ಹರೀಶಬಾಬು ಬಿ.ಹೆಚ್, ಕೊರಟಗೆರೆ
ಡಾ.ಜಿ.ಪರಮೇಶ್ವರ ಅವರ ರಾಜಕೀಯ ಜೀವನದ ಸ್ಪೂರ್ತಿಯೇ ರಾಜೀವ್‍ಗಾಂಧಿ. ಕೆಪಿಸಿಸಿ ಅಧ್ಯಕ್ಷರಾಗಿ ಸತತ 8ವರ್ಷ ಕಾಂಗ್ರೆಸ್ ಪಕ್ಷದ ಸೇವೆ ಮಾಡಿದ ಅನುಭವ. ರಾಜ್ಯದ ಡಿಸಿಎಂ-ಗೃಹ ಸೇರಿದಂತೆ ಹತ್ತಾರು ಉನ್ನತ ಸಚಿವ ಖಾತೆ ನಿರ್ವಹಿಸಿದ ಹಿರಿಮೆ. ಮಧುಗಿರಿ ಮತ್ತು ಕೊರಟಗೆರೆ ಕ್ಷೇತ್ರದಿಂದ 6ನೇ ಸಲ ಆಯ್ಕೆಯಾದ ಕಪ್ಪುಚುಕ್ಕೆ ಇಲ್ಲದ ಶಾಸಕ. ಕಲ್ಪತರು ನಾಡಿನ ಶೈಕ್ಷಣ ಕ ಕ್ಷೇತ್ರದ ಶಿಕ್ಷಣ ಭೀಷ್ಮ ಡಾ.ಜಿ.ಪರಮೇಶ್ವರ ರಾಜಕೀಯ ಕ್ಷೇತ್ರದ ಅಜಾತಶತ್ರು.
ಶಿಕ್ಷಣದಿಂದ ಮಾತ್ರ ಬಡತನ ನಿವಾರಣೆ ಸಾಧ್ಯ ಎಂಬ ಡಾ.ಬಿ.ಆರ್.ಅಂಬೇಡ್ಕರ್ ತತ್ವವನ್ನೇ ತನ್ನ ಸಿದ್ದಾಂತ ಮಾಡಿಕೊಂಡ ಡಾ.ಜಿ.ಪರಮೇಶ್ವರ ಕಲ್ಪತರು ನಾಡುಕಂಡ ನಿಜವಾದ ಶಿಕ್ಷಣಬೀಷ್ಮ ಎಂದರೇ ತಪ್ಪಾಗದು. ತುಮಕೂರು ವಿಶ್ವವಿದ್ಯಾಲಯ ಸ್ಥಾಪನೆಯ ರೂವಾರಿ ಮತ್ತು ಮಧುಗಿರಿ ಶೈಕ್ಷಣ ಕ ಜಿಲ್ಲೆಯ ಪ್ರಮುಖ ಆಧಾರಸ್ತಂಭ. 40ವರ್ಷಗಳ ರಾಜಕೀಯ ಅನುಭವ ಇರುವಂತಹ ಹಿರಿಯ ರಾಜಕಾರಣ ಡಾ.ಜಿ.ಪರಮೇಶ್ವರ ಸೌಮ್ಯ ಸ್ವಭಾವದ ಸರಳತೆಯ ಸವ್ಯಸಾಚಿಯು ಹೌದು.
ಕಾಂಗ್ರೆಸ್ ಪಕ್ಷದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಒಟ್ಟು 37ಜನ ಶಾಸಕರು ವಿಧಾನಸಭೆಗೆ ಆಯ್ಕೆ. ದಲಿತ ಸಿಎಂ ಕೂಗು ಚುನಾವಣೆ ವೇಳೆ ಪ್ರಚಾರಕ್ಕೆ ಮಾತ್ರ ಸಿಮೀತ ಅಷ್ಟೆ. ಕಳೆದ 70ವರ್ಷದಿಂದ ದಲಿತರಿಗೆ ಸಿಎಂ ಮಾಡ್ತೀವಿ ಎಂಬ ಭರವಸೆ ಮಾತ್ರ ನೀಡ್ತಾರೇ ಅಷ್ಟೆ ಆದರೇ ಅದು ಕಾರ್ಯರೂಪಕ್ಕೆ ಬರೋದು ಯಾವಾಗ ಎಂಬುದೇ ಯಕ್ಷಪ್ರಶ್ನೆ. ರಾಜಕೀಯ ಕ್ಷೇತ್ರದ ಅಜಾತಶತ್ರು ಡಾ.ಜಿ.ಪರಮೇಶ್ವರ ಈಗಾಗಲೇ ಡಿಸಿಎಂ ಆಗಿ ಸೇವೆ ಸಲ್ಲಿಸಿದ್ದು ಸಿಎಂ ಸ್ಥಾನಕ್ಕೆ ಇನ್ನೊಂದೇ ಮೆಟ್ಟಿಲು ಬಾಗಿ ಉಳಿದಿದೆ. ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಪರಮೇಶ್ವರಗೆ ಹೈಕಮಾಂಡ್ ಮುಂದೆಯಾದ್ರು ಸಿಎಂ ಸ್ಥಾನದ ಅವಕಾಶ ಮಾಡಿಕೊಡುವುದೇ ಎಂಬುದನ್ನ ಕಾದು ನೋಡಬೇಕಿದೆ.