ಕೊರಟಗೆರೆ
ಧಾನ್ ಫೌಂಡೇಷನ್ ಹಾಗೂ ಕಸ್ತೂರಿಬಾ ಆಸ್ಪತ್ರೆ ಸಹಯೋಗದಲ್ಲಿ ಪಟ್ಟಣದ ಶ್ರೀ ಗುಂಡ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.
ಸುರಕ್ಷಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಸದಸ್ಯರು ಆರೋಗ್ಯ ಶಿಬಿರವನ್ನು ಉದ್ಘಾಟನೆ ಮಾಡಿದರು.
ಧಾನ್ ಫೌಂಡೇಷನ್ ನ ಸಂಯೋಜಕ ಶಶಿಧರ್ ಮಾತನಾಡಿ, ಬಡವರ ಆರೋಗ್ಯವನ್ನು ಕಾಪಾಡುವುದು, ಬಡವರ ಆರ್ಥಿಕತೆ ಸುಧಾರಿಸುವುದು ಹಾಗೂ ಬಡತನ ನಿರ್ಮೂಲನೆ ನಮ್ಮ ಸಂಸ್ಥೆಯ ಮೂಲ ಉದ್ದೇಶ ಎಂದು ತಿಳಿಸಿದರು.
ಸುರಕ್ಷಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಶಿವಶಂಕರ್ ಮಾತನಾಡಿ, ಇಂತಹ ಸಾಮಾಜಿಕ ಸೇವಾ ಮನೋಭಾವನೆ ಹೊಂದಿರುವ ಸಂಘ-ಸAಸ್ಥೆಗಳು ಮತ್ತಷ್ಟು ಬರಬೇಕು, ಬಡವರ ಪರ ಕೆಲಸ ಮಾಡಬೇಕು, ಬಡ ಹೆಣ್ಣು ಮಕ್ಕಳ ಆರ್ಥಿಕತೆ ಸುಧಾರಿಸಬೇಕು. ಇಂದು ಇಲ್ಲಿ ನಡೆಯುತ್ತಿರುವ ಉಚಿತ ಆರೋಗ್ಯ ಮೇಳದಿಂದ ಸಾಕಷ್ಟು ಬಡವರಿಗೆ ಆರೋಗ್ಯ ಲಭಿಸಿದಂತಾಯಿತು ಎಂದರು.
ಕಾರ್ಯಕ್ರಮದ ಸಂದರ್ಭದಲ್ಲಿ ಕಸ್ತೂರಿಬಾ ಆಸ್ಪತ್ರೆಯ ವೈದ್ಯರಾದ ಭುವನೇಶ್ವರಿ,ಸುಜಾತ,ಮಮತಾ, ಸುರಕ್ಷಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಶಿವಶಂಕರಪ್ಪ ರಾಘವೇಂದ್ರ ಹನುಮಂತರಾಯಪ್ಪ ಮಧುಸೂದನ್ ಧಾನ ಫೌಂಡೇಶನ್ ಸಂಸ್ಥೆಯ ನಂದಿನಿ, ಮಂಜುಳಾ, ರಂಗಲಕ್ಷ್ಮೀ, ರಾಜೇಶ್ವರಿ, ಮಲ್ಲಿಕಾರ್ಜುನ್, ರತ್ನಮ್ಮ, ಮರ್ಜಿನ ಕಟ್ಟೆ ಗಣಪತಿ ಮಹಿಳಾ ಒಕ್ಕೂಟದ ನಿರ್ದೇಶಕರುಗಳು ಹಾಗೂ ಸ್ಥಳೀಯರು ಹಾಜರಿದ್ದರು.