ಚಿಕ್ಕನಾಯಕನಹಳ್ಳಿ
ಸ್ವಾತಂತ್ರ‍್ಯ ದೊರಕುವ ಸಂದರ್ಭದಲ್ಲಿ ಅನೇಕ ಮಹಾನ್ ಹೋರಾಟಗಾರರು, ಯೋಧರು ದೇಶದ ಮಣ್ಣಿಗಾಗಿ ತಮ್ಮನ್ನು ಅರ್ಪಣೆ ಮಾಡಿಕೊಂಡಿದ್ದಾರೆ ಎಂದು ಮಾನ್ಯ ತಹಶಿಲ್ದಾರರಾದ ನಾಗಮಣಿ ವಿ ಅವರು ತಿಳಿಸಿದರು.
ಸ್ವಾತಂತ್ರ‍್ಯ ದಿನಾಚರಣೆ ಹಾಗೂ ಅಮೃತ ಮಹೋತ್ಸವ ಪ್ರಯುಕ್ತ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಸಂತ ಕುಮಾರ್ ಅವರ ಮಾರ್ಗದರ್ಶನದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯತ್ ಆವರಣದಲ್ಲಿ ಆಯೋಜಿಸಲಾಗಿದ್ದ ಮೇರಾ ಮಟ್ಟಿ, ಮೇರಾ ದೇಶ್ ನನ್ನ ಮಣ್ಣು, ನನ್ನ ದೇಶ ಕಾರ್ಯಕ್ರಮವನ್ನು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಿAದ ಮಣ್ಣು ಸಂಗ್ರಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಣ್ಣು ಅಮೃತಕ್ಕೆ ಸಮಾನ ಅಂತಹಾ ಮಣ್ಣನ್ನು ನಾವು ಇಂದು ಸಂಗ್ರಹಿಸಿ ದೆಹಲಿಗೆ ಕಳುಹಿಸಿಕೊಡುತ್ತಿದ್ದೇವೆ. ಇಂತಹ ಐತಿಹಾಸಿಕ ಘಟನೆಗೆ ಕಾರ್ಯಕ್ರಮ ಸಾಕ್ಷಿಯಾಗಿದೆ. ಮಣ್ಣನ್ನು ಜಿಲ್ಲಾ ಪಂಚಾಯತಿಗೆ ಕಳಿಸಿ, ಬಳಿಕ ರಾಜಧಾನಿ ಬೆಂಗಳೂರಿಗೆ ಹೋಗಲಿದೆ. ಅಲ್ಲಿಂದ ದೆಹಲಿಗೆ ಹೋಗಿ ಪ್ರಧಾನ ಮಂತ್ರಿಗಳು ಸಸಿ ನೆಟ್ಟು ಎಲ್ಲ ಮಣ್ಣನ್ನು ಆ ಗಿಡಗಳನ್ನು ಬೆಳೆಸಲು ಹಾಗೂ ವೀರ ಮರಣ ಹೊಂದಿದ ಸ್ವಾತಂತ್ರ‍್ಯ ಹೋರಾಟಗಾರರು ಹಾಗೂ ವೀರಯೋಧರಿಗೆ ಸಮರ್ಪಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ಲೆಕ್ಕಾಧಿಕಾರಿಗಳಾದ ದಯಾನಂದ ಎಂ.ಪಿ,ತಾಪA ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಸಿದ್ದರಾಮಣ್ಣ,ರಮೇಶ್,ಸಂತೋಶ್, ಗೌರಮ್ಮ, ಮಂಜುನಾಥ್ , ನಾಗೇಶ್ , ಬಾಬು ಶ್ರೀನಿವಾಸ್ , ಮುದ್ದಲಿಂಗಯ್ಯ ಇನ್ನಿತರರು ಹಾಜರಿದ್ದರು.