ತುಮಕೂರು


ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿ ಸ್ವಾಭಿಮಾನಿಗಳಾಗಿ ಸಮಾಜದ ಬೆಳಕಾಗಿ ಬೆಳೆಯಬೇಕಾಗಿದೆ ಎಂದು ಮಾಜಿ ಸಚಿವ ಹಾಗೂ ಶಿರಾ ಕ್ಷೇತ್ರದ ಶಾಸಕ ಟಿಬಿ ಜಯಚಂದ್ರ ತಿಳಿಸಿದ್ದಾರೆ.
ಪಟ್ಟಣದ ಅಮಾನಿಕೆರೆ ರಸ್ತೆಯ ಕನ್ನಡ ಭವನದಲ್ಲಿ ಕುಂಚಶ್ರೀ ಮಹಿಳಾ ಬಳಗದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ ಗ್ರಾಮಾಂತರ ಪ್ರದೇಶದ ಹೆಣ್ಣು ಮಕ್ಕಳವಿದ್ಯಾಭ್ಯಾಸಕ್ಕಾಗಿ ಕುಂಚಿಟಿಗ ಸಮಾಜದ ಸಂಘ ಸಂಸ್ಥೆಗಳು ಮುಂದೆ ಬರಬೇಕಾಗಿದೆ ಮತ್ತು ಎಲ್ಲಾ ರೀತಿಯ ಪ್ರೋತ್ಸಾಹ ನೀಡಬೇಕಾಗಿದೆ ಈ ಹಿಂದೆ ಹೆಣ್ಣು ಮಕ್ಕಳು ಕೇವಲ ಮನೆಗೆ ಸೀಮಿತರಾಗಿದ್ದರು ಆದರೆ ಇಂದು ಮನೆಯಿಂದ ಹೊರಬಂದು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಹೊರಟಿರುವುದು ಸಂತಸದ ವಿಷಯ ಎಂದರು.
ಪೋಲಿಸ್ ಇಲಾಖೆಯ ನಿವೃತ್ತ ಇನ್ಸ್ಪೆಕ್ಟರ್ ಜನರಲ್ ಎಚ್ ಎಸ್ ರೇವಣ್ಣ ಮಾತನಾಡಿ ನಮ್ಮ ಜನಾಂಗದಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು ಅವರನ್ನು ಪ್ರೋತ್ಸಾಹಿಸಬೇಕಾಗಿದೆ ಅದೇ ರೀತಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವವರನ್ನು ಪ್ರೋತ್ಸಾಹಿಸಬೇಕು ಪೋಷಕರು ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿ ಮಾಡದೆ ಸಂಸ್ಕಾರವAತರನ್ನಾಗಿ ಮಾಡಬೇಕು ಎಂದು ತಿಳಿಸಿದರು ಅಸಿಸ್ಟೆಂಟ್ ಕಂಟ್ರೋಲರ್ ಶ್ರೀಮತಿ ಶಿಲ್ಪ ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಗುರಿ ಇರಬೇಕು ಅದಕ್ಕಾಗಿ ಬೇಕಾದ ಕಠಿಣ ಪರಿಶ್ರಮ ಶ್ರದ್ಧೆ ಇದ್ದಾಗ ಗುರಿ ಮುಟ್ಟಲು ಸಾಧ್ಯ ಎಂದರು.
ಜಿಲ್ಲಾ ಖಜಾನೆ ಅಧಿಕಾರಿ ಸುಷ್ಮಾ ಜೆ ಪಿ ಮಾತನಾಡಿ ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಸದೆ ಪುಸ್ತಕ ಓದುವವ್ಯಾಸ ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಕುAಚಶ್ರೀ ಮಹಿಳಾ ಬಳಗದ ಅಧ್ಯಕ್ಷರು ಹಾಗೂ ರಾಜ್ಯ ಕುಂಚಿಟಿಗರ ಸಂಘ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಲಲಿತಾ ಮಲ್ಲಪ್ಪ ಅಧ್ಯಕ್ಷತೆ ವಹಿಸಿ.ಮಾತನಾಡಿ. ಜನಾಂಗದಲ್ಲಿ ಹೆಚ್ಚು ಹೆಚ್ಚು ಮಕ್ಕಳು ಪ್ರತಿಭಾವಂತರಿದ್ದು. ಅವರಿಗೆ ಅನುಕೂಲವಾಗಲು ಕುಂಚಿಟಿಗ ಜನಾಂಗವನ್ನು ಕೇಂದ್ರ ಓ ಬಿ ಸಿ ಪಟ್ಟಿಗೆ ಸೇರಿಸಲು ಜನಾಂಗದ ಶಾಸಕರು ಮುಂದೆ ಬರಬೇಕಾಗಿದೆ ಅದೇ ರೀತಿ ಜನಾಂಗದಲ್ಲಿರುವ ಪ್ರತಿಭಾವತರನ್ನು ಸಾಧಕರನ್ನು ಗುರುತಿಸುವ ಕೆಲಸ ಆಗಬೇಕಾಗಿದೆ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕಾಗಿದೆ ನಂದು ಕಲಿತರೆ ಶಾಲೆ ಎಂದು ತೆರೆದಂತೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಂಚಟಿಗ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರಾದ ದೊಡ್ಡ ಲಿಂಗಪ್ಪ ಹಾಜರಿದ್ದರು ಪೂರ್ವಿ ಮಹೇಶ್ ಪ್ರಾರ್ಥಿಸಿದರು ಶಾರದ ರಂಗರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.ಶ್ರೀದೇವಿ ಪ್ರಾಸ್ತಾವಿಕ ನುಡಿಗಳ ನಾಡಿದರು ಸುವರ್ಣಮುಖಿ ಸ್ವಾಗತಿಸಿ ಸಾವಿತ್ರಿ ಸುರೇಶ್ ಒಂದಿಸಿದರುಕುAಚಶ್ರೀ ಮಹಿಳಾ ಬಳಗದ ಪದಾಧಿಕಾರಿಗಳಾದ. ರತ್ನ ನಾಗರಾಜು ಕಾತ್ಯಾಯಿನಿ ಪ್ರಭಾಕರ್ ಶೈಲಜಾ ಬಾಬು ಲಕ್ಷ್ಮಿ ರಾಜಶೇಖರ್ ಪುಷ್ಪಲತಾ ಆಶಾ ನಟರಾಜು ಮತ್ತಿತರರು ಹಾಜರಿದ್ದರು

(Visited 1 times, 1 visits today)