ಗುಬ್ಬಿ :

ತುಳಿತಕ್ಕೆ ಒಳಗಾದ ದಲಿತರಿಗೆ ಶಕ್ತಿ ನೀಡುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಲು ದಲಿತರ ಮತಗಳ ಒಗ್ಗಟ್ಟು ಕಾರಣ. ಈ ಸರ್ಕಾರದ ಒಲವು ಜೊತೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ದೀನ ದಲಿತರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.
ಪಟ್ಟಣದ ಎಸ್.ಎಂ.ಪ್ಯಾಲೇಸ್ ನಲ್ಲಿ ಗುಬ್ಬಿ ಮಾದಿಗ ಮಹಾಸಭಾ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮುಂದುವರೆದ ಜನಾಂಗ ಮೊದಲಿಂದಲೂ ದಲಿತರನ್ನು ತುಳಿದು ಬದುಕುವ ಕೆಲಸ ಮಾಡಿದೆ. ಇದರಿಂದ ಮುಕ್ತಿ ಕಾಣಲು ದಲಿತರು ಶೈಕ್ಷಣಿಕ ಪ್ರಗತಿ ಹೊಂದಬೇಕು ಎಂದು ಕರೆ ನೀಡಿದರು.
ದಲಿತರ ಏಳಿಗೆಗೆ ಸಿದ್ದರಾಮಯ್ಯ ಅವರ ಕಾಳಜಿ ಅಧಿಕಾರಕ್ಕೆ ಬಂದ ತಕ್ಷಣ ಕಂಡಿದೆ. ಯಾವುದೇ ಅನುದಾನದ ಗುತ್ತಿಗೆಯಲ್ಲಿ ಮೀಸಲಾತಿ ಇದ್ದ ೫೦ ಲಕ್ಷ ರೂಗಳನ್ನು ಒಂದು ಕೋಟಿಗೆ ಹೆಚ್ಚಿಸಿ ಗುತ್ತಿಗೆ ಮೂಲಕ ದಲಿತರಿಗೆ ಆರ್ಥಿಕ ಸದೃಢತೆ ನೀಡಿದ್ದಾರೆ. ಇಂತಹ ಅವಕಾಶ ಬಳಸಿ ನಿರುದ್ಯೋಗ ಯುವಕರು ಕೆಲಸ ಮಾಡಬೇಕು. ಅದನ್ನು ಬಿಟ್ಟು ಬೇರೆ ಜಂಜಾಟ ನೋಡಬಾರದು ಎಂದ ಅವರು ಕಳೆದ ೩೦ ವರ್ಷದ ಹಿಂದೆ ಜಾತಿ ವ್ಯವಸ್ಥೆ ಧಿಕ್ಕರಿಸಿದವನು ನಾನು. ಅಂದೇ ಸಹ ಪಂಕ್ತಿ ಭೋಜನಕ್ಕೆ ಚಾಲನೆ ನೀಡಿದೆ. ಎಲ್ಲರನ್ನೂ ಸಮಾನವಾಗಿ ಕಾಣುವ ಗುಣ ಇಂದಿಗೂ ಇರುವ ಕಾರಣವೇ ನನ್ನನ್ನು ದಲಿತರು ಕೈ ಹಿಡಿದಿದ್ದಾರೆ ಎಂದರು.
ಸಿರಿವAತರ ಪರ ಎಂದೂ ಕೆಲಸ ಮಾಡದ ನನ್ನ ನಡವಳಿಕೆ ಎಲ್ಲರಿಗೂ ತಿಳಿದಿದೆ. ಬೆಳಿಗ್ಗೆಯಿಂದ ರಾತ್ರಿವರೆಗೆ ಜನರ ಮಧ್ಯೆ ಕೆಲಸ ಮಾಡುತ್ತೇನೆ. ಯಾವ ಜಾತಿ ಧರ್ಮ ನೋಡದೆ ಕಷ್ಟ ಅಲಿಸುತ್ತೇನೆ. ಆದರೆ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿ ಕೆಲಸ ಮಾಡಿತ್ತು. ಯಾವುದೇ ಬಡವರ ಯೋಜನೆಗೆ ಚಾಲನೆ ನೀಡಲಿಲ್ಲ. ಆದರೂ ಶೇಕಡಾ ೯೦ ರಷ್ಟು ದಲಿತರ ಕಾಲೋನಿಗೆ ರಸ್ತೆ, ನೀರು ವ್ಯವಸ್ಥೆ ಮಾಡಿದ್ದೇನೆ ಎಂದ ಅವರು ನಾನು ಜಿಲ್ಲಾ ಪಂಚಾಯಿತಿ ಮೂಲಕ ರಾಜಕೀಯ ಕಾಂಗ್ರೆಸ್ ಮೂಲಕ ಆರಂಭಿಸಿದ್ದೆ. ನಂತರ ಕುಮಾರಸ್ವಾಮಿ ಕರೆದರು ಅಂತ ಜೆಡಿಎಸ್ ಹೋದೆ. ನಂತರ ಹೊರದಬ್ಬಿದ ಸಮಯ ದೀನ ದಲಿತರು, ಬಡವರು ಕೈ ಹಿಡಿದರು ಎಂದು ತಿಳಿಸಿದರು.
ಗುಬ್ಬಿ ಮಾದಿಗ ಮಹಾಸಭಾ ಅಧ್ಯಕ್ಷ ಕೊಡಿಯಾಲ ಮಹದೇವು ಮಾತನಾಡಿ ವಾಸಣ್ಣ ಅವರ ಹೆಸರು ಇಂದು ದಲಿತರಿಗೆ ಶಕ್ತಿ ತಂದಿದೆ. ತಾಲ್ಲೂಕಿನ ಎಲ್ಲಾ ದಲಿತ ಕಾಲೋನಿಗೆ ಕೆಲಸ ಮಾಡಿದ್ದಾರೆ. ಜೊತೆಗೆ ದಲಿತ ಮುಖಂಡರು ಕಾರ್ಯಕರ್ತರನ್ನು ಹೆಚ್ಚು ಗಮನ ಹರಿಸಿ ರಾಜಕೀಯ ಶಕ್ತಿ ತುಂಬಿದ್ದಾರೆ. ಅವರ ಸೋಲಿಗೆ ಪಣ ತೊಟ್ಟಿದ್ದ ಬಹಳ ಮಂದಿಗೆ ಬುದ್ದಿ ಕಲಿಸುವ ಕೆಲಸ ದಲಿತರು ಮಾಡಿದರು ಎಂದರು.
ಜಿಪA ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್ ಮಾತನಾಡಿ ದಲಿತರು ಮತ ನೀಡಿದ ಹಿನ್ನಲೆ ಐದನೇ ಬಾರಿ ಗೆಲುವು ಸಾಧಿಸಿದೆ ಎಂದು ಸದಾ ಸ್ಮರಿಸುವ ವಾಸಣ್ಣ ಇನ್ನೂ ೨೦ ವರ್ಷ ಶಾಸಕರಾಗಿ ಆಯ್ಕೆ ಆಗುತ್ತಲೇ ಇರುತ್ತಾರೆ ಎಂದರು.
ಮುಖAಡ ದಾಸರಕಲ್ಲಹಳ್ಳಿ ನಾರಾಯಣಪ್ಪ ಮಾತನಾಡಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ವಾಸಣ್ಣನವರಿಗೆ ಎಲ್ಲಾ ಸಚಿವರು ಪರಿಚಿತರಾದ್ದರಿಂದ ಗರಿಷ್ಠ ಕೆಲಸಗಳನ್ನು ತಂದು ಕ್ಷೇತ್ರ ಅಭಿವೃದ್ದಿ ಮಾಡಬಹುದು. ಈ ಜೊತೆಗೆ ದಲಿತ ಸಮುದಾಯವನ್ನು ಕೈ ಹಿಡಿದು ಮುನ್ನಲೆಗೆ ತರಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಮುಖಂಡರಾದ ಚೇಳೂರು ಶಿವನಂಜಪ್ಪ, ನಿಟ್ಟೂರು ರಂಗಸ್ವಾಮಿ, ಚಂದ್ರಣ್ಣ, ಅಂತೂರಯ್ಯ, ದಿವಾಕರಯ್ಯ, ಜಿ.ವಿ.ಮಂಜುನಾಥ್, ಮಮತಾ, ಲಕ್ಷ್ಮೀದೇವಮ್ಮ, ಡಾ.ಕೆಂಪರಾಜು, ಶಿವಮ್ಮ, ಈಶ್ವರಯ್ಯ, ಆನಂದ್, ಮಧು, ನಾಗಭೂಷಣ, ಎನ್.ಎ.ನಾಗರಾಜು ಇತರರು ಇದ್ದರು.

(Visited 1 times, 1 visits today)