ಪಾವಗಡ :

ಪ್ರತಿದಿನವೂ ಜೀವದ ಹಂಗು ತೊರೆದು ಜನರಿಗೆ ಬೆಳಕನ್ನು ನೀಡಲು ಪ್ರಯತ್ನ ಪಡುತ್ತಿರುತ್ತೀರುವ ಬೆಸ್ಕಾಂ ಸಿಬ್ಬಂದಿಗಳ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಶಾಸಕರಾದ ಎಚ್ ವಿ ವೆಂಕಟೇಶ್ ತಿಳಿಸಿದರು.

ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ರಾಜ್ಯ ರ‍್ಕಾರದ ಪಂಚ ಯೋಜನೆಗಳಲ್ಲಿ ಒಂದಾದ ಗೃಹಜೋತಿ ಯೋಜನೆಯ ‘ಉಚಿತ ಬೆಳಕು ಸುಸ್ತಿರ ಬದುಕು’ ಎಂಬ ಯೋಜನೆಗೆ ಚಾಲನೆ ನೀಡಿ ನಂತರ ಅವರು ಮಾತನಾಡುತ್ತಾ, ರಾಜ್ಯ ರ‍್ಕಾರವು ಮತದಾರರಿಗೆ ನೀಡಿದಂತಹ ಐದು ಮಹತ್ವಕಾಂಕ್ಷಿ ಯೋಜನೆಗಳನ್ನು ನಮ್ಮ ರ‍್ಕಾರವು ಒಂದೊಂದೇ ಈಡೇರಿಸುತ್ತಾ ಬರುತ್ತಿದೆ. ರಾಜಸ್ಥಾನ ದಲ್ಲಿ ೩೫೦೦ ಮೆಗಾ ವ್ಯಾಟ್ಸ್ ವಿದ್ಯುತ್ ಉತ್ಪತ್ತಿ ಆಗುತ್ತಿತ್ತು ಇದು ಏಷ್ಯಾದಲ್ಲಿಯೇ ಒಂದನೇ ಸ್ಥಾನದಲ್ಲಿದೆ. ಈಗ ನಮ್ಮ ತಿರುಮಣಿ ಸೋಲಾರ್ ಪರ‍್ಕ್ ಎರಡನೇ ಸ್ಥಾನದಲ್ಲಿದೆ. ಮತ್ತು ನಾನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇಂಧನ ಸಚಿವ ಜರ‍್ಜ್ ನೊಂದಿಗೆ ರ‍್ಚಿಸಿ ನಾನು ಗೆದ್ದ ಮೂರು ತಿಂಗಳ ಒಳಗೆ ಡಿಕೆ ಶಿವಕುಮಾರ್ ಮತ್ತು ಜರ‍್ಜ್ ರವರನ್ನು ತಿರುಮಣಿ ಸೋಲಾರ್ ಪರ‍್ಕ್ ಕರೆತರೆಸಿ ಮತ್ತೆ ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಯೋಜನೆ ರೂಪಿಸಲಾಗಿದೆ. ರೈತರಿಗೆ ತೊಂದರೆ ಆಗದಂತೆ ಸಮಯಕ್ಕೆ ಸರಿಯಾಗಿ ಟಿಸಿ ನೀಡಬೇಕು ಎಂದು ತಿಳಿಸಿದರು.

ಮಾಜಿ ಸಚಿವ ವೆಂಕಟರಮಣಪ್ಪ ಅವರು ಮಾತನಾಡಿ, ಈಗಾಗಲೇ ನಮಗೆ ಮಳೆಯ ಅಭಾವದಿಂದ ಬರ ಬಂದಿರುತ್ತದೆ. ಆದ್ದರಿಂದ ರೈತರು ಇಟ್ಟಿರುವ ಅಲ್ಪ ಸ್ವಲ್ಪ ಬೆಳೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಕೊಡದೆ ಟ್ರಾನ್ಸ್ಪಾರಮರ್ ಸುಟ್ಟು ಹೋದರೆ ಕೂಡಲೇ ಬದಲಾಯಿಸಬೇಕು ಎಂದು ತಿಳಿಸಿದರು.
ರೈತರಿಗೆ ತೊಂದರೆ ಆದಾಗ ಅವರು ನಮ್ಮ ಮೇಲೆ ಒತ್ತಡ ಏರುತ್ತಾರೆ. ಆಗ ನಾವು ನಿಮ್ಮ ಮೇಲೆ ಒತ್ತಡ ಹೇರಬೇಕಾಗುತ್ತದೆ. ಇದನ್ನು ಮನಗಂಡು ಯಾವುದೇ ರೀತಿಯ ತೊಂದರೆ ಆಗದಂತೆ ಇಲಾಖೆ ಮೊನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಒಂದು ಟಿಸಿಗೆ ಎಷ್ಟು ಎಷ್ಟು ಕೊಳವೆ ಬಾವಿಗಳು ಬರುತ್ತವೆ. ಮೋಟರ್ ಪಂಪುಗಳ ಎಚ್ಪಿ ಎಷ್ಟಿದೆ ಎಂದು ಗಮನ ಹರಿಸಬೇಕು. ಒಂದು ಟಿಸಿ ಗೆ ಹೆಚ್ಚು ಕೊಳವೆಬಾವಿಗಳ ಸಂರ‍್ಕ ನೀಡಿದರೆ ಶೀಘ್ರದಲ್ಲಿ ಟ್ರಾನ್ಸ್ ಫಾರಂ ಸುಟ್ಟು ಹೋಗುತ್ತದೆ ಇದರಿಂದ ರೈತರಿಗೆ ತೊಂದರೆ ಆಗುತ್ತದೆ ಆದುದರಿಂದ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.

ಈ ಸಂರ‍್ಭದಲ್ಲಿ ಬೆಸ್ಕಾಂ ಇಲಾಖೆಯ ಅಧಿಕಾರಿಗಳಾದ ಇಇ ಜಗದೀಶ್, ಅಕೌಂಟ್ ಆಫೀಸರ್ ಮಾದೇಶ್, ಏ ಡಬಲ್ ಇ ಕೃಷ್ಣಮರ‍್ತಿ
ಎಇ, ಅಂಜಿ ಬಾಬು, ಚೌಡಪ್ಪ, ತಿಮ್ಮಯ್ಯ, ಯೂನಿಯನ್ ಅಧ್ಯಕ್ಷರಾದ ಗೋಪಾಲ್ ನಾಯಕ್,
ನಗರ ಘಟಕದ ಅಧ್ಯಕ್ಷರು ಸುದೇಶ್ ಬಾಬು, ಪುರಸಭೆ ಸದಸ್ಯರಾದ ಪಿ ಎಚ್ ರಾಜೇಶ್, ಕಲ್ಪವೃಕ್ಷ ರವಿ , ಹಿರಿಯ ವಕೀಲರು ವೆಂಕಟ್ರಾಮ್ ರೆಡ್ಡಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಾಪಣ್ಣ, ಮುಖಂಡರಾದ ಮೈಲಪ್ಪ , ನಾಣಿ, ವಿಎಸ್ಎಸ್ ಮಾಜಿ ಅಧ್ಯಕ್ಷರು ಶಂಸುದ್ದೀನ್, ರೈತ ಸಂಘದ ಅಧ್ಯಕ್ಷರು ನರಸಿಂಹ ರೆಡ್ಡಿ ಮತ್ತು ಸಿಬ್ಬಂದಿ ರ‍್ಗ ಉಪಸ್ಥಿತ ಇದ್ದರು.

(Visited 1 times, 1 visits today)