ತುಮಕೂರು:
ತುಮಕೂರು ತಾಲೂಕು, ಅದರಲ್ಲಿಯೂ ಗ್ರಾಮಾಂತರ ಕ್ಷೇತ್ರದಲ್ಲಿ ಅಬಕಾರಿ ಇಲಾಖೆ ಸಂಪೂರ್ಣವಾಗಿ ನಿಷ್ಕಿçಯಗೊಂಡಿದ್ದು, ಗ್ರಾಮಾಂತರ ಪ್ರದೇಶದ ಮನೆ ಮನೆಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮದ್ಯಕ್ಕೆ ಕಡಿವಾಣ ಹಾಕದಿದ್ದರೆ, ಸಂಬAಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತುಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವುದಾಗಿ ಶಾಸಕ ಬಿ.ಸುರೇಶಗೌಡ ಎಚ್ಚರಿಕೆ ನೀಡಿದ್ದಾರೆ.
ನಗರದ ತಾ.ಪಂ.ಸಭಾAಗಣದಲ್ಲಿ ಶಾಸಕ ಅಧ್ಯಕ್ಷತೆಯಲ್ಲಿ ನಡೆದ ೨೦೨೩-೨೪ ನೇ ಸಾಲಿನ ಮೊದಲ ತ್ರೆöÊಮಾಸಿಕ ಕೆ.ಡಿ.ಪಿ.ಸಭೆಯಲ್ಲಿ ಮಾತನಾಡಿದ ಅವರು,ಗಂಗೋನಹಳ್ಳಿಯಲ್ಲಿ ಯುವಕನೊಬ್ಬ ಮದ್ಯ ಕುಡಿದ ಅವಲಿನಲ್ಲಿ ಕೆರೆಗೆ ಹಾರಿದ್ದಾನೆ.ಪ್ರತಿ ಗ್ರಾಮದ ಹತ್ತಾರು ಮನೆಗಳಲ್ಲಿ ಮದ್ಯ ಮಾರಾಟ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದೆ.ಕೆಲವೊಂದು ಮದ್ಯದಂಗಡಿ ಮಾಲೀಕರೇ ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲು ಮನೆ ಮನೆಗಳಲ್ಲಿ ಮದ್ಯ ಮಾರಾಟಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಆರೋಪವಿದೆ. ಕೂಡಲೇ ಆರೋಪವಿರುವ ಹಳ್ಳಿಗಳ ಮೇಲೆ ದಾಳಿ ಮಾಡಿ, ಕ್ರಮ ಕೈಗೊಳ್ಳದಿದ್ದರೆ ಮಹಿಳೆಯರೊಂದಿಗೆ ನಿಮ್ಮ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಶಾಸಕರು ಎಚ್ಚರಿಸಿದರು.
ಅಬಕಾರಿ ನಿಯಮದ ಪ್ರಕಾರ ಸಿ.ಎಂ.೦೭ ಮತ್ತು ೦೯ ಅಂಗಡಿಗಳನ್ನು ಇಂತಿಷ್ಟು ಗಂಟೆಯಿAದ ತೆರೆಯಬೇಕೆಂಬ ನಿಯಮವಿದ್ದರೂ ಬೆಳಗ್ಗೆ ೭ ಗಂಟೆಗೆ ತೆರೆಯಲಾಗುತ್ತಿದೆ.ಅಲ್ಲದೆ ಗ್ರಾಮೀಣ ಭಾಗದಲ್ಲಿ ರೈತಾಪಿ ಜನರಿಗೆ ಕುಡಿಯಲು ಮದ್ಯ ಸಾಲ ನೀಡಿ,ದುಬಾರಿ ಹಣ ವಸೂಲಿ ಮಾಡಿರುವ ಕ್ರಮಗಳಿವೆ.ನಿಮ್ಮ ಇಲಾಖೆಗೆ ಜನರ ಪ್ರಾಣಕ್ಕಿಂತ ಅದಾಯಕ್ಕಷ್ಟೇ ಸಿಮಿತವಾಗಿದೆ.ಹಾಗಾಗಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದಿದ್ದರೆ ಇಲ್ಲಿನ ಅಧಿಕಾರಿಗಳ ವಿರುದ್ದ ನೇರ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯುತ್ತೇನೆ.ಅಲ್ಲದೆ ಸದನದಲ್ಲಿಯೂ ಪ್ರಾಸ್ತಾಪಿಸುತ್ತೇನೆ ಎಂದು ಶಾಸಕ ಬಿ.ಸುರೇಶಗೌಡ ತಿಳಿಸಿದರು.
ಎಸ್.ಸಿ.ಪಿ, ಟಿ.ಎಸ್.ಪಿ. ಕಾಮಗಾರಿ ಪೂರ್ಣಗೊಳಿಸಲು ತಾಕೀತು:ಲೋಕೋಪಯೋಗಿ,ಪಂಚಾಯತ್ ರಾಜ್ ಇಂಜಿನಿಯರಿAಗ್ ಸೇರಿದಂತೆ ವಿವಿಧ ಇಲಾಖೆಗಳ ಅಡಿಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಏಜೆನ್ಸಿಗಳು ಮುಂದಿನ ಮೂರು ತಿಂಗಳ ಒಳಗೆ ಎಸ್ಸಿಪಿ,ಟಿ.ಎಸ್ಸ.ಪಿ ಯೋಜನೆಯಡಿ ತೆಗೆದುಕೊಂಡಿರುವ ಕಾಮಗಾರಿಗಳನ್ನು ಪೂರ್ಣ ಗೊಳಿಸಬೇಕು ಎಂದು ತಾಕೀತು ಮಾಡಿದ ಅವರು,ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ,ಗುತ್ತಿಗೆದಾರರಿಂದ ಒಳ್ಳೆಯ ಕಾಮಗಾರಿ ಮಾಡಿಸಲು ಸೂಚನೆ ನೀಡಿದ ಶಾಸಕರು,ಶಾಲಾ ಕೊಠಡಿ,ಶೌಚಾಲಯ,ಸಂಪರ್ಕ ರಸ್ತೆ ಕಾಮಗಾರಿಗಳನ್ನು ಮುಂದಿನ ಮೂರು ತಿಂಗಳ ಒಳಗೆ ಪೂರ್ಣಗೊಳಿಸಿ,ಜಮೀನಿನ ತಕರಾರು ಇರುವ ಕಡೆ,ಕಾಮಗಾರಿ ಬದಲಾವಣೆಗೆ ಪ್ರಾಸ್ತಾವನೆ ಸಲ್ಲಿಸಿದರೆ ಅಗತ್ಯ ಮಾರ್ಪಾಡು ಮಾಡಿಕೊಡಲು ಸಿದ್ದ ಎಂದು ಸಲಹೆ ನೀಡಿದರು.
ಪ್ರತಿ ಗ್ರಾ.ಪಂ. ಒಂದು ಹೈಸ್ಕೂಲ್ಗೆ ಸೂಚನೆ:ಗ್ರಾಮಾಂತರ ಕ್ಷೇತ್ರದ ಪ್ರತಿ ಗ್ರಾಮಪಂಚಾಯಿತಿಯಲ್ಲಿ ಹೈಸ್ಕೂಲ್ ಇರಬೇಕೆಂಬುದು ನಮ್ಮ ಕನಸು.ಗೂಳೂರು,ಹೊನ್ನುಡಿಕೆ,ಮಲ್ಲಸಂದ್ರ,ದೊಡ್ಡನಾರವAಗಲ,ಸೋರೆಕುAಟೆ,ನೆಲ್ಹಾಳ್,ತಿಮ್ಮರಾಜಯನಹಳ್ಳಿ, ಬುಗುಡನ ಹಳ್ಳಿ, ಸೀತಕಲ್ಲು ಸೇರಿದಂತೆ ಹತ್ತು ಗ್ರಾಮಪಂಚಾಯಿತಿ ಹೆಡ್ಕ್ವಾಟರ್ನಲ್ಲಿ ಸರಕಾರಿ ಹೈಸ್ಕೂಲ್ಗಳಿಲ್ಲ.ಈಗಾಗಲೇ ಈ ಜಾಗಗಳಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಇಲ್ಲಿಯೇ ಹೈಸ್ಕೂಲ್ ಪ್ರಾರಂಭಿಸಲು ಶಿಕ್ಷಣ ಇಲಾಖೆಗೆ ಪ್ರಾಸ್ತಾವನೆ ಸಲ್ಲಿಸುವಂತೆ ಸೂಚನೆ ಬಿ.ಇ.ಓ ಅವರಿಗೆ ಸೂಚಿಸಿದ ಶಾಸಕರು,ಇದರಿಂದ ಬಡವರು, ದೀನದಲಿತರು, ಕೂಲಿ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಶಾಸಕ ಬಿ.ಸುರೇಶಗೌಡ ತಿಳಿಸಿದರು.
ಅನುಧಾನ ನೀಡುವುದು ಬ್ಯಾಂಕಿನಲ್ಲಿ ಇಡಲಿಕ್ಕಲ:ಸರಕಾರ ಸಮಾಜ ಕಲ್ಯಾಣ ಇಲಾಖೆಗೆ ೨೦೧೪-೧೫ನೇ ಸಾಲಿನಲ್ಲಿ ೩ ಅಂಬೇಡ್ಕರ್ ಭವನಗಳ ನಿರ್ಮಾಣಕ್ಕೆ ತಲಾ ೫ ಲಕ್ಷ ರೂಗಳ ಅನುದಾನ ನೀಡಿದೆ.ಕಟ್ಟಡ ನಿರ್ಮಾಣಕ್ಕೆ ಅನುದಾನ ಸಾಲದು ಎಂಬ ಕಾರಣಕ್ಕೆ ಇದುವರೆಗೂ ಕಾಮಗಾರಿ ಕೈಗೊಂಡಿಲ್ಲ. ಹಣವನ್ನು ಡಿ.ಸಿ ಮತ್ತು ಜೆಡಿ ಸಮಾಜ ಕಲ್ಯಾಣ ಹೆಸರಿನಲ್ಲಿ ಠೇವಣಿ ಇಡಲಾಗಿದೆ.ಅನುದಾನ ನೀಡುವುದು ಹಣವನ್ನು ಬ್ಯಾಂಕಿನಲ್ಲಿ ಇಟ್ಟು ಬಡ್ಡಿ ಪಡೆಯುವುದಕ್ಕಲ್ಲ.ಇದೊಂದು ದೊಡ್ಡ ದಂಧೆಯಾಗಿದೆ.ಅನುದಾನದ ಸಾಲದು ಎಂದಾದರೆ ಹೆಚ್ಚುವರಿ ಅನುದಾನಕ್ಕೆ ಪ್ರಾಸ್ತಾವನೆ ಸಲ್ಲಿಸಬೇಕು. ಇಲ್ಲವೆ ವಾಪಸ್ ಕಳುಹಿಸಬೇಕು.ಹೀಗೆ ಬ್ಯಾಂಕಿನಲ್ಲಿ ಇಟ್ಟರೆ ಉದ್ದೇಶ ಈಡೇರುತ್ತದೆಯೇ ಎಂದು ಪ್ರಶ್ನಿಸಿದ ಶಾಸಕರು,ಈ ಸಂಬAಧ ಇಲಾಖೆಯೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಮೊದಲ ತ್ರೆöÊಮಾಸಿಕ ಸಭೆಯಲ್ಲಿ ಪಶುಸಂಗೋಪನೆ,ರೇಷ್ಮೆ,ಹಿAದುಳಿದ ವರ್ಗ, ಅಲ್ಪಸಂಖ್ಯಾತ,ಕೈಗಾರಿಕೆ,ಗ್ರಾಮಾAತರ ಕುಡಿಯುವ ನೀರು,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು,ಇಓ ಹರ್ಷಕುಮಾರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.