ತುಮಕೂರು
ಹಳ್ಳಿಗಳು ಹಾಗೂ ಗ್ರಾಮೀಣ ಜನರ ರ‍್ವತೋಮುಖ ಅಭಿವೃದ್ಧಿಗಾಗಿಯೇ ಈ ರ‍್ಕಾರದ ಯೋಜನೆಗಳು ಮೀಸಲು. ಅವುಗಳ ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಉತ್ತಮ ಜೀವನ ಕಟ್ಟಿಕೊಳ್ಳಿ ಎಂದು ಐಇಸಿ ಸಂಯೋಜಕರಾದ ರಮ್ಯ ಕೆ.ಎಸ್ ಸರ‍್ವಜನಿಕರಿಗೆ ಮನವಿ ಮಾಡಿದರು.
ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ರಾಮನಹಳ್ಳಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ “ಮಾಹಿತಿ ಶಿಕ್ಷಣ ಸಂವಹನ” ವಿಶೇಷ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ನೀಡುವ ಮಹತ್ತರ ಕೆಲಸವನ್ನು ನಮ್ಮ ಯೋಜನೆ ಮಾಡುತ್ತಿದೆ. ಪ್ರತಿಯೊಂದು ಕುಟುಂಬಕ್ಕೆ ಒಂದು ರ‍್ಥಿಕ ರ‍್ಷದಲ್ಲಿ ೧೦೦ ದಿನ ಕೂಲಿ ಕೆಲಸವನ್ನು ನೀಡಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲಾಗುತ್ತಿದೆ.
ಈ ಮೊದಲು ೩೦೯ರೂ ಇದ್ದ ಕೂಲಿ ದರವನ್ನು ಪ್ರಸಕ್ತ ಸಾಲಿನ ಏಪ್ರೀಲ್ ೧, ೨೦೨೩ ರಿಂದ ನಿಂದ ೩೧೬ ರೂ ಗಳಿಗೆ ಕೂಲಿ ದರವನ್ನು ಹೆಚ್ಚಿಸಲಾಗಿದೆ.
ಸಮುದಾಯ ಕಾಮಗಾರಿಗಳಲ್ಲಿ ಕೆಲಸ ಮಾಡುದರ ಜೊತೆಗೆ ವೈಯಕ್ತಿಕ ಕಾಮಗಾರಿಗಳಾದ *ಬಚ್ಚಲು ಇಂಗು ಗುಂಡಿ, ಬದು ನರ‍್ಮಾಣ, ಕೃಷಿಹೊಂಡ, ದನದ ಶೆಡ್, ಕುರಿ/ ಮೇಕೆ ಸಾಕಾಣಿಕೆಗಾಗಿ ಶೆಡ್ ಗಳ ನರ‍್ಮಾಣ ಮಾಡಿಕೊಳ್ಳಲು ಅವಕಾಶಗಳು ಕಲ್ಪಿಸಲಾಗಿದೆ.
ಜೊತೆಗೆ ರೇಷ್ಮೆ ತೋಟಗಾರಿಕೆ ಬೆಳೆಗಳನ್ನು ಕೂಡ ಬೆಳೆಯಲು ಅವಕಾಶವಿದೆ. ಗ್ರಾಮೀಣ ಜನರ ರ‍್ವತೋಮುಖ ಅಭಿವೃದ್ಧಿಗೆ ಈ ಯೋಜನೆ ಸೌಲಭ್ಯಗಳನ್ನು ಒದಗಿಸಿದೆ. ಇಂತಹ ಅವಕಾಶಗಳನ್ನು ಪ್ರತಿಯೊಬ್ಬರು ಈ ಯೋಜನೆಯ ಮೂಲಕ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.
ವಿಶೇಷವಾಗಿ ನರೇಗಾ ಯೋಜನೆಯಲ್ಲಿ ಕೂಲಿಕಾರನ್ನು ಹೆಚ್ಚಿಸಬೇಕು. ರ‍್ಹರಿಗೆ ಕೈಗೆಟಕುವಂತೆ ಸೌಲಭ್ಯಗಳು ದೊರೆಯಬೇಕು. ಹೀಗೆ ಜನಸಾಮಾನ್ಯರಿಗೆ ರ‍್ಕಾರದ ಹಲವು ಯೋಜನೆಗಳ ಸೌಲಭ್ಯದ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯ.
ಈ ಸಂರ‍್ಭದಲ್ಲಿ ಪಂಚಾಯತಿ ಅಧ್ಯಕ್ಷರು, ಸದಸ್ಯರು, ರೈತ ಸಂಘದ ಸದಸ್ಯರು, ಸಂಜೀವಿನಿ ಸಂಘದ ಮಹಿಳೆಯರು, ಕರ‍್ಯರ‍್ಶಿಗಳು, ಬಿಲ್ ಕಲೆಕ್ಟರ್,ಜಿಕೆಎಂ, ವಾಟರ್ ಮೆನ್ಗಳು, ಸರ‍್ವಜನಿಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು