ಪಾವಗಡ
ಸೋಲಾರ್ ಪಾರ್ಕ್ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆಗೆ ಆಗಮಿಸಿದ್ದ ತುಮಕೂರು ಜಿಲ್ಲಾಧಿಕಾರಿಗಳಾದ ಕೆ ಶ್ರೀನಿವಾಸ್ ರವರಿಗೆ ಸಿ ಎಸ್ ಆರ್ ಫಂಡ್ ದುರುಪಯೋಗಿರುವ ಬಗ್ಗೆ ಬಳಸಮುದ್ರ ಗ್ರಾಮದ ಗ್ರಾಮಸ್ಥರಿಂದ ಮನವಿ ಪತ್ರ ಕೊಡಲಾಯಿತು.
ತಾಲೂಕಿನ ಗಡಿ ಗ್ರಾಮ ಪಂಚಾಯತಿಗಳಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ವಿಶ್ವವಿಖ್ಯಾತ ಸೋಲಾರ್ ಪಾರ್ಕ್ ಅನ್ನು ನಿರ್ಮಿಸಿ ವಳ್ಳೂರು ಮತ್ತು ತಿರುಮಣಿ ಗ್ರಾಮ ಪಂಚಾಯತಿ ವ್ಯಾಪ್ತಿ ಬರುವ ಎಲ್ಲಾ ಹಳ್ಳಿಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಈವರೆಗೂ ಅಭಿವೃದ್ಧಿಗೆ ಗೋಚರವಾಗದ
ಬಳಸಮುದ್ರ ಗ್ರಾಮವು ಅಧಿಕಾರಿಗಳ ನಿರ್ಲಕ್ಷಕ್ಕೆ ಗುರಿಯಾಗಿದೆ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸೌರಶಕ್ತಿಗೆ ಭೇಟಿ ಕೊಟ್ಟ ಜಿಲ್ಲಾಧಿಕಾರಿಗಳಾದ ಕೆ ಶ್ರೀನಿವಾಸ್ ರವರಿಗೆ ಗ್ರಾಮದ ಗ್ರಾಮಸ್ಥರು ವೆಂಕಟಮ್ಮನಹಳ್ಳಿ ನಾನಿ ನೇತೃತ್ವದಲ್ಲಿ ಮನವಿ ಪತ್ರ ಕೊಡಲಾಯಿತು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಅಧಿಕಾರಿಗಳ ನಿರ್ಲಕ್ಷವೇ ಕಾರಣವೆಂದು ಭಾವಿಸಿ, ಪಾರ್ಕಿನ ಅಂತರ್ಭಾಗದ ಗ್ರಾಮವಾದ
ಬಳಸಮುದ್ರವು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿ ಎಸ್ ಆರ್ ) ನಿಧಿಯಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಮಾಡಿದ್ದು ಈ ಗ್ರಾಮವು ಒಂದೇ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಭಿವೃದ್ಧಿ ಕಾಣದಾಗಿದೆ,
ಕಾರ್ಪೊರೇಟ್ ಖಾಸಗಿ ಕಂಪನಿಗಳು ಆವರಿಸಿದ ಗ್ರಾಮಗಳ ಸುತ್ತಮುತ್ತಲು ಸರ್ವಾಂಗೀಣ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಈ ನಿಧಿಯನ್ನು ಅತ್ಯವಶ್ಯಕವಾಗಿ ಕ್ರೂಡೀಕರಿಸಿರುತ್ತಾರೆ ಆದರೆ ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳಿಗೆ ಮಾತ್ರ ಈ ಗ್ರಾಮವು ಗೋಚರವಾಗದೇ ಇರುವುದು ಗ್ರಾಮದ ಗ್ರಾಮಸ್ಥರಿಗೆ ತೀವ್ರ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.
ಗ್ರಾಮದಲ್ಲಿ ಶಾಲಾ ಕೊಠಡಿಗಳು, ಚರಂಡಿ, ಸಿಸಿ ರಸ್ತೆ, ಗ್ರಾಮದಲ್ಲಿ ಉತ್ತಮ ಪಾರ್ಕನ್ನು ನಿರ್ಮಿಸಬೇಕೆಂದು ಗ್ರಾಮೀಣರ ಬಯಕೆಯಾದ್ದರಿಂದ ಇದೇ ಸಮಯವೆಂದು ಭಾವಿಸಿದ ಗ್ರಾಮಸ್ಥರು ತಾಲೂಕಿನ ಯುವ ಮುಖಂಡ ವೆಂಕಟಮ್ಮನಹಳ್ಳಿ ನಾನಿ ಅವರ ನೇತೃತ್ವವಹಿಸಿ, ಗ್ರಾಪಂ ಮಾಜಿ ಅಧ್ಯಕ್ಷ ಬಿ ಎನ್ ಗೋವಿಂದಪ್ಪ, ಮುಖಂಡ ಚಕ್ರಪ್ಪ, ಗ್ರಾ ಪo ಸದಸ್ಯ ಶರತ್ ಬಾಬು, ಮಾಜಿ ಸದಸ್ಯ ವೆಂಕಟಪ್ಪ, ರಾಮಲಿಂಗ ರಾಮಾಂಜಿ ಇನ್ನು ಹಲವರು ಸೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಕೊಟ್ಟು ಗ್ರಾಮದ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ತಿರುಮಣಿ ಭಾಗದ ಸಾರ್ವಜನಿಕರು ಕಂದಾಯ ಇಲಾಖೆಯ ಅಧಿಕಾರಿಗಳು, ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು