ತುಮಕೂರು


ಪ್ರಶಿಕ್ಷಣಾರ್ಥಿಗಳಿಗೆ ಗ್ರಾಮದ ಜನರೊಂದಿಗೆ ಹೇಗೆ ಸಹಭಾಗಿಯಾಗಿ ಕೆಲಸ ಮಾಡಬೇಕು ಹೇಗೆ ಕಾರ್ಯಕ್ರಮಗಳಲ್ಲಿ ಹಾಗೂ ಗ್ರಾಮದಲ್ಲಿ ಕೆಲಸ ಮಾಡುವಾಗ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಮಾದ್ರಿ ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲರಾದ ನಟರಾಜ್ ಃ.ಏ. ಹಾಗೂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಅವರೂ ಸಹ ಕಾರ್ಯಕ್ರಮದ ಕುರಿತು ತಿಳಿಸಿದರು.
ಹೇಮಾದ್ರಿ ಎಜುಕೇಷನಲ್ ಅಂಡ್ ಡೆವಲಪ್ ಮೆಂಟಲ್ ಸೊಸೈಟಿ (ರಿ). ತುಮಕೂರು. ಹೇಮಾದ್ರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಇವರ ವತಿಯಿಂದ ತುಮಕೂರು ಜಿಲ್ಲೆ, ಗುಬ್ಬಿ ತಾಲೂಕು, ಒ.ಊ. ಪಟ್ಟಣ ಗ್ರಾಮ ಪಂಚಾಯಿತಿಯ ಲಕ್ಕೇನಹಳ್ಳಿ ಗ್ರಾಮದಲ್ಲಿ ಸಮಾಜ ಕಾರ್ಯ ಶಿಬಿರವನ್ನು ಹಮ್ಮಿಕೊಂಡಿದ್ದು ಮೊದಲ ದಿನದ ಶಿಬಿರವನ್ನು ಹೇಮಾದ್ರಿ ಎಜುಕೇಷನಲ್ ಸೊಸೈಟಿಯ ಕಾರ್ಯದರ್ಶಿಗಳಾದ ತಿಪ್ಪೇಸ್ವಾಮಿ ಗಿ.ಖಿ. ಅವರು ಹಾಗೂ ವೇದಿಕೆಯ ಮೇಲೆ ಉಪಸ್ಥಿತರಿದ್ದ ಎಲ್ಲಾ ಗಣ್ಯರೂ ನಡೆಸಿಕೊಟ್ಟರು. ಕೃಷ್ಣಮೂರ್ತಿ ಅವರು ಅಧ್ಯಕ್ಷೀಯ ಭಾಷಣವನ್ನು ಮಾಡಿ ಎಲ್ಲಾ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಶಿಬಿರಾಧಿಕಾರಿಗಳಾದ ಶೇಖರಯ್ಯ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ಹೇಮಾದ್ರಿ ಎಜುಕೇಶನಲ್ ಟ್ರಸ್ಟ್ನ ಕಾರ್ಯದರ್ಶಿಗಳಾದ ತಿಪ್ಪೇಸ್ವಾಮಿ ಅವರು ಗ್ರಾಮದ ಮುಖ್ಯಸ್ತರ ಬಳಿ ವಿದ್ಯಾರ್ಥಿಗಳಿಗೆ ಸಹಕರಿಸಿ ಎಂದು ಹೇಳುತ್ತಾ, ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಎಲ್ಲರೂ ಮಾತನಾಡಿದ ನಂತರ ವೇದಿಕೆಯನ್ನು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ಅನುವು ಮಾಡಿಕೊಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗ್ರಾಮದ ಮಕ್ಕಳೂ ಸಹ ಭಾಗಿಯಾಗಿದ್ದರು.
ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಕೃಷ್ಣಮೂರ್ತಿ ಹೇಮಾದ್ರಿ ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿಗಳಾದ ತಿಪ್ಪೇಸ್ವಾಮಿ ಹಾಗೂ ಮುಖ್ಯ ಅಥಿತಿಗಳಾದ ಶ್ರೀಯುತ ನಟರಾಜು ಶ್ರೀಯುತ ಮೋಹನ್ ಅವರು ಮತ್ತು ಅಥಿತಿಗಳಾದ ಶ್ರೀಯುತ ಪಟೇಲ್ ದಿನಕರ್ ಮೂರ್ತಿ, ಪಂಚಣ್ಣ ಪಣಗಾರ್, ಶ್ರೀಯುತ ತೋಪೇಗೌಡ್ರು, ಶ್ರೀಯುತ ರಂಗರಾಜು ಹಾಗೂ ಶಿಬಿರಾಧಿಕಾರಿಗಳಾದ ಶ್ರೀದೇವಿ ., ಶ್ರೀ ಶೇಖರಯ್ಯ, ಶಿವು ಅವರು ಉಪಸ್ಥಿತರಿದ್ದರು. ಶಿಬಿರಾರ್ಥಿಯಾದ ಕುಮಾರಿ ಮೇಘನ P.ಓ. ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

(Visited 1 times, 1 visits today)