ತುಮಕೂರು:


ಸರಕಾರಿ ಶಾಲೆಯೊಂದರ ಆವರಣದಲ್ಲಿ ನಡೆಯುತ್ತಿರುವ ಮಾನಸ ಬುದ್ದಿಮಾಂಧ್ಯ ಮಕ್ಕಳ ಶಾಲೆಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ತಿಳಿಸಿದ್ದಾರೆ.
ನಗರದ ಬಾಲಭವನದ ಹಿಂಭಾಗದಲ್ಲಿರುವ ಶ್ರೀಕೃಷ್ಣರಾಜೇಂದ್ರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ಆವರಣದಲ್ಲಿರುವ ಮಾನಸ ಬುದ್ದಿ ಮಾಂದ್ಯ ಮಕ್ಕಳ ಶಾಲೆಯಲ್ಲಿ ತಮ್ಮ ೭೨ನೇ ಹುಟ್ಟು ಹಬ್ಬ ಆಚರಣೆ ವೇಳೆ ಮಾತನಾಡಿದ ಅವರು,ವಿಕಲಚೇತನ ಮಕ್ಕಳ ಶಾಲೆಯ ಸ್ಥಿತಿ ಡೋಲಾಯಮಾನವಾಗಿದೆ.ಹಾಗಾಗಿ ಎಲ್ಲದಕ್ಕೂ ಹತ್ತಿರದಲ್ಲಿರುವ ಜಾಗವನ್ನು ಗುರುತಿಸಿ, ಅವರಿಗೆ ಶಾಶ್ವತ ಜಾಗ ನೀಡುವಲ್ಲಿ ನಿಮ್ಮೊಂದಿಗೆ ಕೈಜೋಡಿಸಲಿದ್ದೇನೆ ಎಂದರು. ವಿಕಲಚೇತನ, ಅದರಲ್ಲಿಯೂ ಬುದ್ದಿಮಾಂದ್ಯ ಮಕ್ಕಳ ಪೋಷಕರು ಮತ್ತು ಶಿಕ್ಷಕರು ನಿಜಕ್ಕೂ ತಾಳ್ಮೆಯ ಮೂರ್ತಿಗಳು,ಏನು ಅರಿಯದ ಮಕ್ಕಳಿಗೆ ಪ್ರತಿಯೊಂದನ್ನು ಕಲಿಸಿಕೊಡುವ ಕೆಲಸ ಮಾಡುತ್ತಾರೆ.ಹಾಗಾಗಿ ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು, ನಾನು ಜಿಲ್ಲಾಧಿಕಾರಿಯಾಗಿ ಇದ್ದ ದಿನದಿಂದಲೂ ಮಾನಸ ಬುದ್ದಿಮಾಂದ್ಯ ಮಕ್ಕಳ ಶಾಲೆಗೂ ನನಗೂ ಅವಿನಾಭಾವ ಸಂಬAಧವಿದೆ.ತುಮಕೂರು ನನಗೆ ಒಂದು ರೀತಿಯಲ್ಲಿ ತವರು ಮನೆಯಿದ್ದಂತೆ,ಹಾಗಾಗಿ ವಿಕಲಚೇತನ ಮಕ್ಕಳನ್ನು ಸಶಕ್ತರನ್ನಾಗಿ ಸಲು ನಾವೆಲ್ಲರೂ ಕೆಲಸ ಮಾಡೋಣ ಎಂದು ಡಾ.ಸಿ.ಸೋಮಶೇಖರ್ ತಿಳಿಸಿದರು. ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ,ಜಿಲ್ಲಾಧಿಕಾರಿಯಾಗಿ ಡಾ.ಸಿ.ಸೋಮಶೇಖರ್ ಜಿಲ್ಲೆಗೆ ಚಿರಪರಿಚಿತರು. ಅದಕ್ಕಿಂತಲೂ ಹಿಂದೆ ಯುವಜನಸೇವಾ ಮತ್ತು ಕ್ರೀಡಾಧಿಕಾರಿಯಾಗಿ ಕೆಲಸ ಮಾಡಿದ್ದರೂ,ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಸರ್ವತೋಮುಖ ಬೆಳೆವಣಿಗೆಗೆ ಶ್ರಮಿಸಿದ್ದಾರೆ. ಸುಮಾರು ೨೨ ವರ್ಷದಿಂದ ನಡೆಯುತ್ತಿರುವ ಈ ಮಾನಸ ಬುದ್ದಿ ಮಾಂದ್ಯ ಮಕ್ಕಳ ಶಾಲೆಗೆ ಶಾಶ್ವತ ಜಾಗ ಕಲ್ಪಿಸುವ ನಿಟ್ಟಿನಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀಮತಿಸರ್ವಮಂಗಳ ಸೋಮಶೇಖರ್,ಮುಖಂಡರಾದ ಕೋರಿ ಮಂಜಣ್ಣ,ಎA.ವಿ.ಬಸವರಾಜು, ವಿರೂಪಾಕ್ಷಪ್ಪ,ಕೊಪ್ಪಲ್ ನಾಗರಾಜು,ಶ್ರೀಮತಿ ಲೋಕೇಶ್ವರಿ ಪ್ರಭು,ಮಾನಸ ಬುದ್ದಿ ಮಾಂದ್ಯ ಮಕ್ಕಳ ಶಾಲೆಯ ಕಾರ್ಯದರ್ಶಿ ಶಿವಕುಮಾರ್,ಶಾಲೆಯ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು. ತದನಂತರ ಬೆಳಗುಂಬದಲ್ಲಿರುವ ರೆಡ್‌ಕ್ರಾಸ್‌ನ ವಿಕಲಚೇತನ ಮಕ್ಕಳ ಸನಿವಾಸ ಶಾಲೆಗೆ ತೆರೆಳಿ ಮಕ್ಕಳಿಗೆ ಸ್ವತಹಃ ಊಟ ಬಡಿಸಿ,ತಾವು ಕುಳಿತು ಊಟ ಮಾಡುವ ಮೂಲಕ ಕಾಲ ಕಳೆದರು.

(Visited 1 times, 1 visits today)