ಪಾವಗಡ :
ಸಮಾಜದಲ್ಲಿ ಅನಾದಿ ಕಾಲದಿಂದಲೂ ಬೇರು ಬಿಟ್ಟಿರುವ ಮೂಢನಂಬಿಕೆ ಹಾಗೂ ಹಲವು ಕಟ್ಟುಪಾಡುಗಳ ವಿರುದ್ಧ ಗ್ರಾಮದ ಹಿರಿಯರು ಜನರಲ್ಲಿ ಅರಿವು ಮೂಡಿಸಿ ಜನರಲ್ಲಿನ ಮೌಡ್ಯತೆಯನ್ನು ಹೋಗಲಾಡಿಸಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ ಎಸ್ ಹರಿಣಿ ಅವರು ತಿಳಿಸಿದರು.
ತಾಲ್ಲೂಕಿನ ಸಿಕೆಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಹಟ್ಟಿ ಗ್ರಾಮದಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಕಾನೂನು ‘ಅರಿವು ಮತ್ತು ನೆರವು’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಅವರು ಮಾತನಾಡುತ್ತಾ,
ಇತ್ತೀಚೆಗೆ ಕೊರಟಗೆರೆ ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಕಾಡುಗೊಲ್ಲರಹಟ್ಟಿಯಲ್ಲಿ ನಾಗರೀಕ ಸಮಾಜ ತಲೆ ತಗ್ಗಿಸುವ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು ಅಲ್ಲಿಯೇ ಒಂದು ಮಗು ಸಾವನ್ನಪ್ಪಿದೆ. ನಂತರ ಆರೋಗ್ಯವಾಗಿದ್ದ ಮಗು ಮತ್ತು ಬಾಣತಿಯನ್ನು ಕರೆತಂದು ದೂರದ ಹೊಲದಲ್ಲಿ ಗುಡಿಸಿಲು ಹಾಕಿ ತಾಯಿ ಮಗು ಇಬ್ಬರನ್ನು ಬಿಟ್ಟು ನಂತರ ಅಲ್ಲಿ ಮಗು ಮರಣ ಹೊಂದಿದೆ. ನಂತರ ಬಾಣಂತಿ ತುಂಬಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಗೊಲ್ಲರ ಹಟ್ಟಿಗಳಲ್ಲಿ ಇಂತಹ ಸಂಪ್ರದಾಯಗಳು ಈಗಲೂ ಇರುವುದನ್ನು ಕೇಳಿದರೆ ತುಂಬಾ ಆಶ್ಚರ್ಯವಾಗುತ್ತದೆ ಎಂದು ತಿಳಿಸಿದರು.
ತಾಲೂಕು ಕಾನೂನು ಸೇವಾ ಸಮಿತಿ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀಕಾಂತ್ ರವೀಂದ್ರ ರವರು ಮಾತನಾಡುತ್ತಾ , ಕಾನೂನನ್ನು ಪ್ರತಿಯೊಬ್ಬರು ಗೌರವಿಸಬೇಕು ಕಾನೂನನ್ನು ಯಾರು ಉಲ್ಲಂಘನೆ ಮಾಡಬಾರದು ಸಂಪ್ರದಾಯ ಮತ್ತು ಕಾನೂನಿಗೂ ತುಂಬಾ ಹತ್ತಿರವಾದ ಸಂಬAಧವಿದೆ. ಎಂದು ತಿಳಿಸಿದರು.
ಎಸ್ ಎಸ್ ಕೆ ಸಂಘದ ಅಧ್ಯಕ್ಷರಾದ ಸಿಎನ್ ಆನಂದ ರಾವ್ ರವರು ಮಾತನಾಡುತ್ತಾ, ಆರೋಗ್ಯ ಮತ್ತು ಕಾನೂನಿನ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯ ಸಿವಿಲ್ ನ್ಯಾಯಾಧೀಶರಾದ ಸುಶ್ಮಿತಾ ಮೂರ್ತಿ, ವಕೀಲ ಸಂಘದ ಅಧ್ಯಕ್ಷರು ಎಚ್ ವಿಶೇಷ ನಂದನ್, ಎನ್ ಪ್ರಭಾಕರ್ ರೆಡ್ಡಿ, ಕೆ ಓ ಜಾನಕಿರಾಮ್, ಸುಧಾ , ಶ್ರೀನಿವಾಸ್, ವಿ ಮಂಜುನಾಥ್ ಸುವರ್ಣಮ್ಮ ಪಿಡಿಒ ಸುದರ್ಶನ್, ತಿಮ್ಮರಾಜು, ವೆಂಕಟೇಶ್ ನಾಯಕ್, ಸಣ್ಣ ಚಿತ್ತಪ್ಪ , ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.