ಹುಳಿಯಾರು
ಹುಟ್ಟಿದ ಮಗುವಿಗೆ ತಾಯಿಯ ಎದೆಹಾಲು ಮುಖ್ಯವಾಗಿದೆ, ಮೊದಲು ಬರುವ ಹಳದಿ ವರ್ಣದ ಗಟ್ಟಿಹಾಲು ಮಗುವಿಗೆ ಮೊದಲ ಲಸಿಕೆ ಇದ್ದಂತೆ. ಕೊಲೊಸ್ಟೊçÃಮ್‌ನಲ್ಲಿ ಪೌಷ್ಟಿಕಾಂಶ ಉತ್ಕöÈಷ್ಟವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಮುಂಬರುವ ದೀರ್ಘಕಾಲಿನ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಮಗುವಿನ ಜಠರ ಸ್ವಚ್ಛವಾಗುತ್ತದೆ. ೬ ತಿಂಗಳು ತುಂಬುವವರೆಗೂ ಕೇವಲ ಎದೆಹಾಲನ್ನೇ ಕೊಡಬೇಕು. ಎದೆಹಾಲನ್ನು ಹೊರತುಪಡಿಸಿ ಹರಳೆಣ್ಣೆ, ಜೇನುತುಪ್ಪ, ಪೌಡರ್ ಹಾಲು ಕೊಡಬಾರದು ಎಂದು ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಚಂದನಾ ಅವರು ತಿಳಿಸಿದರು.
ಹುಳಿಯಾರು ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಗುವಿಗೆ ಎದೆ ಹಾಲು ನೀಡುವುದು ಪ್ರತಿಯೊಬ್ಬ ತಾಯಿಯ ಕರ್ತವ್ಯವಾಗಿದೆ. ಕೆಲವೊಬ್ಬರು ತಮ್ಮ ಸೌಂದರ್ಯ ಹಾಳಾಗುತ್ತದೆ ಎಂದು ಎದೆ ಹಾಲು ಕುಡಿಸುವುದನ್ನು ಬಿಡುತ್ತಾರೆ. ಆದರೆ ಹಾಗೆ ಮಾಡುವುದು ಸರಿಯಾದ ಕ್ರಮವಲ್ಲ. ಹೆರಿಗೆಯಾದ ಒಂದು ಗಂಟೆಯೊಳಗೆ ಮಗುವಿಗೆ ತಾಯಿಯ ಎದೆ ಹಾಲುಣಿಸಬೇಕು. ತಾಯಿಯು ೬ ತಿಂಗಳುಗಳವರೆಗೆ ಮಕ್ಕಳಿಗೆ ಎದೆ ಹಾಲುಣಿಸಬೇಕು. ಇದರಿಂದ ನ್ಯೂಮೋನಿಯಾ, ಅತಿಸಾರಭೇದಿ ಹಾಗೂ ಅಪೌಷ್ಟಿಕತೆ ಬಾರದಂತೆ ತಡೆಗಟ್ಟಬಹುದು ಎಂದರು.
ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಪೂರ್ಣಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಸಿ.ಎಲ್.ಪೂರ್ಣಿಮಾ, ಗಾಯಿತ್ರಮ್ಮ, ಕಾಳಮ್ಮ, ಗೀತಾ, ಸುಮಿತ್ರ, ಅಕ್ತರ್ ಜಬೀನಾ, ಆರೋಗ್ಯ ಇಲಾಖೆಯ ಶಿವಮ್ಮ, ಮಧು, ವೀಣಾ, ಅಶ್ವಿನಿ, ಆಶಾ ಕಾರ್ಯಕರ್ತೆಯರಾದ ಪಾರ್ವತಮ್ಮ, ಶಾಹಾತಾಜ್, ಮಂಜುಳಾ, ಲಕ್ಷಿö್ಮÃ ಮತ್ತಿತರರು ಇದ್ದರು.