ಪಾವಗಡ
ಪಟ್ಟಣದ ನೋಂದಣಿ ಕಚೇರಿಯಲ್ಲಿ ಗುರುವಾರ ಕಾವೇರಿ 2.0 ತಂತ್ರಾಂಶ ಮೊದಲ ನೋಂದಣಿ ವೆಂಕಟಸುಬ್ಬಯ್ಯ ಎಂಬವರು ಕೇವಲ10 ನಿಮಿಷಗಳ ಕಾಲದಲ್ಲಿ ನೋಂದಣಿ ಮಾಡಿಸಿ ಸ್ಥಳದಲ್ಲೇ ಪತ್ರ ವಿತರಿಸಲಾಯಿತ್ತು.
ನಂತರ ಮಾದ್ಯಮ ದವರಿಗೆ ಮಾತನಾಡಿದ ಜಿಲ್ಲಾ ನೋಂದಣಿ ಅಧಿಕಾರಿ ಶಶಿಕಲಾ ಜಿಲ್ಲಾ ಇದು ಕೊನೆಯ ಕಾವೇರಿ- 2.0 ತಂತ್ರಾಂಶ ಅಳವಡಿಕೆ ಕಾರ್ಯ ಪ್ರರಂಭೋತ್ಸ್ವ ಮಾಡಲಾಯಿತ್ತು ಇನ್ನೂ ಮತ್ತಷ್ಟು ವೇಗ ಮತ್ತು ಸುಲಭಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಕ್ರಮಕೈಗೊಳ್ಳಲಾಗುತ್ತಿದೆ. 10 ನಿಮಿಷಗಳಲ್ಲಿಯೇ ಆಸ್ತಿ ನೋಂದಣಿಯನ್ನು ಪೂರ್ಣಗೊಳಿಸುವ ಸೇವೆ ಒದಗಿಸಲಾಗಿದೆ.
ಅಸ್ತಿ ನೋಂದಣಿ ಕಾರ್ಯಗಳಿಗೆ ತಿಂಗಳುಗಟ್ಟಲೆ ಸರ್ಕಾರಿ ಕಚೇರಿ ಅಲೆದಾಡುವ ಕೆಲಸ ಇನ್ನು ಮುಂದೆ ಇರುವುದಿಲ್ಲ. ಕೇವಲ 10 ನಿಮಿಷದಲ್ಲಿಯೇ ಆಸ್ತಿ ನೋಂದಣಿ ಕಾರ್ಯ ಪೂರ್ಣಗೊಳ್ಳಿಸಬಹುದಾಗಿದೆ.
ಸ್ಥಿರಾಸ್ತಿ, ಚರಾಸ್ತಿ ದಸ್ತಾವೇಜು, ನೋಂದಣಿ ಪ್ರಕ್ರಿಯೆಯನ್ನು ಸುರಕ್ಷತಾ ಕ್ರಮಗಳ ಜತೆಗೆ 10 ನಿಮಿಷದಲ್ಲೇ ಪೂರ್ಣಗೊಳಿಸಿ ನೋಂದಣಿ ದಾಖಲೆ ಪಡೆಯಲು ಸಾಧ್ಯವಾಗುವಂತೆ ರೂಪಿಸಲಾಗಿರುವ ನೂತನ ‘ಕಾವೇರಿ- 2.0’ ತಂತ್ರಾಂಶವು ಜೂನ್ 25ರ ಹೊತ್ತಿಗೆ ರಾಜ್ಯದ ಎಲ್ಲ260 ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಬಳಕೆಗೆ ಲಭ್ಯವಾಗಲಿದೆ.
ಬಳಕೆದಾರರೇ ಅಗತ್ಯ ವಿವರ, ದಾಖಲೆ ಅಪ್‍ಲೋಡ್ ಮಾಡಿ ಶುಲ್ಕ ಪಾವತಿಸಿ ನಿರ್ದಿಷ್ಟ ಸಮಯ ಗೊತ್ತುಪಡಿಸಿಕೊಂಡು ನೋಂದಣಿಗೆ ಸಮಯ ನಿಗದಿಪಡಿಸಿಕೊಳ್ಳಲು ‘ಕಾವೇರಿ- 2.0’ ತಂತ್ರಾಂಶ ಅವಕಾಶ ನೀಡುತ್ತದೆ. ಹೊಸ ತಂತ್ರಾಂಶವು ಈಗಾಗಲೇ 24 ಉಪನೋಂದಣಾಧಿಕಾರಿ ಕಚೇರಿಯಲ್ಲಿಬಳಕೆಯಲ್ಲಿದೆ. ಬಳಕೆ, ನಿರ್ವಹಣೆಯಲ್ಲಿಎದುರಾಗುವ ಅಡಚಣೆ, ಸಮಸ್ಯೆ, ಸವಾಲುಗಳನ್ನು ಗುರುತಿಸಿ ಸರಿಪಡಿಸಿಕೊಳ್ಳುತ್ತ ಹಂತಹಂತವಾಗಿ ರಾಜ್ಯಾದ್ಯಂತ ವಿಸ್ತರಿಸುವ ಕಾರ್ಯವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕೈಗೊಂಡಿದೆ.
ಪಾಸ್‍ಪೆÇೀರ್ಟ್ ಕಚೇರಿ ಮಾದರಿಯಲ್ಲೇ ನೋಂದಣಿ ಸೇವೆ ಕಲ್ಪಿಸಲು ಪ್ರಯತ್ನ ನಡೆದಿದೆ. ಅದಕ್ಕೆ ಪೂರಕವಾಗಿ ಕಚೇರಿಗಳ ನವೀಕರಣ, ಪುನರ್‍ವಿನ್ಯಾಸ ಕಾರ್ಯವೂ ಪ್ರಗತಿಯಲ್ಲಿದೆ. ಕಚೇರಿಯಲ್ಲಿಉಪನೋಂದಣಾಧಿಕಾರಿ ಕೊಠಡಿಗೆ ಅಭಿಮುಖವಾಗಿ ಸಾಲಾಗಿ ಕೌಂಟರ್‍ಗಳಿರಲಿವೆ. ಬಳಕೆದಾರರು ನೋಂದಾಯಿಸಿಕೊಂಡ ಸಮಯಕ್ಕೆ ಯಾವ ಕೌಂಟರ್‍ಗೆ ಹೋಗಬೇಕು ಎಂಬ ಮಾಹಿತಿ ನೀಡಲಾಗುತ್ತದೆ. ಕೌಂಟರ್‍ನಲ್ಲಿಕೇವಲ ನೋಂದಣಿ ಮಾಡಿಕೊಡುವ ಮತ್ತು ನೋಂದಣಿ ಮಾಡಿಸಿಕೊಳ್ಳುವ ವ್ಯಕ್ತಿಗಳ ಭಾವಚಿತ್ರ ಮತ್ತು ಬೆರಳಚ್ಚು ಪಡೆಯುವ ಪ್ರಕ್ರಿಯೆ ಮಾತ್ರ ನಡೆಯಲಿದೆ.ಕಾವೇರಿ ತಂತ್ರಾಂಶ ಅಪ್ಡೇಡ್; ಶೀಘ್ರದಲ್ಲಿಯೇ ಮನೆಯಿಂದಲೇ ಆಸ್ತಿ ನೋಂದಣಿ ಮತ್ತಿತರ ಸೇವೆ ಲಭ್ಯ.ನೋಂದಣಿ ಪ್ರಮಾಣ ಹೆಚ್ಚ
ಕೇವಲ 10- 15 ನಿಮಿಷದಲ್ಲಿಇಡೀ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಏಕೆಂದರೆ ನೋಂದಣಿಗೆ ಬರುವ ಮೊದಲೇ ಹಲವು ಸುತ್ತಿನಲ್ಲಿಎಲ್ಲಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಬಾಕಿ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳ್ಳಲಿದೆ. ಹಾಗಾಗಿ ಸರಾಸರಿ ನೋಂದಣಿ ಪ್ರಮಾಣವು ‘ಕಾವೇರಿ- 2.0’ ತಂತ್ರಾಂಶ ಬಳಕೆಯಿಂದಾಗಿ ದುಪ್ಪಟ್ಟಾಗುವ ನಿರೀಕ್ಷೆ ಇದೆ. ಎಂದು ಸಹಾಯಕ ನೋಂದಣಿ ಮಹಾಪರಿವೀಕ್ಷಕರು (ಗಣಕೀಕರಣ) ಎಚ್.ಎಲ್. ಪ್ರಭಾಕರ ತಿಳಿಸಿದರು.
ನಗದು ರೂಪದಲ್ಲಿ ಶುಲ್ಕ ಪಾವತಿ ಇಲ್ಲ
‘’ಎಲ್ಲಿಯೂ ನಗದು ರೂಪದಲ್ಲಿ ಶುಲ್ಕ ಪಾವತಿಗೆ ಅವಕಾಶವಿಲ್ಲ. ಆನ್‍ಲೈನ್ ಪೇಮೆಂಟ್, ಯುಪಿಐ, ಕ್ರೆಡಿಟ್/ ಡೆಬಿಟ್ ಕಾರ್ಡ್, ಚೆಕ್/ ಡಿಡಿ ಮೂಲಕವೇ ಶುಲ್ಕ ಪಾವತಿಸಬೇಕು’’ ಎಂದು ವಿವರಿಸಿದರು.
ಬಳಕೆದಾರ ಸ್ನೇಹಿ ತಂತ್ರಾಂಶ : ನೂತನ ‘ಕಾವೇರಿ- 2.0’ ತಂತ್ರಾಂಶದಡಿ ಬಳಕೆದಾರರು ಸರಳ ವಿಧಾನದ ಮೂಲಕ ಅಗತ್ಯ ಮಾಹಿತಿಗಳೊಂದಿಗೆ ಉದ್ದೇಶಿತ ಆಸ್ತಿಯ ವಿವರವನ್ನು ದಾಖಲಿಸಬೇಕು. ಆಗ ಆಸ್ತಿಯ ಸದ್ಯದ ಸ್ಥಿತಿಗತಿ ಗೊತ್ತಾಗಲಿದೆ. ಏನಾದರೂ ವ್ಯಾಜ್ಯ, ತಡೆಯಾಜ್ಞೆ ಇದ್ದರೆ ಆ ಹಂತದಲ್ಲಿಯೇ ಪ್ರಕ್ರಿಯೆ ಸ್ಥಗಿತವಾಗಲಿದೆ. ಆಸ್ತಿಯು ವ್ಯಾಜ್ಯ ಮುಕ್ತವಾಗಿದ್ದರೆ ಮಾತ್ರ ಆಸ್ತಿಯ ಸ್ವರೂಪ ಆಧರಿಸಿ ಮಾರ್ಗಸೂಚಿ ದರ ಮತ್ತಿತರ ವಿವರ ಲಭ್ಯವಾಗಲಿದೆ. ಎಲ್ಲವಿವರ, ದಾಖಲೆಗಳು ಸಮರ್ಪಕವಾಗಿದ್ದರೆ ಶುಲ್ಕ ಪಾವತಿಗೆ ಅವಕಾಶವಾಗಲಿದೆ. ನಂತರ ಲಭ್ಯವಿರುವ ದಿನ, ಸಮಯವನ್ನು ಬಳಕೆದಾರರೇ ಆಯ್ಕೆ ಮಾಡಿಕೊಂಡು ಆ ದಿನ ನಿಗದಿತ ಸಮಯಕ್ಕೆ 15 ನಿಮಿಷ ಮೊದಲೇ ಅಲ್ಲಿಗೆ ತೆರಳಿದರೆ ಮುಂದಿನ ಪ್ರಕ್ರಿಯೆ ಸಲೀಲು. ಎಲ್ಲಮಾಹಿತಿಗಳನ್ನೂ ಸ್ವತಃ ಬಳಕೆದಾರರೇ ಭರ್ತಿ ಮಾಡಬೇಕಿರುವುದರಿಂದ ಕಾಗದಪತ್ರಗಳಲ್ಲಿ ದೋಷ, ತಪ್ಪುಗಳಿಗೆ ಮುಕ್ತಿ ಸಿಗಲಿದೆ. ಇದೇ ವೇಳೆ ತಾಲೂಕಿನ ಹಿರಿಯ ಪತ್ರ ಬರಹಗಾರರಾದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸತೀಶ್. ರವಿಚಂದ್ರನ್. ಸಿ.ಕೆ.ಪುರ ವೆಂಕಟೇಶ್. ಶ್ರೀನಾಥ್. ರಾಜು.ಪ್ರಶಾಂತ. ಜೈ.ಪಾಲ್.ಇತರರು ಇದ್ದರು