ತುಮಕೂರು


ಹೇಮಾದ್ರಿ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಕೇಂದ್ರ ತುಮಕೂರು ಇವರ ವತಿಯಿಂದ ಲಕ್ಕೇನ ಹಳ್ಳಿ ಗ್ರಾಮ, ಒ.ಊ. ಪಟ್ಟಣ ಗ್ರಾಮ ಪಂಚಾಯ್ತಿ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಸಮಾಜ ಕಾರ್ಯ ಗ್ರಾಮೀಣ ಶಿಬರದ ಎರಡನೇ ದಿನದ ಬೆಳಗಿನ ಕಾರ್ಯಕ್ರಮವು ಸಹಭಾಗಿತ್ವದೊಂದಿಗೆ ಗ್ರಾಮೀಣ ವಿಶ್ಲೇಷಣೆ ಯಾಗಿದ್ದು ಇದರ ಮುಖ್ಯ ಉದ್ದೇಶ ಗ್ರಾಮದ ಬಗ್ಗೆ ತಿಳಿದುಕೊಳ್ಳುವುದಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಮುಖ್ಯಸ್ಥರಾದ ಶ್ರೀಯುತ ಪಾಂಡುರAಗಪ್ಪನವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀಯುತ ಲಕ್ಷ್ಮಣ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಗ್ರಾಮೀಣ ಭಾಗದಲ್ಲಿ ನಡೆಯುವ ಶಿಬಿರದ ಮಹತ್ವವನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು. ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದಂತಹ ಶ್ರೀಯುತ ಅ.ಅ. ಪಾವಟೆಯವರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಜನರ ಸಹಭಾಗಿತ್ವದೊಂದಿಗೆ ತಯಾರಾದ ಸಾಮಾಜಿಕ ನಕ್ಷೆ, ಸಂಪನ್ಮೂಲ ಶ್ರೇಣೀಕರಣ ಹಾಗೂ ಚಪಾತಿ ನಕ್ಷೆಯನ್ನು ವಿವರಿಸುವ ಮೂಲಕ, ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಗ್ರಾಮದ ಅಭಿವೃದ್ಧಿಯನ್ನು ಮಾಡಬಹುದೆಂದು ಶಿಬಿರಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರುಗಳಾದ ಶ್ರೀಯುತ ಗಂಗಾಧರ್, ಬಸವರಾಜು, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಯೋಗಾನಂದ್ ಟಿ. ಮಕ್ಕಳು ಹಾಗೂ ಗ್ರಾಮಸ್ಥರೆಲ್ಲರೂ ಉಪಸ್ಥಿತರಿದ್ದರು.
ಸಂಜೆಯ ಕಾರ್ಯಕ್ರಮವು ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಯ ಕುರಿತಾಗಿದ್ದು ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ಶಿಬಿರಾರ್ಥಿಯಾದ ಕುಮಾರಿ ನಯನ ಅವರು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಮಹೇಂದ್ರ ಕುಮಾರ್ ಅವರು ವಹಿಸಿಕೊಂಡಿದ್ದು ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಯುತ ಅ.ಅ. ಪಾವಟೆ ಅವರು ವೇದಿಕೆಯನ್ನು ಹಂಚಿಕೊAಡಿದ್ದರು.
ವೇದಿಕೆಯ ಕಾರ್ಯಕ್ರಮವನ್ನು ಅಕ್ಷರದವ್ವ ಸಾವಿತ್ರಿ ಭಾಯಿ ಪುಲೆ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವ ಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರೀಯುತ ಕರಿಯಪ್ಪ (ಬೆಸ್ಕಾಂ ಅಧಿಕಾರಿಗಳು )ಅವರು ಸಮಾಜ ಕಾರ್ಯ ಶಿಬಿರದ ಕುರಿತು, ವೇದಿಕೆಯಲ್ಲಿನ ಅತಿಥಿಗಳನ್ನು ಕುರಿತು ಒಂದೆರಡು ಹಿತ ನುಡಿಗಳನ್ನು ಹಾಡಿದರು. ಶಿಬಿರದ ಬಗ್ಗೆ ಮಾತನಾಡಿತ್ತಾ ಗ್ರಾಮೀಣ ಜೀವನದ ಬಗ್ಗೆ ಹಾಗೂ ಶಿಬಿರಗಳನ್ನು ಗ್ರಾಮದಲ್ಲಿ ಮಾಡುವುದಕ್ಕೆ ಕಾರಣ ಏನು ತಿಳಿಸುವುದರ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ಸವಿವರವಾಗಿ ತಿಳಿಸಿದರು.
ನಂತರ ಕಾಡಶೆಟ್ಟಿ ಹಳ್ಳಿ ಸತೀಶ್ ಅವರು ಮಾತನಾಡಿತ್ತಾ ಅಕ್ಷರದವ್ವ ಸಾವಿತ್ರಿ ಭಾಯಿ ಪುಲೆ ಅವರ ಕುರಿತು ಹಾಗೂ ಮಹಾತ್ಮಾ ಗಾಂಧೀಜಿ ಅವರ ಮಹತ್ವದ ಬಗ್ಗೆ ಮಾತನಾಡಿದರು. ಸಮಾಜಿಕ ಜಾಲತಾಣಗಳನ್ನು ಹೇಗೆ ಈಗಿನ ಯುವ ಪೀಳಿಗೆ ದುರುಪಯೋಗ ಪಡಿಸಿಕೊಳ್ಳುತ್ತದ್ದಾರೆ ಎನ್ನುತ್ತಾ ತಂತ್ರಜ್ಞಾನಕ್ಕೆ ದಾಸರಾಗಬೇಡಿ ಎಂದು ಕಿವಿ ಮಾತು ಹೇಳಿದರು. ಸಮಾಜ ಕಾರ್ಯವನ್ನು ಅರಿಯ ಬೇಕು ಎಂದರೆ ಸಾವಿತ್ರಿ ಭಾಯಿ ಪುಲೆ ಅವರನ್ನು ಓದಬೇಕು ಎಂದು ಹೇಳುತ್ತಾ ತಮ್ಮ ಮಾತುಗಳನ್ನು ಮುಗಿಸಿದರು.
ನಂತರ ಅ.ಅ. ಪಾವಟೆ ಅವರು ಮಾತನಾಡುತ್ತಾ ಗ್ರಾಮದ ಜನರನ್ನು ಉದ್ದೇಶಿಸಿ ನಾವು ದಿನನಿತ್ಯ ಬಳಸುವ ಮದ್ಯ ಮತ್ತು ಮಾದಕ ವಸ್ತುಗಳಿಂದ ಹಾಗೂ ದಿನನಿತ್ಯ ಬಳಸುವ ಅನುಪಯೋಗಿ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಅವುಗಳನ್ನು ಬಳಸುವ ಬದಲಿಗೆ ಮನೆಯಲ್ಲಿಯೇ ತಯಾರಿಸುವ ವಸ್ತುಗಳನ್ನು ಹೇಗೆ ಬಳಸುವುದು ಎಂದು ತಿಳಿಸಿದರು.
ಅಧ್ಯಕ್ಷೀಯ ಭಾಷಣವನ್ನು ಶ್ರೀಯುತ ಮಹೇಂದ್ರ ಕುಮಾರ್ ಅವರು ಮಾಡಿದರು ಹಾಗೂ ವಂದನಾರ್ಪಣೆಯನ್ನು ಶಿಬಿರಾರ್ಥಿಗಳು ನಡೆಸಿಕೊಟ್ಟರು.
ವೇದಿಕೆಯ ಕಾರ್ಯಕ್ರಮ ಮುಗಿದ ನಂತರ ಗ್ರಾಮದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

(Visited 1 times, 1 visits today)