ ಪರಿಶೀಲಿಸಲು ತಿಳಿಸುತ್ತೇನೆ ಸರಿಯಾಗಿ ಪದೇ ಪದೇ ಸಮಸ್ಯೆಯಾಗುತ್ತಿದೆ ಮತ್ತೆ ಸಮಸ್ಯೆಯಾಗದಂತೆ ಕ್ರಮ ವಹಿಸಿ ಎಂದು ಪಿಡಿಓ ಗೆ ಸೂಚಿಸಿದರು.
ಬಸವನಹಳ್ಳಿ ಗ್ರಾಮದಲ್ಲಿ ಅಂಗನವಾಡಿಗೆ ತೆಗೆದಿರಿಸಿದ್ದ ಸ್ಥಳದಲ್ಲಿ ಮನೆ ಕಟ್ಟಿಕೊಂಡಿದ್ದು, ಇವರಿಗೆ ನೋಟೀಸ್ ನೀಡಿದ್ದೀರಾ ಎಂದು ಸಿದ್ದಾಪುರ ಗ್ರಾಮದ ಹಿಂದಿನ ಪಿಡಿಓ ಗೌಡಪ್ಪನವರಿಗೆ ಕೇಳಿದಾಗ ಅದು ಕೋರ್ಟಿನಲ್ಲಿದೆ ಎಂದು ಪಿಡಿಓ ತಿಳಿಸಿದಾಗ, ಯಾವ ಕೋರ್ಟಿನಲ್ಲಿದೆ ತಿಳಿದುಕೊಂಡು ಹೇಳಬೇಕು. ಸುಳ್ಳು ಹೇಳಬಾರದು. ಅಂಗನವಾಡಿ ನಿರ್ಮಾಣವಾಗಬೇಕಾದ ಸ್ಥಳದಲ್ಲಿ ಮನೆ ಕಟ್ಟುತ್ತಾರೆ ಎಂದರೆ ಹೇಗೆ..? ಮನೆ ನಿರ್ಮಾಣ ಮಾಡುವವರೆಗೂ ನೀವೇನು ಮಾಡುತ್ತಿದ್ದೀರಾ, ಎಂದು ಪ್ರಶ್ನಿಸಿದರು.