ತುಮಕೂರು
ಭೂಮಿ ಮೇಲೆ ಮನುಷ್ಯ ಸೇರಿದಂತೆ ಎಲ್ಲ ಜೀವಿಗಳು ಸಮೃದ್ದಿಯಾಗಿ ಜೀವಿಸಲು ಗಾಳಿ ನೀರು ಆಹಾರ ಮೂಲಭೂತವಾಗಿ ಬೇಕು. ಇದೆಲ್ಲವನ್ನು ನಮಗೆ ನೀಡುವ ಪರಿಸರದ ಸಂರಕ್ಷಣೆ ಅತ್ಯಗತ್ಯವಾಗಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ. ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಆಲದಮರ ಪಾರ್ಕ್ನಲ್ಲಿ ವರ್ಣೋದಯ ಆರ್ಟ್ ಗ್ರೂಪ್ ಟ್ರಸ್ಟ್ (ರಿ), ಪ್ರೆಸ್ ಕ್ಲಬ್ ತುಮಕೂರು, ಉತ್ಸವ್ ಕಲೆಕ್ಷನ್ ಹಾಗೂ ರಾಜಾ ಬ್ರಿಕ್ ಆ?ಯಂಡ್ ಟೈಲ್ಸ್ ಇಂಡಸ್ಟಿçÃಸ್ ಸಹಯೋಗದೊಂದಿಗೆ ಏರ್ಪಡಿಸಿದ್ದ ಪರಿಸರ ಸ್ನೇಹಿ ಗಣೇಶ ಮೂರ್ತಿ ರಚನಾ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವೈರುಧ್ಯಗಳ ನಡುವೆ ನಾವು ಬದುಕುತ್ತಿದ್ದೇವೆ. ಜಾಗತಿಕ ತಾಪಮಾನ ಪ್ರತಿ ವರ್ಷ ಏರುತ್ತಾ ಇದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ ಎಂಬ ಆತಂಕ ಎದುರಾಗಿದೆ. ವಿಶ್ವದಲ್ಲೇ ಅತ್ಯಂತ ಹೆಚ್ಚು ಕ್ಯಾನ್ಸರ್ ಇರುವಂತಹ ದೇಶ ನಮ್ಮದು. ಇದಕ್ಕೆ ನಾವು ಸೇವಿಸುವ ಆಹಾರ ಕಲುಷಿತವಾಗಿರುವುದೇ ಕಾರಣ ಎಂದರು.
ವಿದ್ಯಾವಾಹಿನಿ ಸಮೂಹ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್‌ಕುಮಾರ್ ಮಾತನಾಡಿ, ಕೆಲ ದಿನಗಳಲ್ಲಿ ಹಬ್ಬ ಪ್ರಾರಂಭವಾಗುತ್ತದೆ ಎಂದರು.
ಪತ್ರಕರ್ತ ಟಿ.ಎನ್. ಮಧುಕರ್ ಮಾತನಾಡಿ, ಭಾನುವಾರ ರಜೆ ದಿನವಾದರೂ ಸಹ ಏನಾದರೂ ಕಲಿಯಬೇಕು ಎಂಬ ಹಂಬಲವಿರಬೇಕು, ಸೋಮಾರಿಗಳಾಗದೆ ಏನಾದರೂ ಇಂದು ಆಕ್ಟಿವಿಟಿ ಮಾಡುವ ಮೂಲಕ ಹೊಸ ವಿಷಯವನ್ನು ಕಲಿಯಬೇಕು. ಮಕ್ಕಳು ಮಣ್ಣಿನಲ್ಲಿ ಆಟವಾಡಿ ಬೆಳೆಯಬೇಕು, ಬಟ್ಟೆಯನ್ನು ತೊಳೆಯಬಹುದು, ನಾಳೆ ಮಕ್ಕಳ ಭವಿಷ್ಯ ತೊಳೆಯಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕು ಎಂದರು.
ಕನ್ನಡ ಸೇನೆಯ ಧನಿಯಾಕುಮಾರ್ ಮಾತನಾಡಿ, ಪರಿಸರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಪ್ಲಾಸ್ಟಿಕ್ ಮುಕ್ತ ಪರಿಸರ ರಕ್ಷಣೆ ಮಾಡುವ ಜತೆಗೆ ಮನೆ ಮುಂದೆ ಸಸಿಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು. ಮೊದಲು ಬಾವಿ, ಕೆರೆ ನೀರು ಕುಡಿದರೂ ನೂರಾರು ವರ್ಷ ಬದುಕುತ್ತಿದ್ದರು. ಆದರೆ ಇಂದು ಶುದ್ಧೀಕರಿಸಿದ ನೀರು ಕುಡಿದರೂ ಸಹ ನೂರು ವರ್ಷ ಬದುಕುವುದು ಕಷ್ಟವಾಗಿದೆ. ಆಲದಮರದ ಪಾರ್ಕ್ ಗೆ ಮುಂದಿನ ದಿನಗಳಲ್ಲಿ ಬೇಕಾದ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಶಶಿಧರ್ ದೋಣಿಹಕ್ಲು ಪ್ರಾಸ್ತಾವಿಕ ನುಡಿಗಳನ್ನಾಡಿ, ಗಣೇಶ ಹಬ್ಬದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಂದ ಪರಿಸರ ರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಈ ಸಂದರ್ಭದಲ್ಲಿ ವರ್ಣೋದಯ ಆರ್ಟ್ ಗ್ರೂಪ್ ಟ್ರಸ್ಟ್ ಅಧ್ಯಕ್ಷ ಕಿರಣ್‌ಕುಮಾರ್, ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಯೋಗೀಶ್, ಪತ್ರಕರ್ತರಾದ ಜಗನ್ನಾಥ್, ದಾದಾಪೀರ್, ಈಶ್ವರ್, ಸತೀಶ್, ರಂಗನಾಥ್ ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.