ತುಮಕೂರು:
ಸ್ವಾಯತ್ತ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್‌ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ತನ್ನ ಸ್ವಂತ ಸಂಪನ್ಮೂಲದಿAದ ನಡೆಸಬೇಕೆಂಬ ಉದ್ದೇಶದಿಂದ ಒಂದು ಕೋಟಿ ಸದಸ್ಯರನ್ನು ನೊಂದಾಯಿಸುವ ಗುರಿ ಹೊಂದಲಾಗಿದೆ ಎಂದು ಕಸಾಪ ಕೇಂದ್ರ ಸಂಘದ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು, ಜಿಲ್ಲಾ ಕಸಾಪ ಆಯೋಜಿಸಿದ್ದ ಪ್ರೊ.ಸಿ.ಹೆಚ್.ಮರಿದೇವರು ದತ್ತಿ ಪ್ರಶಸ್ತಿ ಪ್ರಧಾನ ಮತ್ತು ಕಸಾಪ ಅಜೀವ್ ಸದಸ್ಯತ್ವ ಅಭಿಯಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಒಂದು ಕೋಟಿ ಸದಸ್ಯರ ವಂತಿಗೆ ಹಣ ಸುಮಾರು ೨೫೦ ಕೋಟಿರೂಗಳಾಗುತ್ತದೆ. ಈ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟರೆ, ಒಂದು ವರ್ಷ ನಡೆಯುವ ಕನ್ನಡ ಕಾರ್ಯಕ್ರಮಗಳಿಗೆ ಅನುದಾನಕ್ಕೆ ಸರಕಾರದ ಮುಂದೆ ಕೈಕಟ್ಟಿ ನಿಲ್ಲುವುದು ತಪ್ಪಲಿದೆ ಎಂದರು.
ಜಗತ್ತಿಗೆ ೭೫೮೮ ಭಾಷೆಗಳಲ್ಲಿ ಶೇ೪೦ರಷ್ಟು ಭಾಷೆಗಳು ಬಳಕೆ ಮಾಡುವವರಿಲ್ಲದೆ ಅಳಿವಿನ ಅಂಚಿಗೆ ಸೇರಿವೆ.ದ್ರಾವಿಡ ಭಾಷೆಗಳೆಂದು ಕರೆಯುವ ದಕ್ಷಿಣ ಭಾರತದ ಭಾಷೆಗಳಲ್ಲಿಯೇ ಕನ್ನಡ ಅತ್ಯಂತ ಪರಿಪೂರ್ಣ ಭಾಷೆ,ಹಿಂದಿ,ಇAಗ್ಲೀಷ್ ಆಗಲಿ ಸಮೀಕ್ಷೆಯ ಪ್ರಕಾರ ಪರಿಪೂರ್ಣ ಭಾಷೆಯಲ್ಲ.ಆದರೆ ನಮ್ಮ ಯುವಜನರಲ್ಲಿ ಕನ್ನಡದ ಬಗ್ಗೆ ಅಭಿಮಾನ ಕುಗ್ಗುತ್ತಿರುವ ಪರಿಣಾಮ ಕರ್ನಾಟಕದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಶೇ೬೪ರಷ್ಟಿದೆ.ಪ್ರತಿಷ್ಠೆ, ಕೀಳಿರಿಮೆಯಿಂದ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸಿದೆ.ಇದನ್ನು ಯುವಜನರು ಹೆಚ್ಚು ಹೆಚ್ಚು ಬಳಸುವಂತಾಗಬೇಕು ಎಂದು ಡಾ.ಮಹೇಶ್ ಜೋಷಿ ನುಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ,ಸಿ.ಹೆಚ್.ಮರಿದೇವರು ಮತ್ತು ನಾನು ಒಂದೇ ತಾಲೂಕಿನವರು.ಅವರ ನೇರ ಮತ್ತು ನಿಷ್ಠೂರ ನಡೆ ಹಾಗೂ ಯಾವುದಕ್ಕೂ ರಾಜೀ ಮಾಡಿಕೊಳ್ಳದ ಅವರ ಸ್ವಭಾವ ನನಗೆ ಬಹಳ ಇಷ್ಟ.ಕನ್ನಡ ಭವನ ಕಟ್ಟಬೇಕೆಂಬ ಅವರ ಒತ್ತಾಸೆಯ ಫಲವಾಗಿ ೨೦೦೧ರಲ್ಲಿ ನಡೆದ ೬೯ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸರಕಾರಿ ನೌಕರರು ನೀಡಿದ ಧೇಣಿಯನ್ನು ಬಳಸಿ,ಟೂಡಾದಿಂದ ನಿವೇಶನ ಖರೀದಿಸಿ,ಕನ್ನಡ ಭವನ ನಿರ್ಮಿಸಲಾಗಿದೆ.ಕನ್ನಡ ಕಟ್ಟುವ ಕೆಲಸದಲ್ಲಿ ನಿರಂತರವಾಗಿ ಕಸಾಪ ಜೊತೆ ಕೈಜೋಡಿಸುವುದಾಗಿ ಭರವಸೆ ನೀಡಿದರು. ಅಭಿನಂದನಾ ನುಡಿಗಳನ್ನಾಡಿದ ಕೇಂದ್ರ ಕಸಾಪ ಕೋಶಾಧಿಕಾರಿ ಪಟೇಲ್ ಪಾಂಡು, ಕಸಾಪ ವತಿಯಿಂದ ಪ್ರತಿವರ್ಷ ೨೧೦೦ ದತ್ತಿ ಪ್ರಶಶ್ತಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತಿದೆ.ಪ್ರೊ.ಸಿ.ಹೆಚ್.ಮರಿದೇವರ ಪ್ರಶಸ್ತಿಯನ್ನು ಬೆಂಗಳೂರು ಹೊರತಾಗಿ ಗ್ರಾಮೀಣ ಭಾಗದಲ್ಲಿ ನೀಡಬೇಕೆಂಬ ಆಲೋಚನೆ ಬಂದಾಗ, ಮರಿದೇವರ ಹುಟ್ಟೂರಾದ ತುಮಕೂರಿನಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ,ಕಸಾಪವನ್ನು ಅರ್ಥಿಕವಾಗಿ ಸ್ವಾವಲಂಬಿ ಯಾಗಿಸುವ ನಿಟ್ಟಿನಲ್ಲಿ ಕೇಂದ್ರ ಸಂಘದ ಅಧ್ಯಕ್ಷರಾದ ಮಹೇಶ ಜೋಷಿ ಅವರು ಒಂದು ಕೋಟಿ ಸದಸ್ಯರನ್ನು ನೊಂದಾಯಿಸುವ ಗುರಿ ಹೊಂದಿದ್ದಾರೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕೇಂದ್ರ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ನೇ.ಭ ರಾಮಲಿಂಗಶೆಟ್ಟಿ,ಡಾ.ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು,ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮಹದೇವಪ್ಪ, ಉಮಾ ಮಹೇಶ್, ರಾಣಿ ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.