ಗುಬ್ಬಿ


ವನ ಮಹೋತ್ಸವ ಅಂಗವಾಗಿ ಗುಬ್ಬಿ ತಾಲ್ಲೂಕಿನಲ್ಲಿ ಕೋಟಿ ವೃಕ್ಷ ಆಂದೋಲನಕ್ಕೆ ಅರಣ್ಯ ಇಲಾಖೆ ನಮ್ಮ ಗಿಡ ನಮ್ಮ ಹೆಮ್ಮೆ, ನಮ್ಮ ಹಸಿರು ನಮ್ಮ ಗುಬ್ಬಿ ಘೋಷಣೆಯಡಿ ಪ್ರತಿಜ್ಞಾ ವಿಧಿ ಬೋಧಿಸಿ ಸಸಿ ನೆಡಲಾಯಿತು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕರ‍್ಯಾಲಯದ ಆವರಣದಲ್ಲಿ ಸಾಂಕೇತಿಕವಾಗಿ ಸಸಿ ನೆಟ್ಟು ಕರ‍್ಯಕ್ರಮಕ್ಕೆ ಚಾಲನೆ ನೀಡಿ ರ‍್ಕಾರಿ ಶಾಲೆಗಳ ಆವರಣ, ಉದ್ಯಾನವನ, ಖಾಲಿ ಇರುವ ರ‍್ಕಾರಿ ಜಾಗದಲ್ಲಿ ಸಸಿ ನೆಡುವ ಸಪ್ತಾಹ ಆಂದೋಲನ ನಡೆಸಿ ಈ ಜೊತೆಗೆ ಆಸಕ್ತ ಪರಿಸರ ಪ್ರೇಮಿಗಳಿಗೆ ಸಸಿ ವಿತರಿಸುವ ಕೆಲಸ ನಡೆಸಲಾಯಿತು.
ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಉತ್ತಮ ಪರಿಸರ ನಾಗರಿಕರ ಆರೋಗ್ಯ ಕಾಪಾಡುತ್ತದೆ. ಸ್ಥಳೀಯ ಪಟ್ಟಣ ಪಂಚಾಯಿತಿ ಸಸಿ ನೆಡುವ ಜೊತೆಗೆ ನರ‍್ವಹಣೆ ಮಾಡುವ ಕೆಲಸ ಮಾಡಲಿದೆ. ಅರಣ್ಯ ಇಲಾಖೆ ಕರ‍್ಯಕ್ಕೆ ಲಯನ್ಸ್, ರೋಟರಿ ಹಾಗೂ ಸ್ಕೌಟ್ ಅಂಡ್ ಗೈಡ್ಸ್ ಇನ್ನೂ ಅನೇಕ ಸಂಘಗಳು ಕೈ ಜೋಡಿಸಲಿದೆ ಎಂದರು.
ಪಪಂ ಸದಸ್ಯ ಹಾಗೂ ನಿಕಟ ಪರ‍್ವ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ ಮಾತನಾಡಿ ಅಭಿವೃದ್ದಿ ಕೆಲಸದ ಸಮಯ ಹಲವು ಗಿಡ ಮರಗಳು ಅನಿವರ‍್ಯವಾಗಿ ತೆಗೆಯಲಾಗುತ್ತದೆ. ಇಂತಹ ಅಚಾತರ‍್ಯ ನಡೆಯದಂತೆ ಎಚ್ಚರಿಕೆ ವಹಿಸಿ ಒಂದು ಮರಕ್ಕೆ ಹತ್ತು ಮರ ಬೆಳೆಸಿ ಪೋಷಿಸುವ ಪ್ರತಿಜ್ಞೆ ಎಲ್ಲಾ ನಾಗರೀಕರು ಮಾಡಬೇಕು ಎಂದು ಕರೆ ನೀಡಿದರು. ವನ ಮಹೋತ್ಸವ ಸಪ್ತಾಹ ಪ್ರತಿಜ್ಞಾ ವಿಧಿ ಬೋಧಿಸಿದ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಮಾತನಾಡಿ ಮುಂಗಾರು ಮಳೆ ಸಂರ‍್ಭದಲ್ಲಿ ಕೋಟಿ ವೃಕ್ಷ ನೆಟ್ಟು ಪೋಷಿಸುವ ಕೆಲಸ ಅರಣ್ಯ ಇಲಾಖೆ ಮಾಡಲಿದೆ. ಆದರೆ ನಮ್ಮ ಈ ಕರ‍್ಯಕ್ಕೆ ಸಮುದಾಯದ ಸಹಕಾರ ಅಗತ್ಯವಿದೆ. ಒಂದು ಸಸಿ ನಾಲ್ಕು ರ‍್ಷ ಗಮನವಿಟ್ಟು ಸಾಕಿದರೆ ನೂರಾರು ರ‍್ಷ ನಮ್ಮ ಮುಂದಿನ ಪೀಳಿಗೆ ಸಾಕಲಿದೆ ಎಂದರು.
ಈ ಸಂರ‍್ಭ ಸಾಮಾಜಿಕ ಅರಣ್ಯಾಧಿಕಾರಿ ಮೇಘನಾ, ಪಪಂ ಮುಖ್ಯಾಧಿಕಾರಿ ಶಂಕರ್, ಉಪ ವಲಯ ಅರಣ್ಯಾಧಿಕಾರಿ ಸೋಮಶೇಖರ್, ನದಾಫ್, ಮುನೋಜಿರಾವ್, ಲಯನ್ಸ್ ಕ್ಲಬ್ ನ ಸಿದ್ದಪ್ಪ, ರೇಣುಕಯ್ಯ ಇತರರು ಇದ್ದರು.

(Visited 1 times, 1 visits today)