ತುಮಕೂರು
ಗುಬ್ಬಿ ತಾಲ್ಲೂಕಿನ ಕಾರೇಕುರ್ಚಿ ಮತ್ತು ತಿಪಟೂರು ತಾಲ್ಲೂಕಿನ ದೊಣೆ ಗಂಗಾಕ್ಷೇತ್ರವು ತಿಪಟೂರು ಮತ್ತು ಗುಬ್ಬಿ ತಾಲ್ಲೂಕಿನ ಗಡಿಯಲ್ಲಿರುವ ಶ್ರೀ ಗುರುಸಿದ್ಧರಾಮೇಶ್ವರಸ್ವಾಮಿ ತಪೋವನ ಭಕ್ತಾದಿಗಳ ಪಾಲಿನ ಸುಕ್ಷೆತ್ರವಾಗಿದೆ. ಇಲ್ಲಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಆಗಮಿಸಿ ಶ್ರೀ ಗುರುಸಿದ್ಧರಾಮೇಶ್ವರ ಮತ್ತು ದೊಣೆಗಂಗಾಮಾತೆಯ ಆರಾಧನೆಯನ್ನು ಮಾಡುತ್ತಾರೆ. ದಾಸೋಹಕ್ಕೆ ಹೆಸರಾಗಿರುವ ವೀರಶೈವ ಲಿಂಗಾಯತ ಸಮಾಜವು, ಶ್ರೀಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಅನ್ನದಾಸೋಹ ಹಾಗೂ ಸೂಕ್ತ ವಸತಿ ಸೌಲಭ್ಯ ಕಲ್ಪಿಸುವ ಸದುದ್ದೇಶದಿಂದ ಸುಮಾರು ೨ಕೋಟಿ ವೆಚ್ಚದಲ್ಲಿ ದೊಣೆ ಗಂಗಾಕ್ಷೇತ್ರದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇಲ್ಲಿಗೆ ಬರುವಂತಹ ಸಕಲ ಭಕ್ತಾದಿಗಳಿಗೆ ಅನುಕೂಲವಾಗಲೆಂದು ನಿತ್ಯ ದಾಸೋಹದ ಮಹಾಮನೆ ಮತ್ತು ವಸತಿಗೃಹದ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಆಗಸ್ಟ್ ೧೯ರ ಶನಿವಾರ ಬೆಳಿಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ತಿಪಟೂರಿನ ಶಾಸಕರಾದ ಕೆ.ಷಡಕ್ಷರಿ ಯವರು ವಹಿಸಲಿದ್ದಾರೆ. ಕಾರ್ಯಕ್ರಮ ಉದ್ಘಾಟನೆಯನ್ನು ಸಂಸದರಾದ ಜಿ.ಎಸ್. ಬಸವರಾಜು ಮಾಡಲಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ದೊಣೆಗಂಗಾ ಕ್ಷೇತ್ರ ಕಾರೇಕುರ್ಚಿ ಟ್ರಸ್ಟ್ನ ಅಧ್ಯಕ್ಷರಾದ ರಂಭಾಪುರಿ
ಶ್ರೀ ಮೃತ್ಯುಂಜಯ ದೇಶಿಕೇಂದ್ರ ಮಹಾಸ್ವಾಮಿಗಳು, ಕೆರೆಗೋಡಿ ರಂಗಾಪುರ ಮಠದ ಅಧ್ಯಕ್ಷರಾದ ಶ್ರೀಗುರುಪರದೇಶಿಕೇಂದ್ರ ಮಹಾಸ್ವಾಮಿಗಳು, ಶಿಡ್ಲೇಹಳ್ಳಿ-ಬಳ್ಳೆಕಟ್ಟೆ ಮಹಸಂಸ್ಥಾನದ ಶ್ರೀ ಇಮ್ಮಡಿಕರಿಬಸವದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಶ್ರೀ ಕಲ್ಮುರುಡೇಶ್ವರ ತಪೋವನ,
ಶ್ರೀ ಕರಡಿಗವಿಮಠದ ಪೀಠಾಧ್ಯಕ್ಷರಾದ ಶ್ರೀ ಶಿವಶಂಕರ ಶಿವಯೋಗಿ ಮಹಾಸ್ವಾಮಿಗಳು, ಹಿರೇಮಠ ದೊಡ್ಡಗುಣಿಯ ಪೀಠಾಧ್ಯಕ್ಷರಾದ ಶ್ರೀ ರೇವಣಸಿದ್ದೇಶ್ವರ ಶಿವಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಗುಬ್ಬಿ ಶಾಸಕರಾದ ಎಸ್.ಆರ್. ಶ್ರೀನಿವಾಸ್, ಚಿಕ್ಕನಾಯಕನ ಹಳ್ಳಿ ಶಾಸಕರಾದ ಸಿ.ಬಿ. ಸುರೇಶ್ ಬಾಬು, ನೊಳಂಬ ಲಿಂಗಾಯತ ಸಂಘದ ಅಧ್ಯಕ್ಷರಾದ ಎಸ್.ಆರ್. ಪಾಟೀಲ್ ಹಾಗೂ ವಿಶೇಷ ಆಹ್ವಾನಿತರಾಗಿ ರವಿಶಂಕರ್ ಹೆಬ್ಬಾಕ,. ಎಸ್.ಡಿ. ದಿಲೀಪ್ ಕುಮಾರ್ ಇರಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ಲಿಂಮ್ಕೋ ಸೀಮೆಂಟ್ ಇಂಡಸ್ಟಿçಯ ಮಾಲೀಕರಾದ ಪೃಥ್ವೀರಾಜು ಮತ್ತು ಸಹೋದರರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸಲಿದ್ದು ಬರುವ ಭಕ್ತಾದಿಗಳಿಗೆ ಮಹಾ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಟ್ರಸ್ಟ್ನ ಕಾರ್ಯದರ್ಶಿ ಸತೀಶ್ ಕುಮಾರ್ ಹಾಗೂ ನಿರ್ದೇಶಕರಾದ ಎಸ್. ಶಿವಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.