ತುಮಕೂರು


ಶಾಲಾ ಸಂಸತ್ ಚುನಾವಣೆ ಮುಖಾಂತರ ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಸಾಗಿದ್ದು, ಮಕ್ಕಳಿಗೆ ಚಿಕ್ಕಂದಿನಿAದಲೇ ಚುನಾವಣಾ ಮಜಲುಗಳನ್ನು ಅರಿಯಲು ನೆರವಾಗಲಿದೆ ಎಂದು ಮೂಖೋಪಾಧ್ಯಾಯರು ಹಾಗೂ ಇಂದಿನ ಶಾಲಾ ಸಂಸತ್ ಚುನಾವಣೆಯ ಚುನಾವಣಾಧಿಕಾರಿಗಳೂ ಆದ ಎನ್.ಸಿ.ಯಶೋಧಮ್ಮ ತಿಳಿಸಿದರು.
ಶನಿವಾರ ಬೆಳಗ್ಗೆ ತಾಲ್ಲೂಕಿನ ಹೆಗ್ಗೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಡೆದ ಶಾಲಾ ಸಂಸತ್ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾಯಾಗಿ ಕಾರ್ಯನಿರ್ವಹಿಸಿ ಮಾತನಾಡಿದ ಅವರು, ಆಯಾ ವರ್ಷದ ವಿದ್ಯಾರ್ಥಿ ನಾಯಕರ ಆಯ್ಕೆ ಪ್ರಕ್ರಿಯೆ ಚುನಾವಣೆಯ ಮೂಲಕ ಸಾಗುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಚುನಾವಣೆಯ ಅರಿವು ಮೂಡಿಸುವ ಹಾಗೂ ದೇಶದ ರಾಜಕೀಯ ವ್ಯವಸ್ಥೆಯನ್ನು ತಿಳಿಯುವಲ್ಲಿ ಸಹಕಾರಿಯಾಗಿದೆ ಎಂದರು.
ಚುನಾವಣೆಯ ವಿಶೇಷ ತನಿಖಾಧಿಕಾರಿಗಳಾಗಿ ಆಗಮಿಸಿದ್ದ ಸಿ.ಆರ್.ಪಿ. ರೂಪಾ ಅವರು ಮಾತನಾಡಿ, ಈ ಶಾಲಾ ಸಂಸತ್ ಕಾರ್ಯಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಮಾದರಿಯಾಗಿದೆ. ಶಾಲಾ ಮಕ್ಕಳಲ್ಲಿ ನಾಗರೀಕ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ ಎಂಬುದನ್ನು ಮನಗಾಣಿಸುವುದೇ ಶಾಲಾ ಸಂಸತ್ತು ಕಾರ್ಯಕ್ರಮದ ಮೂಲ ಧ್ಯೇಯ ಎಂದರು.
ಶನಿವಾರ ಮುಂಜಾನೆ ತರಗತಿ ಆರಂಭವಾಗುತ್ತಿದ್ದAತೆ ಚುನಾವಣಾ ಪ್ರಕ್ರಿಯೆ ಆರಂಭವಾಯಿತು. ಶಾಲೆಯ ಪಡಸಾಲೆಯಲ್ಲಿ ಮತಗಟ್ಟೆಯನ್ನು ನಿರ್ಮಿಸಲಾಗಿತ್ತು, ಮೊಬೈಲ್ ಫೋನ್ ಅಪ್ಲಿಕೇಷನ್‌ನಲ್ಲಿ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿತ್ತು, ಸಾಮಾನ್ಯ ಚುನಾವಣೆಗಳಂತೆಯೇ ಶಾಲೆಯಲ್ಲೂ ಸಹ ೨೦೩ ಮತದಾರ ಮಕ್ಕಳ ಪಟ್ಟಿಯನ್ನು ಸಿದ್ಧಪಡಿಸಿ, ಆಧಾರ್ ಕಾರ್ಡ್ಗಳನ್ನು ಗುರುತಿನ ಚೀಟಿಗಳಂತೆ ಪರಿಶೀಲಿಸಿ ತೋರ್ಬೆರಳಿಗೆ ಸಾಮಾನ್ಯ ಇಂಕಿನ ಶಾಹಿಯನ್ನು ಹಚ್ಚಲಾಗುತ್ತಿತ್ತು. ಸರತಿ ಸಾಲಿನಲ್ಲಿ ನಿಂತಿದ್ದ ಮಕ್ಕಳು, ಶಿಸ್ತಿನಿಂದ ಒಬ್ಬೊಬ್ಬಾಗಿ ಬಂದು ಮತ ಚಲಾಯಿಸುತ್ತಿದ್ದುದು ವಿಶೇಷವಾಗಿತ್ತು.
ಮತದಾನಕ್ಕೂ ಮೊದಲು, ಶಾಲೆಯ ೨೮ ವಿದ್ಯಾರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದರು. ನಂತರ ಮೂವರು ಅರ್ಜಿ ವಾಪಸ್ ಪಡೆದು, ೨೫ ವಿದ್ಯಾರ್ಥಿಗಳು ಅಂತಿಮ ಕಣದಲ್ಲಿ ಉಳಿದರು. ಮತದಾನ ಮತ್ತು ಮತ ಎಣಿಕೆ ಕಾರ್ಯ ಪೂರ್ಣಗೊಳಿಸಿ ಒಟ್ಟು ೧೮ ಮಂದಿ ವಿದ್ಯಾರ್ಥಿಗಳನ್ನು ಶಾಲಾ ಸಂಸದರನ್ನಾಗಿ ಆಯ್ಕೆ ಮಾಡಲಾಯಿತು.
ಸೆಕ್ಟರ್ ಆಫೀಸರ್ ಆಗಿ ಶಿಕ್ಷಕಿ ವಾಣಿಶ್ರೀ, ಪ್ರೋ ಆಫೀಸರ್ ಆಗಿ ಶಿಕ್ಷಕ ಮಲ್ಲಿಕಾರ್ಜುನಯ್ಯ ಹೆಚ್.ಆರ್., ಎ.ಆರ್.ಪಿಓ ಆಗಿ ಶಿಕ್ಷಕಿ ಶಶಿಕಲಾ ಹೆಚ್.ಡಿ., ಪಿಓ೨ ಆಗಿ ಶಿಕ್ಷಕಿ ಲಕ್ಷಿö್ಮÃ ಪಿ.ಎ., ಪಿಓ೩ ಆಗಿ ಶಿಕ್ಷಕಿ ಸುಧಾ ಸಿ.ಎನ್., ರಕ್ಷಣಾಧಿಕಾರಿಗಳಾಗಿ ಶಿಕ್ಷಕಿಯರಾದ ರಾಧಾಮಣಿ, ನವೀದಾ ಅಕ್ತರ್, ಫರ್ಜನಾ ಹಾಗೂ ಶಾಲಾ ಸಂಸತ್ ಚುನಾವಣೆಯ ಪ್ರಾಯೋಜಕರಾಗಿ ಶಿಕ್ಷಕಿ ಕಮಲ ಕೆ. ಕಾರ್ಯರ್ನಿಹಿಸಿದರು. ಶಾಲಾ ಎಸ್‌ಡಿಎಂಸಿ ಸಮಿತಿಯವರು ಹಾಗೂ ಪೋಷಕರು ಸಹಕಾರ ನೀಡಿದರು.

(Visited 1 times, 1 visits today)