ಬೆಂಗಳೂರು


ಉಡುಪಿಯ ಕಾಲೇಜೊಂದರ ಟಾಯ್ಲೆಟ್‌ನಲ್ಲಿ ೩ ಮುಸ್ಲಿಂ ಯುವತಿಯರು ಹಿಂದೂ ಯುವತಿಯ ವಿಡಿಯೋ ಮಾಡಿದ ಆರೋಪ ಇತ್ತೀಚೆಗೆ ಕೇಳಿಬಂದಿದ್ದು ಅದರ ಸುತ್ತ ನಾನಾ ಬಗೆಯ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಕೆಲವರು ರಾಜ್ಯಸರ್ಕಾರದ ಮೇಲೆ ಆರೋಪ ಮಾಡಿದರೆ ಇನ್ನೂ ಕೆಲವರು ಮಹಿಳಾ ಆಯೋಗದ ಸದಸ್ಯೆ ಖುಷ್ಟೂ ಸುಂದರ್ ವಿರುದ್ಧ ಮಾತನಾಡುತ್ತಿದ್ದಾರೆ. ಈ ನಡುವೆ ಬಿಜೆಪಿಯ ಕಾರ್ಯಕರ್ತೆಯೊಬ್ಬರು, ಸಿದ್ದರಾಮಯ್ಯ ವಿರುದ್ಧ ಮಾತನಾಡಿ ಜೈಲು ಸೇರಿದ್ದಾರೆ.
ಉಡುಪಿ ವಿಚಾರವಾಗಿ ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್
ಉಡುಪಿಯ ಕಾಲೇಜಿನಲ್ಲಿ “ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ’ ಎಂದು ನಕಲಿ ಸುದ್ದಿ ಸೃಷ್ಟಿಸಿ ಕೋಮು ಪ್ರಚೋದನೆಗೆ ಮುಂದಾಗಿರುವ ಬಿಜೆಪಿ ತೀರ್ಥಹಳ್ಳಿಯಲ್ಲಿ ಹಿಂದೂ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ಂಃಗಿP ಅಧ್ಯಕ್ಷನ ಅಸಲಿ ಸುದ್ದಿಯ ಬಗ್ಗೆ ಮೌನ ಮುರಿಯುವುದು ಯಾವಾಗ? ವಿದ್ಯಾರ್ಥಿನಿಯರ ಮಕಳಾಟವನ್ನು
ರಾಜಕೀಯದ ಕಳ್ಳಾಟಕ್ಕೆ, ಬಳಸಿಕೊಳ್ಳಲು ಉಪ್ಪು ಖಾರ, ಮಸಾಲೆಗಳನ್ನು ಬೆರಸಿ ಚಪ್ಪರಿಸಲು ಹೊರಟಿದ್ದ @ಃಎP೪ಏಚಿಡಿಟಿಚಿಣಚಿಞಚಿ ಗೆ ನಮ್ಮ ದಕ್ಷಪೊಲೀಸರು ತಡಮಾಡದೆ ತನಿಖೆ ಮಾಡಿ ಸತ್ಯಾಂಶ ಬಯಲಿಗೆಳೆದು ನಿರಾಸೆ ಮೂಡಿಸಿದ್ದಾರೆ” ಎಂದು ಟ್ವಿಟ್ ಮಾಡಲಾಗಿತ್ತು.
ಈ ಟ್ವಿಟ್‌ನಲ್ಲಿ ವಿದ್ಯಾರ್ಥಿನಿಯರ ಮಕ್ಕಳಾಟವನ್ನು, ಬಿಜೆಪಿ ರಾಜಕೀಯ ಕಳ್ಳಾಟವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್‌ಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾ, ಕಾಂಗ್ರೆಸ್ ಮಾಡಿದ್ದ ಟ್ವಿಟನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದರು.
ಅದರಲ್ಲಿ ಅವರು “ಇದನ್ನೆ ಸಿದ್ದರಾಮಯ್ಯ ಮುಸ್ಲಿಂ ಯುವತಿಯರು ಟಾಯ್ಲೆಟ್ ನಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿದ್ದು ಕಾಂಗ್ರೆಸ್ನವರ ಪ್ರಕಾರ ಮಕ್ಕಳಾಟವಂತೆ..  ಸೊಸೆ  ಹೆಂಡ್ತಿ ಅವ್ರ ವಿಡಿಯೋವನ್ನು ಇದೆ ತರ ಮಾಡಿದ್ರೆ ಅದನ್ನು ಮಕ್ಕಳಾಟ ಅಂತ ಒಪ್ಪೋತೀರಾ” ಎಂದು ಸಿಎಂ ವಿರುದ್ಧ ಕಿಡಿಕಾರಿ ಅವಹೇಳನಕಾರಿಯಾಗಿ ಟ್ವಿಟ್ ಮಾಡಿದ್ದರು.
ಈ ಪ್ರಕರಣದ ಕುರಿತಂತೆ, ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಿಜೆಪಿ ಕಾರ್ಯಕರ್ತೆ ಶಕುಂತಳಾರನ್ನು ಬಂಧಿಸಲಾಗಿದೆ.
ಈ ಬಿಜೆಪಿ ಕಾರ್ಯಕರ್ತೆಯ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತ ನೀಡಿರೋ ದೂರಿನ ಮೇರೆಗೆ ಬಂಧನ ಮಾಡಲಾಗಿದೆ ಎನ್ನಲಾಗಿದೆ. ಹನುಮಂತಯ್ಯ ಎಂಬ ಯುವ ಕಾಂಗ್ರೆಸ್ ಕಾರ್ಯಕರ್ತ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ಐಪಿಸಿ ಸೆಕ್ಷನ್ ೫೦೯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯ ಘನತೆಗೆ ಧಕ್ಕೆ ನೀಡಿದ ಆರೋಪದಡಿ ಕೇಸ್ ದಾಖಲಾಗಿದ್ದು ಹೈಗೌಂಡ್ಸ್ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತೆ ಶಕುಂತಲಾರ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಜತೆಗೆ ಹೇಳಿಕೆಯನ್ನೂ ದಾಖಲಿಸಿಕೊಳ್ಳುತ್ತಿದ್ದಾರೆ.
ಬಿಜೆಪಿ ಕಾರ್ಯಕರ್ತೆ ಶಕುಂತಲಾ ಬಂಧನ ಪ್ರಕರಣಕ್ಕೆ ಸಂಬAಧಿಸಿದAತೆ ಹೈಗೌಂಡ್ಸ್ ಪೊಲೀಸ್ ಠಾಣೆಗೆ ಬಿಜೆಪಿ ನಾಯಕರು ಭೇಟಿ ನೀಡಿದ್ದಾರೆ. ಮಾಜಿ ಸಂಸದ ಅಶ್ವಥ್ ನಾರಾಯಣ ಹಾಗೂ ಸಂಸದ ರವಿಕುಮಾರ್ ಭೇಟಿ ನೀಡಿದ್ದು ಶಕುಂತಲಾ ಬಂಧನದ ಬಗ್ಗೆ ಮಾಹಿತಿ ಪಡೆದಿದ್ದಾರೆ.

(Visited 1 times, 1 visits today)