ತುಮಕೂರು
ಜಿಲ್ಲಾ ಭೋವಿ ಸಂಘ(ರಿ)ವತಿಯಿAದ ಜುಲೈ ೨೩ರ ಭಾನುವಾರ ಚಿಕ್ಕನಾಯಕನಹಳ್ಳಿ ಪಟ್ಟಣದ ಕನ್ನಡ ವೇದಿಕೆ ಸಭಾಂಗಣದಲ್ಲಿ ಭೋವಿ ಗುರುಪೀಠದ ಜಗದ್ಗುರು ಶ್ರೀಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳ ೩೮ನೇ ಜನ್ಮ ವರ್ಧಂತಿಯ ಅಂಗವಾಗಿ ಗುರುವಂದನಾ ಮತ್ತು ಸಮುದಾಯದ ನೂತನ ಶಾಸಕರುಗಳಿಗೆ ಅಭಿನಂದನಾ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಭೋವಿ ಸಂಘದ ಜಿಲ್ಲಾಧ್ಯಕ್ಷ ಓಂಕಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕಲ್ಲು ಒಡೆಯುವ,ಮಣ್ಣಿನ ಕೆಲಸ ಮತ್ತಿತರರ ಶ್ರಮಿಕ ಕೆಲಸಗಳಲ್ಲಿ ನಿರತವಾಗಿರುವ ಭೋವಿ ಸಮುದಾಯವನ್ನು ಸಂಘಟಿಸುವ ಉದ್ದೇಶದಿಂದ ತುಮಕೂರು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನಮ್ಮ ಗುರುಗಳಾದ ಶ್ರೀಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿಗಳ ಗುರುವಂಧನಾ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದು,ಇದರ ಜೊತೆಗೆ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೂತನ ಶಾಸಕರು, ಸಚಿವರುಗಳನ್ನು ಅಭಿನಂದಿಸುವ ಹಾಗೂ ನಗದು ಪುರಸ್ಕಾರದೊಂದಿಗೆ ಪ್ರತಿಭಾನ್ವಿತ ಮಕ್ಕಳನ್ನು ಸಹ ಸನ್ಮಾನಿಸುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಜಿಲ್ಲಾ ಭೋವಿ ಸಂಘ ಹೊಂದಿದೆ ಎಂದರು.
ತುಮಕೂರು ಜಿಲ್ಲಾ ಭೋವಿ ಸಂಘದವತಿಯಿAದ ೨೦೨೧ರಲ್ಲಿ ಗಾಜಿನಮನೆಯಲ್ಲಿ, ೨೦೨೨ರಲ್ಲಿ ಶಿರಾ ನಗರದಲ್ಲಿ ಗುರುವಂಧನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಬಾರಿ ಚಿಕ್ಕನಾಯಕನಹಳ್ಳಿಯ ಕನ್ನಡ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ವಿಧಾನಸಭೆಗೆ ಆಯ್ಕೆಯಾಗಿರುವ ಪಾವಗಡದ ಹೆಚ್.ವಿ.ವೆಂಕಟೇಶ್,ಅರವಿAದ ಲಿಂಬಾವಳಿ ಸೇರಿದಂತೆ ೭ ಶಾಸಕರು ಹಾಗೂ ವಿಧಾನಪರಿಷತ್‌ನಲ್ಲಿರುವ ಓರ್ವ ಶಾಸಕರು ಭಾಗವಹಿಸಲಿದ್ದಾರೆ.ಶೇ೮೦ಕ್ಕಿಂತ ಹೆಚ್ಚು ಅಂಕ ಪಡೆದ ಸಮುದಾಯದ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸುವ ಕಾರ್ಯಕ್ರಮ ಹಿಂದಿನಿAದಲೂ ಚಾಲ್ತಿಯಲ್ಲಿದೆ.ಜಿಲ್ಲೆಯಲ್ಲಿ ಸುಮಾರು ೯೦ ಸಾವಿರ ಜನಸಂಖ್ಯೆಯನ್ನು ಹೊಂದಿರುವ ಭೋವಿ ಸಮುದಾಯ ಇತ್ತೀಚಗಷ್ಟೇ ಶೈಕ್ಷಣಿಕವಾಗಿ ಪ್ರಗತಿ ಹೊಂದು ತ್ತಿದ್ದು,ಇದರ ವೇಗವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ,ಗುರುವಂಧನಾ ಕಾರ್ಯಕ್ರಮದ ನಂತರ ಜಾಗೃತಿ ಆಂದೋಲನವನ್ನು ಭೋವಿ ಕಾಲೋನಿಗಳಲ್ಲಿ ಕೈಗೊಳ್ಳಲಾಗುತ್ತಿದೆ.ಪ್ರತಿ ಭೋವಿ ಕಾಲೋನಿಗಳಿಗೆ ನಾಮಫಲಕ ಅಳವಡಿಸಿ,ಜನಸಂಖ್ಯೆಯ ಜೊತೆಗೆ, ಅವರ ಅರ್ಥಿಕ, ಸಾಮಾಜಿಕ ಸ್ಥಿತಿಗತಿಯ ಕುರಿತು ಮಾಹಿತಿ ಸಂಘ್ರಹಿಸಲಾಗುವುದು ಎಂದು ಓಂಕಾರ್ ತಿಳಿಸಿದರು.
ಈ ಹಿಂದಿದ್ದ ಸರಕಾರ ಭೋವಿ,ಲಂಬಾಣಿ,ಕೊರಮ,ಕೊರಚ ಇನ್ನಿತರ ಪರಿಶಿಷ್ಟ ಜಾತಿಗಳ ಜನರ ವಿರೋಧದ ನಡುವೆಯೂ ಸದನದಲ್ಲಿ ಒಳಮೀಸಲಾತಿ ಕರಡು ಮಂಡಿಸಿ,ಒಪ್ಪಿಗೆ ಪಡೆದು ಜನರಲ್ಲಿ ಸಾಕಷ್ಟು ಗೊಂದಲವನ್ನು ಉಂಟು ಮಾಡಿದೆ. ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿರುವ ನಮ್ಮ ಸಮುದಾಯದ ಜನಸಂಖ್ಯೆ ಲೆಕ್ಕಕ್ಕೂ,ವಾಸ್ತವದಲ್ಲಿ ಇರುವ ಜನಸಂಖ್ಯೆ ಲೆಕ್ಕಕ್ಕೂ ಅಜಗಜಾಂತರ ವೆತ್ಯಾಸವಿದೆ. ಹಾಗಾಗಿಯೇ ೨೦೨೩ರ ಜನವರಿ ೧೦ ರಂದು ಒಳಮೀಸಲಾತಿ ಜಾರಿ ವಿರುದ್ದ ಮೇಲಿನ ಎಲ್ಲಾ ಸಮುದಾಯಗಳ ಬೃಹತ್ ಸಂಖ್ಯೆಯಲ್ಲಿ ಪಕ್ಷಾತೀತವಾಗಿ ಸೇರಿ ಪ್ರತಿಭಟನೆ ನಡೆಸಿದ್ದರು.ಆದರೆ ಕಾನೂನು ಸಚಿವರು ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿನ ಕೆಲಸ ಅಂಕಿ ಅಂಶಗಳನ್ನು ಬದಲಾಯಿಸಿ ಮೀಸಲಾತಿ ಹೆಚ್ಚಳ ಮಾಡಿತ್ತು.ಇದಕ್ಕೆ ನಮ್ಮ ವಿರೋಧವಿದೆ ಎಂದು ಓಂಕಾರ್ ತಿಳಿಸಿದರು.
ಜುಲೈ೨೩ರ ಭಾನುವಾರ ಚಿಕ್ಕನಾಯಕನಹಳ್ಳಿ ಕನ್ನಡ ಸಭಾಂಗಣದಲ್ಲಿ ನಡೆಯುವ ಗುರುವಂದನೆ, ನೂತನ ಶಾಸಕರಿಗೆ ಸನ್ಮಾನ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಭೋವಿ ಸಮಾಜ ಬಂಧುಗಳು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕೋರಿದ ಅವರು, ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವವರು ಜುಲೈ ೨೦ರೊಳಗೆ ರಾಕೇಶ್ ೯೫೩೫೯೫೮೫೧೭, ಹುಲುಗಪ್ಪ ೯೬೨೦೧೬೯೨೧೧, ಈಶ್ವರ್ ೯೭೪೩೯೯೨೩೪೦ ಅವರುಗಳಿಗೆ ಸಂಪರ್ಕಿಸುವAತೆ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಭೋವಿ ಸಂಘದ ಉಪಾಧ್ಯಕ್ಷ ಶಿರಾ ಗೋವಿಂದರಾಜು,ಕುಣಿಗಲ್‌ನ ಲಕ್ಕಪ್ಪ,ಪಾವಗಡದ ಹನುಮಂತರಾಯಪ್ಪ, ಲೋಕೇಶ್, ಶಿರಾದ ಕೆಂಚಪ್ಪನಹಳ್ಳಿ ರಮೇಶ್, ದುರ್ಗಪ್ಪ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.