ಪಾವಗಡ


ಪಟ್ಟಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಇರುವ ಬಸ್ ನಿಲ್ದಾಣ ಇದ್ದರು ಸಹ ಇಲ್ಲದದ್ದಾಗಿದೆ. ಇನ್ನು ಪುರಸಭೆ ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆಯೋ ಇಲ್ಲವೇ ಜಾಣ ಕುರುಡು ತಿಳಿಯುತ್ತಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಸಾರ್ವಜನಿಕರ ಒತ್ತಾಯವಾಗಿದೆ.
ಖಾಸಗಿ ಬಸ್ ನಿಲ್ದಾಣದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಪುಟ್ಬಾತ್ ವ್ಯಾಪಾರಿಗಳು ಮತ್ತು ತಳ್ಳುವ ಗಾಡಿಗಳದ್ದೇ ಕಾರು ಬಾರಾಗಿದೆ. ಒಂದು ದಿನಕ್ಕೆ ಸುಮಾರು ೫ ಸಾವಿರಕ್ಕಿಂತ ಹೆಚ್ಚು ಜನ ಬಂದು ಹೋಗುವ ಖಾಸಿಗೆ ಬಸ್ ನಿಲ್ದಾಣ ಇದಾಗಿದ್ದು ಈ ಬಸ್ ನಿಲ್ದಾಣದಲ್ಲಿ ಕೆ ಎಸ್ ಆರ್ ಟಿ ಸಿ ಮತ್ತು ಆಂಧ್ರಪ್ರದೇಶದ ಸರಕಾರಿ ಬಸ್ಸುಗಳು ಹಾಗೂ ಖಾಸಗಿ ಬಸ್ಸುಗಳು ಸೇರಿದಂತೆ ಸುಮಾರು ೩೦೦ಕ್ಕೂ ಹೆಚ್ಚು ಬಸ್ಸುಗಳು ಬಂದು ಹೋಗುತ್ತವೆ. ಆದರೂ ಪ್ರತಿದಿನ ಬಸ್ ನಿಲ್ದಾಣದ ಒಳಗೆ ಬರಬೇಕಾದರೆ ಡ್ರೈವರಗಳು ಆಗಿದೆ ಅರಸಹಾಸ ಪಡುವಂತಾಗಿದೆ.
ಪುರಸಭೆ ಅಧಿಕಾರಿಗಳು ಪುಟ್ ಬಾತ್ ವ್ಯಾಪಾರಗಳಿಗೆ ಸ್ಥಳ ನಿಗದಿ ಪಡಿಸಿದ್ದರು ಸಹ ವ್ಯಾಪಾರಸ್ಥರು ಆ ಸ್ಥಳವನ್ನು ಬಿಟ್ಟು ಬಸ್ಟ್ಯಾಂಡಿನ ಮಧ್ಯ ಭಾಗದವರೆಗೂ ವ್ಯಾಪಾರಕ್ಕಾಗಿ ಬಂದು ತಳ್ಳುವ ಗಾಡಿಗಳನ್ನು ನಿಲ್ಲಿಸಿಕೊಳ್ಳುತ್ತಾರೆ. ಇದರಿಂದ ಚಾಲಕರಿಗೂ ಮತ್ತು ಪ್ರಯಾಣಿಕರಿಗೂ ಆಗುವ ತೊಂದರೆ ಹೇಳುತ್ತಿರುವುದು.
ಬಸ್ ನಿಲ್ದಾಣದೊಳಗೆ ಇರುವ ಬಸ್ ನಿಲುಗಡೆಯ ಫ್ಲಾಟ್ ಫಾರಂಗಳಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಇದರಿಂದ ಬಸ್ ಗಳನ್ನು ನಿಲ್ಲಿಸಲು ದ್ವಿಚಕ್ರ ವಾಹನ ತೆರವು ಗೊಳಿಸವರೆಗೂ ಚಾಲಕರು ತಮ್ಮ ಬಸ್ಸನ್ನು ರಸ್ತೆಯ ಮಧ್ಯಮದಲ್ಲಿ ನಿಲ್ಲಿಸಿ ಕೊಡಬೇಕಾಗುತ್ತದೆ. ಇದರಿಂದ ಸೂಕ್ತ ಸ್ಥಳಗಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಬೇಕೆಂದು ಪುರಸಭೆ ಎಚ್ಚರಿಕೆ ನಡೆಬೇಕು. ತಾಲೂಕಿನಲ್ಲಿ ತ್ರಿಬಲ್ ಇಂಜಿನ್ ಸರ್ಕಾರವಿದೆ . ಅಂದರೆ ರಾಜ್ಯದಲ್ಲಿಯೂ ಕಾಂಗ್ರೆಸ್ ಸರ್ಕಾರ, ಭಾಗದ ಶಾಸಕರು ಸಹ ಕಾಂಗ್ರೆಸ್ ನವರೆ ಮತ್ತು ಪುರಸಭೆಯ ಒಟ್ಟು ೨೩ ಸದಸ್ಯರ ಪೈಕಿ ೨೨ ಸದಸ್ಯರು ಕಾಂಗ್ರೆಸ್ನವರೇ ಆಗಿರುವುದರಿಂದ ಈ ಸಮಸ್ಯೆಯ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.

(Visited 1 times, 1 visits today)