ತುರುವೇಕೆರೆ:
ಓದಿನಷ್ಟೇ ಕ್ರೀಡೆಯೂ ಮಕ್ಕಳಿಗೆ ಅತಿಮುಖ್ಯವಾಗಿದ್ದು ಶಿಕ್ಷಕರು ಹಾಗು ಪೋಷಕರು ಮಕ್ಕಳಲ್ಲಿ ಕ್ರೀಢೆ ಬಗ್ಗೆ ವಿಶೇಷ ಆಶಕ್ತಿ ಮೂಡುವಂತೆ ಮಾಡಬೇಕಾಗಿದೆ ಎಂದು ಧೈಹಿಕ ಶಿಕ್ಷಣಧಿಕಾರಿ ಚಿದಾನಂದ್ ತಿಳಿಸಿದ್ದಾರೆ.
ಪಟ್ಟಣದ ವಿಶ್ವವಿಜಯ ವಿಧ್ಯಾಶಾಲೆ ಹಾಗು ರಿಯಾ ಪ್ಲೇಹೋಂ ವತಿಯಿಂದ ಶಾಲಾ ವಾರ್ಷಿಕ ಕ್ರೀಡಾಕೂಟ ಉಧ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಇತ್ತೀಚೆಗೆ ಮೊಬೈಲ್ ಹಾಗು ಟಿ.ವಿ ಮಾದ್ಯಮಗಳ ಹಾವಳಿಯಿಂದ ಮಕ್ಕಳಲ್ಲಿ ಕ್ರೀಡೆಗಳಲ್ಲಿ ಆಶಕ್ತಿ ಕಡಿಮೆಯಾಗುತ್ತಿದೆ. ಓದಿನಷ್ಟೇ ಕ್ರೀಡೆಯೂ ಮಕ್ಕಳಿಗೆ ಅತಿಮುಖ್ಯವಾಗಿದ್ದು ಶಿಕ್ಷಕರು ಹಾಗು ಪೋಷಕರು ಮಕ್ಕಳಲ್ಲಿ ಕ್ರೀಢೆ ಬಗ್ಗೆ ವಿಶೇಷ ಆಶಕ್ತಿ ಮೂಡುವಂತೆ ಮಾಡಬೇಕಾಗಿದೆ. ಸರ್ಕಾರ ಕ್ರೀಡೆಗೂ ಹೆಚ್ಚು ಸಹಕಾರ ನೀಡುತ್ತಿದ್ದು ಪೋಷಕರು ಇದರ ಸೌಲಭ್ಯ ಮಕ್ಕಳಿಗೆ ದೊರಕುವಂತೆ ಉತ್ತೇಜಿಸಬೇಕು ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ನಂ.ರಾಜು ಮಾತನಾಡಿ ಕ್ರೀಡೆಯಲ್ಲಿ ಸೋಲೆ ಗೆಲುವಿನ ಮೆಟ್ಟಿಲಾಗಿದ್ದು ಮರಳಿ ಯತ್ನವ ಮಾಡು ಎಂಬಂತೆ ಮಕ್ಕಳು ದೃತಿಗೆಡದೆ ಆಶಕ್ತಿಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸಿದರು.
ಶಾಲಾ ಕಾರ್ಯದರ್ಶಿ ಎಂ.ವಿಶ್ವೇಶ್ವರಯ್ಯ ದ್ವಜಾರೋಹಣ ನೆರವೇರಿಸಿ ಮಾತನಾಡಿ ನಮ್ಮ ಶಾಲಾ ಮಕ್ಕಳು ಓದಿನ ಜೊತೆ ಜೊತೆಯಲ್ಲೇ ಕ್ರೀಡೆಗಳಲ್ಲೂ ಹೆಚ್ಚು ಆಶಕ್ತಿ ವಹಿಸಿ ಜಿಲ್ಲೆ ಹಾಗು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿರುವುದಕ್ಕೆ ನಮಗೆ ಹೆಮ್ಮೆ ಎನಿಸಿದ್ದು ಇದರಲ್ಲಿ ಶಿಕ್ಷಕರ ಪಾತ್ರ ಹಾಗು ಪೋಷಕರ ಪ್ರೇರೇಪಣೆಯೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮಿಎಂ.ವಿಶ್ವೇಶ್ವರಯ್ಯ ಕ್ರೀಢಾಜ್ಯೋತಿಯನ್ನು ಸ್ವೀಕರಿಸಿದರು. ಶಿಕ್ಷಕಿ ಮಮತ ಮಕ್ಕಳಿಗೆ ಪ್ರಮಾಣ ವಚನ ಭೋಧಿಸಿದರೆ, ಶಿಕ್ಷಕಿ ಕುಮಾರಿ ಅಕ್ಷಿತಾ ಕ್ರೀಢಾವರದಿಯನ್ನು ಓದಿದರು.
ಶಾಲಾ ಅಧ್ಯಕ್ಷರಾದ ಹೆಚ್.ಬಿ.ಮಾಸ್ತಿಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಚಿದಂಬರೇಶ್ವರ ಉಚಿತ ಗ್ರಂಥಾಲಯದ ರಾಮಚಂದ್ರು, ಶ್ರೀಮತಿ ಲಲಿತರಾಮಚಂದ್ರು, ಸರಸ್ಪತಿ ಮುಖ್ಯ ಅತಿಥಿಗಳಾಗಿ ಪಾಲ್ಗೋಂಡಿದ್ದರು. ಶಿಕ್ಷಕಿ ಪ್ರೇಮ ಸ್ವಾಗತಿಸಿ, ಗೌರಾ ನಿರೂಪಿಸಿ, ಸುಮಿತ್ರ ವಂದಿಸಿದರು. ಕಾರ್ಯಕ್ರಮದಲ್ಲಿ ಪೋಷಕರು ಸೇರಿದಂತೆ ಶಿಕ್ಷಕಿಯರು ಹಾಗು ಮಕ್ಕಳು ಉಪಸ್ಥಿತರಿದ್ದರು.