ಪಾವಗಡ


ಕೆ.ರಾಮಪುರ ಗ್ರಾಮ ಸಾಕ್ಷರತಾ ಅಂದೋಲನ ಕಾರ್ಯಕ್ರಮದಲ್ಲಿ ರಾಷ್ಟç ಮಟ್ಟದಲ್ಲಿ ಸದ್ದು ಮಾಡಿದ ಶಾಲೆಯಾಗಿದ್ದು, ನಗರ ಪ್ರದೇಶದ ಮಕ್ಕಳಿಗಿಂತ ಹಳ್ಳಿಯ ಮಕ್ಕಳಲ್ಲಿ ಪ್ರೀತಿಯೇ ಹೆಚ್ಚು ಎಂದು ಜಪಾನಂದ ಸ್ವಾಮಿಜಿ ತಿಳಿಸಿದರು.
ಶುಕ್ರವಾರ ಕೆ.ರಾಮಪುರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೂತನ ಸಮವಸ್ತç, ಬ್ಯಾಗ್, ಲೇಖನ ಸಾಮಾಗ್ರಿಗಳನ್ನ ವಿತರಿಸಿ ಮಾತನಾಡಿದ ಅವರು ಇಂದಿನ ಮಕ್ಕಳೇ ಭವಿಷ್ಯ ಭಾರತದ ಪ್ರಜೆಗಳು, ಈಧೆಶವನ್ನ ಸುಭದ್ರವಾಗಿ ಕಾಪಾಡುವ ಮಕ್ಕಳಿಗೆ ಗುಣಮಟ್ಟದ ಸಮವಸ್ತç, ಶಾಲಾ ಬ್ಯಾಗ್, ಲೇಖನ ಸಾಮಾಗ್ರಿಗಳನ್ನ ವಿತರಣೆ ಮಾಡಲಾಗುತ್ತಿದೆ ಎಂದಾ ಅವರು ದೇಶ ಉದ್ದಾರವಾಗಲೂ, ಅಭಿವೃದ್ದಿ ಕಾಣಲು ಶಿಕ್ಷಕರೇ ಮುಖ್ಯ ಕಾರಣ, ಚಂದ್ರಲೋಕಕ್ಕೆ ರಾಕೇಟ್ ಹಾರಿಸುವ ನಾವು ನಾಲ್ಕು ಗೋಡೆಗಳ ಮದ್ಯೆ ದೇಶದ ಭವಿಷ್ಯ ಬರೆಯುವ ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಕರಿಲ್ಲದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ ಎಂದರು.
ಶಿಕ್ಷಣ ಇಲಾಖೆಯ ಹಲವರು ನನ್ನನ್ನು ಬೇಟಿ ಮಾಡಿ ಅತಿಥಿ ಶಿಕ್ಷಕರನ್ನ ನೀಡುವಂತೆ ಕೆಳಿದ್ದಾರೆ ಮುಂದಿನ ದಿನಗಳಲ್ಲಿ ಅದನ್ನ ಕೂಡ ಬಗೆಹರಿಸುವ ಕೇಲಸ ಮಾಡೇ ತೀರುತ್ತೆನೆ, ಮದುಗಿರಿ ಶೈಕ್ಷಣಿಕ ಜಿಲ್ಲೆಯ ೧ಲಕ್ಷ ಮಕ್ಕಳಿಗೆ ಪೌಷ್ಟಿಕ ಆಹಾರವನ್ನ ಪೂರೈಕೆ ಮಾಡಲು ಮುಂದಾಗಿದ್ದು ಅಪೌಷ್ಠಿಕತೆ ನಿವಾರಣೆಗೆ ನಾವು ಬದ್ದರಾಗಿ ಕಾರ್ಯನಿರ್ವಹಿಸೋಣ, ನಮ್ಮ ವಿಚಾರಧಾರೆಗಳಿಗೆ ಸ್ಪಂದಿಸುವ ಶಾಸಕರು ಸಿಕ್ಕಿದ್ದು ನಮಗೆ ಮತ್ತಷ್ಟು ಶಕ್ತಿ ಸಿಕ್ಕಿದ್ದು, ಅಶ್ರಮದ ಸೇವೆ ಅರಂಭಿಸಿ ಮುಂದಿನ ವರ್ಷಕ್ಕೆ ೫೦ ವರ್ಷ ಕಳೆಯಳಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಶಾಸಕರಾದ ಹೆಚ್.ವಿ.ವೆಂಕಟೇಶ್ ಮಾತನಾಡಿ ೫ ವರ್ಷಗಳ ಹಿಂದೆ ನವಿಲು ಧಾಮಕ್ಕೆ ಕಾಳು ವಿತರಣೆ ಸಮಯದಲ್ಲಿ ಸಂತಸ ಪಟ್ಟಿದೆ, ಎಲ್ಲರಿಗೂ ಇಂತಹ ಸೇವಾ ಗುಣ ಇರುವುದಿಲ್ಲ ಶಾಲೆ ದತ್ತು ಪಡೆದು ಅಭಿವೃದ್ದಿ ಇಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಿ ಉತ್ತಮ ಪ್ರಜೆಗಳಾಗಿ ಅವರನ್ನ ಮುಂದೆ ಸಾಗಿಸುವುದು ಸುಲಭದ ಕೇಲಸವಲ್ಲ, ಪೌಢಶಾಲೆಯವರೆಗೂ ವಿದ್ಯುತ್ ದ್ವೀಪ ಕಂಡಿರಲಿಲ್ಲ ನಾನು ಕಷ್ಟದಿಂದ ಬೆಳೆದು ಬಂದೆ, ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತನ್ನ ನೀಡುತ್ತಿದ್ದೆನೆ ಈವರ್ಷ ನೂರು ವರ್ಷ ಹಾಸ್ಟಲ್ ಪ್ರವೇಶ ಕೊಡಿಸಿದೆ, ಆರ್ಥಿಕವಾಗಿ ನೆರವನ್ನ ನೀಡುತ್ತಿದ್ದೆನೆ, ಜಪಾನಂದಾ ಸ್ವಾಮಿಜಿಯವರು ಕೊವಿಡ್ ಸಮಯದಲ್ಲಿ ಸೇವೆ ಮಾಡಿದವರ ಸಾಲಿನಲ್ಲಿ ಮೋದಲಿಗರಾದರೇ, ನಾನು ಎರಡನೆಯವನಾಗಿ ಸೇವೆ ಮಾಡಿದೆ ಎಂದರು. ಹಣದಿಂದ ಸುಖ ಕಾಣಲು ಸಾಧ್ಯವಿಲ್ಲ, ತಂದೆ ತಾಯಂದಿರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕಡೆ ಗಮನಹರಿಸಬೇಕು, ಇಲ್ಲವಾದ್ದಲ್ಲಿ ಮಕ್ಕಳಿಗೂ ಕೂಲಿ ಕೇಲಸ ತಪ್ಪಿದ್ದಲ್ಲ ಎಂದಾ ಅವರು, ನಮ್ಮ ತಂದೆಯವರ ಮೇಲಿಟ್ಟ ಅಪಾರ ಪ್ರೀತಿ ವಿಶ್ವಾಸ ನಂಬಿಕೆ ನಮ್ಮ ಮೇಲೆ ಕೂಡ ಹಾಗೆ ಸಾಗಿದೆ ಇಷ್ಟು ಅಭಿಮಾನಿಸುವ ಗ್ರಾಮಕ್ಕೆ ನನ್ನ ಕೊಡುಗೆ ನೀಡುತ್ತೆನೆ ಎಂದರು.
ಮದುಗಿರಿ ಶೈಕ್ಷಣಿಕ ಜಿಲ್ಲೆಯಲ್ಲೇ ಆತೀ ಹೆಚ್ಚು ಮಕ್ಕಳನ್ನ ಹೊಂದಿರುವ ಈ ಶಾಲೆಗೆ ಕೊಠಡಿಗಳು ಮಂಜೂರು ಮಾಡಿಸಿ ಹಾಗೇ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರತಿ ವರ್ಷ ನೀಡುವ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಾ ಚಂದ್ರಶೇಖರ್ ರೆಡ್ಡಿಯಂತೆ ಇತರೇ ಶಿಕ್ಷಕರು ಉತ್ತಮ ಶಿಕ್ಷಣ ಮಕ್ಕಳಿಗೆ ನೀಡುವ ಕಡೆ ಗಮನಹರಿಸಿದಾಗ ಮಾತ್ರ ಮಕ್ಕಳ ಭವಿಷ್ಯ ರೂಪುಗೊಳ್ಳಳಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವತ್ತನಾರಾಯಣ, ಜಿಲ್ಲಾ ಸಮನ್ವಯ ಅಧಿಕಾರಿ ಹಾಗೂ ಅಟಲ್ ಬಿಹಾರಿ ವಾಜಿಪೇಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಕಸ್ತೂರಿ ಕುಮಾರ ಇತರರು ಮಾತನಡಿದರು.
ಈ ಸಂದರ್ಭದಲ್ಲಿ ಚಿಕ್ಕಹಳ್ಳಿ ಗ್ರಾಮಪಂ ಅಧ್ಯಕ್ಷರಾದ ಮೀನಾಕ್ಷಿ ಅಂಜಯ್ಯ, ಮುಖಂಡರಾದ ವೆಂಕಟಮ್ಮನ ಹಳ್ಳಿ ನಾನಿ, ಶಂಕರರೆಡ್ಡಿ, ರಮೇಶ.ಪಿ, ರಾಜು.ಓ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ರಾಮಪುರಂ ನಾಗೇಶ್, ಉಪಾಧ್ಯಕ್ಷರಾದ ಎ.ಅಲ್ಕೂರಪ್ಪ, ಇಸಿಒ ವೇಣುಗೋಪಾಲ ರೆಡ್ಡಿ, ಸಿರ‍್ಪಿ ಚಂದ್ರಶೇಖರ್, ಹಲವು ಮುಖಂಡರು ಉಪರ್ಸತಿತರಿದ್ದರು.

(Visited 1 times, 1 visits today)