ತುಮಕೂರು


ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಮಿತಿಯಿಂದ ಮುಖ್ಯಮಂತ್ರಿಗಳ ನಿವಾಸದಲ್ಲಿ ಭೇಟಿಯಾಗಿ ರಾಜ್ಯದ ಸ್ಲಂ ನಿವಾಸಿಗಳ ಹಕ್ಕೋತ್ತಾಯಗಳಿಗೆ ಸಂಬAಧಿಸಿದ ಮನವಿ ಪತ್ರವನ್ನು ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಸಲ್ಲಿಸಿ ಗಮನ ಸೆಳೆದರು.
ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನೂ ಹಿಂದಿನ ಅವಧಿಯಲ್ಲಿ ಸ್ಲಂ ನಿವಾಸಿಗಳಿಗೆ ಸಂಬAಧಿಸಿದAತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ನಗರ ಪ್ರದೇಶದ ಸ್ಲಂಗಳಲ್ಲಿ ಅತಿಹೆಚ್ಚು ಬಡವರು ಕೊಳಗೇರಿಗಳಿಲ್ಲಿದ್ದಾರೆ. ಅಹಿಂದ ಸಮುದಾಯಕ್ಕೆ ಸೇರಿದ ಇಲ್ಲಿನ ಜನರ ಸಮಗ್ರವಾದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು ನಮ್ಮ ಪÀಕ್ಷದ ಪ್ರಣಾಳಿಕೆಯಲ್ಲಿ ಸ್ಲಂ ನಿವಾಸಿಗಳು, ಪೌರಕಾರ್ಮಿಕರು, ಅಸಂಘಟಿತ ಕಾರ್ಮಿಕರಿಗೆ ನೀಡಿರುವ ಭರವಸೆಯನ್ನು ಈಡೇರಿಸುತ್ತೇವೆ. ಈ ಮೂಖೇನ ಸಾಮಾಜಿಕ ಅರ್ಥಿಕವಾಗಿ ಹಿಂದುಳಿದಿರುವ ಸ್ಲಂ ನಿವಾಸಿಗಳಿಗೆ ಸಾಮಾಜಿಕ ನ್ಯಾಯವನ್ನು ನೀಡಿರುವ ಮೂಲಕ ಸಂವಿಧಾನದ ಖಾತ್ರಿಗಳನ್ನು ನೀಡಲಾಗುವುದೆಂದರು.
ಭೂಮಿ ಆಧಾರಿತ ವಸತಿ ಹಕ್ಕು ಕಾಯಿದೆ ಜಾರಿಯಾಗಲಿ: ಎ.ನರಸಿಂಹಮೂರ್ತಿ
ಸ್ಲA ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ ಸ್ಲಂ ಜನಾಂದೋಲನ ಸಂಘಟನೆ ಚುನಾವಣಾ ಪೂರ್ವದಲ್ಲಿ ಸಂವಿಧಾನ ಉಳಿಸಿ ಜಾಗೃತಿಯನ್ನು ೩೩ ವಿಧಾನ ಸಭಾ ಕ್ಷೇತ್ರಗಳಲ್ಲು ಕೈಗೊಂಡ ಪರಿಣಾಮ ೨೪ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಜಾಗೃತಿ ರಾಜ್ಯದಲ್ಲಿ ಸ್ಲಂ ಜನರಿಗೆ ಹೊಸ ರಾಜಕೀಯ ಪ್ರಜ್ಞೆಯನ್ನು ನೀಡಿದೆ. ಹಾಗೆ ನಾವು ನೀಡಿದ ಹಲವಾರು ಅಂಶಗಳನ್ನು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿದೆ. ಪ್ರಮುಖವಾಗಿ ನಗರದಲ್ಲಿರುವ ನಿವೇಶನ ರಹಿತರಿಗೆ ಸರ್ಕಾರದಿಂದಲೇ ವಸತಿ ಯೋಜನೆಯನ್ನು ಜಾರಿಗೊಳಿಸಿ ಎಲ್ಲಾ ಬಡವರಿಗೆ ರಾಜ್ಯ ಸರ್ಕಾರದಿಂದ ೩.೫ ಲಕ್ಷ ವಸತಿ ಸಬ್ಸಿಡಿ ನೀಡುವ ಜೊತೆ ಕೊಳಗೇರಿಗಳಿಗೆ ಹೊಸ ನಾಮಕರಣ ಮಾಡಿ ಸಮಗ್ರ ಅಭಿವೃದ್ಧಿ ಕೈಗೊಳ್ಳುವ ಜೊತೆಗೆ ಆಹಾರ, ಆರೋಗ್ಯ, ಶಿಕ್ಷಣ, ಉದ್ಯೋಗಗಳಿಗೆ ಸೇರಿದ್ದಂತೆ ಸ್ಲಂ ಜನರಿಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದು ಈಡೇರಿಸಬೇಕೆಂದು ಆಗ್ರಹಿಸಿದರು. ಹಾಗೂ ಭೂಮಿ ಆಧಾರಿತ ವಸತಿ ನೀಡುವ ಸ್ಲಂ ಕಾಯಿದೆ ಮತ್ತು ವಸತಿ ಹಕ್ಕು ಕಾಯಿದೆಯನ್ನು ರಾಜ್ಯದಲ್ಲಿ ಜಾರಿ ಮಾಡಬೇಕೆಂದು ಮನವಿ ಮಾಡಿ ಸ್ಲಂ ಬರ‍್ಡ್ಗೆ ಸ್ಲಂ ನಿವಾಸಿಗಳನ್ನೇ ನೇಮಕ ಮಾಡಿ ತುರ್ತಾಗಿ ಸ್ಲಂ ನಿವಾಸಿಗಳ ಕುಂದುಕೊರತೆ ಸಭೆ ಕರೆಯಬೇಕೆಂದರು.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್, ಜಯನಗರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕಿ ಸೌಮ್ಯರೆಡ್ಡಿ, ಹೈಕೋರ್ಟ್ ವಕೀಲರಾದ ಮೈತ್ರಿ ಕೃಷ್ಣನ್, ವಿನಯ್ ಶ್ರೀನಿವಾಸ್, ಐಸಾಕ್ ಅಮೃತ್ ರಾಜ್, ನಹೀರ್ ಉಪಸ್ಥಿತರಿದ್ದರು.

(Visited 1 times, 1 visits today)