ತುಮಕೂರು


ನಗರದ ವಿಭಾಗದಲ್ಲಿಯೂ ಕಾರ್ಮಿಕರ ಕೊರತೆ ಇದೆ. ತಾಂತ್ರಿಕ ಸಿಬ್ಬಂದಿಗಳ ಕೊರತೆ- ಉತ್ತಮ ಗುಣ ಮಟ್ಟದ ಬಿಡಿಬಾಗಗಳು ಸಮಯಕ್ಕೆ ಸರಿಯಾಗಿ ಸರಬರಾಜು ಅಗಲ್ಲ. ಹಳೇ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸಾರಿಗೆ ಕಾರ್ಮಿಕರ ಹೆಚ್ಚಿರುವ ಕೆಲಸದ ಹೊರೆಯನ್ನು ಪರಿಗಣಿಸದೆ.ಸೇಡಿನ ಕ್ರಮವಾಗಿ ಶಿಕ್ಷಿಸಲು, ಇಂಕ್ರಿಮೆAಟ್ ಕಡಿತ ಮಾಡಿಸೋದು ಗ್ಲಾಸ್ ಏರ್ ಕ್ರಾಕ್ ಆದಲ್ಲಿ ಚಾಲಕರನ್ನು ಹೊಣೆಗಾರರನ್ನಾಗಿ ಮಾಡಿ ರೂ. ೪೫೦೦ ದಿಂದ ೬೦೦೦ ದವರೆಗೆ ದಂಡ ಹಾಕಿ ಸಂಬಳದಲ್ಲಿ ಕಡಿತ ಮಾಡುತ್ತಾರೆ , ಫಾರಂ ೪ ನ್ನು ಪದೇ- ಪದೇ ಬದಲಾಯಿಸೋದು. ಂ/ಃ ಮಾರ್ಗಗಳನ್ನು ಕಡಿಮೆ ಮಾಡಿ ಕಾರ್ಮಿಕರಿಗೆ ಕೆಲಸದ ಒತ್ತಡ ಹೆಚ್ಚಳ ಮಾಡೋದು. ವಿರೋಧಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ. ರಿ ಸಿಐಟಿಯು ತುಮಕೂರು ವಿಭಾಗಿಯ ಕಛೇರಿ ಎದುರು ದಿ; ೬-೦೭-೨೦೨೩ರಂದು ಬೆಳಿಗ್ಗೆ- ೧೧ ಗಂಟೆಗೆ ಪತ್ರಿಭಟನೆ ನಡೆಸಿದರು. ಪತ್ರಿಭಟನಾಕಾರರ ಮನವಿ ಸ್ವಿಕರಿದ ವಿಭಾಗಿಯ ನಿಯಂತ್ರಣಾಧಿಕಾರಿಗಳಾದ ಗಜೆಂದ್ರ ಕುಮಾರ್ ಅವರು ಸಮಸ್ಯೆಗಳ ಬಗೆಹರಿಸಲು ಜಂಟಿ ಸಭೆನಡೆಸುವುದಾಗಿ , ಅನ್ಯಾಯದ ಕ್ರಮಗಳು ಅಗಿದಾರೆ ಪರಿಶಿಲಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯನ್ನು ಉದ್ದೆಶಿಸಿ ಸಂಘದ ರಾಜ್ಯ ಅಧ್ಯಕ್ಷರಾದ ಹೆಚ್.ಡಿ . ರೆವಪ್ಪ ಅವರು ಮಾತನಾಡಿ ಸಾರಿಗೆ ನಿಗಮಗಳಲ್ಲಿ ಕಾರ್ಮಿಕ ಸ್ನೆಹಿ ಅಡಳಿತ ಇಲ್ಲದೆ ಇರುವುದು ಅನ್ಯಾಯದ ಕ್ರಮ ವಾಗಿದೆ. ವಿಪರಿತ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಸಾರಿಗೆ ಕಾರ್ಮಿಕರ ಸಮಸ್ಯೆಗಳನ್ನು ಬಗೆ ಹರಿಸಲು ಒಂದು ವ್ಯವಸ್ಥೆ ನಿರ್ಮಿಸಲು ಒತ್ತಾಯಿಸಿದರು.
ಕ.ರಾ.ರ ಸಾ. ಸ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯಧರ್ಶಿಗಳಾದ ಹೆಚ್.ಎಸ್. ಮಂಜುನಾಥ್ ಅವರು ಮಾತನಾಡಿ ಘಟಕ / ವಿಭಾಗ ಮಟ್ಟದಲ್ಲಿ ಕಾರ್ಮಿಕರಿಗೆ ಅಗುತ್ತಿರುವ ಕೆಲಸದ ಹೆಚ್ಚಳದ , ಕಿರುಕುಳಗಳು ಮತ್ತು ಭಷ್ಟಚಾರಕ್ಕೆ ಕಡಿವಾಣ ಹಾಕಿ ಕಾರ್ಮಿಕ ಅಹಾವಲು ಅಲಿಸಿಬೇಕು. ಮೋಹನ್ ದಾಸ್ ಮತ್ತಿರರ ಮೇಲಿನ ಸೇಡಿನ ಕ್ರಮ ನಿಲ್ಲಿಸಬೆಕು. ಇಂಕ್ರೀಮೇಟ್ ಕಡಿತ ,ಅಕ್ರಮ ದಂಡಗಳನ್ನು ವಾಪ್‌ಸ್ಸ ಮಾಡಬೇಕು.
ಸಂಘದ ವಿಭಾಗಿಯ ಘಟಕದ ಗೌರವ ಅಧ್ಯಕ್ಷರಾದ ಸೈಯದ್ ಮುಜೀಬ್ ಅವರು ಮಾತನಾಡಿ ಸ್ವಭಾವಿಕ ನ್ಯಾಯದಡಿಯಲ್ಲಿ ಸಹ ನಡೆದು ಕೊಳ್ಳದ ನಡೆಗಳು ಅಸಂವಿಧಾನಿಕ , ಒತ್ತಡದಿಂದ ಅಲ್ಲ ಕೆಲಸ ಮಾಡಿಸಬೇಕಾದ್ದು ನೌಕರರ ತುಂಬು ಮನಸ್ಸಿನಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣ ಮುಖ್ಯ. ಸಾರಿಗೆ ಸಂಸ್ಥೆಯ ಕಾರ್ಮಿಕರ ವಿರೋಧಿ ನಡೆಗಳಿಗೆ ಕಾರ್ಮಿಕ ನ್ಯಾಯಲಯಗಳಲ್ಲಿ ಸಾರಿಗೆ ಕಾರ್ಮಿಕ ಸಾವಿರಾರು ಪ್ರಕರಣಗಳು ಬಾಕಿ ಇರುವುದೆ ಸಾಕ್ಷಿ, ಮನಪರಿರ್ವತೆ ಮುಖ್ಯವಾಗಬೇಕೆ ಮಿನಹ ಬರಿ ಶಿಕ್ಷೆಯಲ್ಲು ಎಂದರು.
ಪ್ರತಿಭಟನೆಯಲ್ಲಿ ಸಂಘದ ವಿಭಾಗಿಯ ಘಟಕದ ಅಧ್ಯಕ್ಷರಾದ ದೇವರಾಜು , ಪ್ರಧಾನ ಕಾರ್ಯಧರ್ಶಿ ಸಮಿವುಲ್ಲಾ, ಖಚಾಂಚಿ; ರಾಜಣ್ಣ, ಉಪಾಧ್ಯಕ್ಷರಾದ ಮೋಹನ್ ದಾಸ್, ಬಿಎಂಟಿಸಿ ನೌಕರರ ಸಂಘದ ಶ್ರೀಮತಿ ಕುಸುಮಾ, ಲಕ್ಷಿö್ಮನಾರಾಯಣ ಮತ್ತಿತರು ಭಾಗವಹಿಸಿದ್ದರು.
ರಾಜಕಿಯ ಸೇಡಿಗೆ ವರ್ಗ ಚಾಲಕ ವಿಷ ಸೇವನೆ – ಸಮಗ್ರ ತನಿಖೆ ಸಿಐಟಿಯು ಒತ್ತಾಯ
ನೆಲಮಂಗಲ ಡಿಪೋ ಚಾಲಕ ತಂದೆ ಹಿಂದಿನ ಚುನಾವಣೆ ವಿಧಾನ ಸಭಾ ಚುನಾವಣೆಯಲ್ಲಿ ಜನತಾ ದಳಕ್ಕೆ ಕೆಲಸ ಮಾಡಿದ್ದಾರೆ ಎಂಬ ಕಾರಣಕ್ಕೆ ಸೇಡಿನ ಕ್ರಮವಾಗಿ ಚಾಲಕನಿಗೆ ಕಿರುಕುಳ ನೀಡಲು ವರ್ಗವಣೆ ಮಾಡಿದ್ದರಿಂದ ಮನ ನೊಂದು ಚಾಲಕ ವಿಷ ಸೇವಿಸಿರುವ ಘಟನೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ, ರಿ ಸಿಐಟಿಯು ಖಂಡಿಸಿದೆ. ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ವಹಿಸುವಂತೆ ಸಂಘವು ಅಗ್ರಹ ಪೂರಕವಾಗಿ ಒತ್ತಾಯಿಸಿದೆ. ಸಾರಿಗೆ ನೌಕರರು ಅತ್ಮ ಹತ್ಯೆ ದಾರಿ ಹಿಡಿಯದೆ ಸಮಸ್ಯೆಗಳನ್ನು ಎದುರಿಸಿ ಪರಿಹಾರ ಕಾಣಲು ಬೇಕಾದ ದೈರ್ಯವನ್ನು ಪಡೆಯುವಂತೆ ನೌಕರರಲ್ಲಿ ವಿನಂತಿಸಿದೆ. ಸಾರಿಗೆ ನಿಗಮಗಳ ಅಡಳಿತವು ಸಹ ನೌಕರರ ದ್ವನಿ ಅಡಗಿಸದೆ ಸಮಸ್ಯಗಳನ್ನು ಅಲಿಸಿ – ಪರಿಹಾರಿಸುವ ಪ್ರಜಾಸತ್ಮತ್ಮಾಕ ವ್ಯವಸ್ಥೆಯನ್ನು ರೂಪಿಸಲು ಒತ್ತಾಯಿಸಿದೆ. ಕೂಡಲೇ ವರ್ಗವಣೆಯ ಅದೇಶವನ್ನು ಹಿಂಪಡೆಯ ಬೇಕು. ಸುವ್ಯವಸ್ಥಿತಿತ ವೈದ್ಯಕೀಯ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಬೇಕು. ಆಡಳೀತ ವರ್ಗವೆ ಸಂಪೂರ್ಣ ವೈದ್ಯಾಕಿಯ ವೆಚ್ಚ ಭರಿಸಬೇಕು.

(Visited 1 times, 1 visits today)