ತುಮಕೂರು
ಕರ್ನಾಟಕರಾಜ್ಯವನ್ನು ಮುಂಗಾರು ತಡವಾಗಿ ಪ್ರವೇಶಿಸಿದ್ದರಿಂದ ಮತ್ತು ತಡವಾಗಿಯಾದರು ಮುಂಗಾರುಸುರಿದರು ರಾಜ್ಯದ ಹಲವಡೆ ಸುಮಾರು ೨೫ ಲಕ್ಷ ಎಕರೆ ಪ್ರದೇಶದಲ್ಲಿ ಭಿತ್ತನೆಯು ನಡೆಯಲಿಲ್ಲ ವೆಂದು ಸರಕಾರದ ಅಂಕಿ ಅಂಶಗಳು ಹೇಳುತಿವೆ. ಆದ್ದರಿಂದ ರಾಜ್ಯವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ಮತ್ತು ಅಗತ್ಯ ಪರಿಹಾರ ಕ್ರಮ ಕೈಗೂಳ್ಳುವಂತೆ ಒತ್ತಾಯಿಸಿ ದಿನಾಂಕ:೨೦-೯-೨೦೨೩ ರಂದು ಜಿಲ್ಲಾಧಿಕಾರಿಗಳ ಕಛೇರಿ ಎದರು ಪ್ರತಿಭಟನೆಯನ್ನು ಉದ್ದಶೇಸಿ ಮತನಾಡುತ್ತಾ ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ಸಿ.ಅಜ್ಜಪ್ಪ ಸರ್ಕರವನ್ನು ಅಗ್ರಹಿಸಿದರು.ಮುಂದುವರದು ಮತನಾಡುತ್ತಾ ಒಕ್ಕೂಟ ಸರಕಾರದ ಮೇಲೆ ಹೆಚ್ಚಿನ ಒತ್ತಡ ಹೇರಿ ನೆರವು ಪಡೆಯಲು ಮುಂದಾಗಲು ಕರನೀಡಿದರು.
ಸಿಪಿಐ(ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯಬಿ.ಉಮೇಶ್ ಮತನಾಡುತ್ತಾ ರಾಜ್ಯ ಸರ್ಕಾರ ಗ್ಯಾರಂಟಿಗಳ ಹೆಸರಲ್ಲಿ ಮಾತ್ರ ಆಡಳಿತ ನಡೆಸದೆ ಇತರೆವಿಷಯಗಳ ಬಗ್ಗೆ ಗಮನಹರಿಸಿ ಮಹಿಳೆಯ ಸಬಲಿಕರಣದಿಂದ ಕೂಳ್ಳುವ ಶಕ್ತಿಯಿಂದ ಹಣ ಚಲಾವಣೆಯಿಂದ ಅಭಿವೃಧ್ದಿ ಸಾಧ್ಯವಾಗುತ್ತದೆ ಎಂದರು ಜಿಲ್ಲೆಯಲ್ಲಿ ಬಿತ್ತಿದ ಬೀಜ ಉಟ್ಟದೆ ಬರಗಾಲ ಹಿನ್ನೆಲೆಯಲ್ಲಿ ಹತ್ತು ತಾಲ್ಲೂಕುಗಳನ್ನು ಬರಗಾಲ ಎಂದು ಘೋಷಿಸಬೇಕು ನಷ್ಟವಾದ ಬೆಳೆಗಳಿಗೆ ಪರಿಹಾರ ಘೋಷಣೆ ಮಾಡಬೇಕೆಂದು ಸರ್ಕರವನ್ನು ಒತ್ತಾಯಿಸಿದರು.ಕೆಂದ್ರ ಸರ್ಕಾರ ಎಲ್ಲವು ರಾಜ್ಯಸಕಾರದ್ದು ಅಂತ ನೆಪ ಹೇಳುವದನ್ನು ಬಿಟ್ಟು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದುರು.ವಿಷೇಶ ಅಧಿವೇಶನ ನಡೆಯುತ್ತಿದ್ದು ಅದರಲ್ಲಿ ಮಹಿಳಾ ಮಿಸಾಲಾತಿ,ಒಂದು ದೇಶ ಒಂದು ಚುನಾವಣೆ ವಿಷಯಗಳನ್ನು ರ್ಚಚಗೆ ತರಲಾಗುತ್ತಿದೆ,ಘೋಷಣೆಗಳು ಜನರಿಗೆ ಸಿಗುವಂತಮಾಡಬೇಕೆ ಹೂರತು ಚುನಾವಣೆ ಗೆಲುವಿಗೆ ಮಾತ್ರ ಸೀಮಿತವಾಗಬಾರದೆಂದರು.
ತಿಪಟೂರು ತಾಲ್ಲೂಕು ಕಾರ್ಯದರ್ಶಿ ಆರ್.ಎಸ್ .ಚನ್ನಬಸವಣ್ಣ ಮತನಾಡಿ ಬೆಳೆನಷ್ಟ ಪರಿಹಾರ ಒದಗಿಸಿಬೇಕು,ಮುಂದಿನ ಸಾಲಿಗೆ ಉಚಿತ ಬೀಜ,ಗೂಬ್ಬರ,ಕೀಟ ನಾಶಕಗಳನ್ನು ಒದಗಿಸಬೇಕು,ಬಿತ್ತನೆಯು ಹಾಗೂ ಕಾಟವು ಕೆಲಸಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ತರಬೇಕೆಂದರು.
ಸಿಪಿಐ(ಎA) ನಗರ ಸಮಿತಿ ಸದಸ್ಯೆ ಟಿ.ಆರ್.ಕಲ್ಪಾನ ಮತನಾಡಿ ಬಡ ರೈತರ ಹಾಗೂ ಕೂಲಿಕಾರರ ಮತ್ತು ಸ್ತಿç ಶಕ್ತಿ ಸಂಘಟನೆಗಳ ಮಹಿಳೆಯರ ಎಲ್ಲಾ ಸಾಲ ಮನ್ನಾ ಮಾಡಬೇಕು.ಶ್ರಿಮಂತ ರೈತರ ಸಾಲ ದಿರ್ಘಾವಾದಿ ಸಾಲವಾಗಿ ಪರಿರ್ವತಿಸಿ ಬಡ್ದಿ ಮನ್ನಾ ಮಾಡಬೇಕೆಂದರು.
. ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ರ‍್ರತಿಭಟನೆಯನ್ನು ಉದ್ದೇಶಿ ಮತನಾಡುತ್ತಾ ಬರಗಾಲದ ಕಾರಣದಿಂದ ಬರ ಬಾದಿತರ ಶೈಕ್ಷಣಿಕ ಶುಲ್ಕಗಳನ್ನು ಮನ್ನಾ ನಾಡಬೇಕು.ಆಹಾರ ಧಾನ್ಯಗಳ ಕೃತಕ ಅಭಾವ ಸೃಷ್ಠಿಸಿ ಕಾಳ ಸಂತೆಯಲ್ಲಿ ಗ್ರಾಹಕರನ್ನು ಸುಲಿಗೆಗೂಳಪಡಿಸುವ ಕಾಳ ಸಂತೆಕೊರರ ವಿರುದ್ದ ಕಠಿಣ ಕ್ರಮಜರಿಗಿಸಬೇಕೆಂದರು.
ಪ್ರತಿಭಟನೆಯಲ್ಲಿದುಡ್ಡನಂಜಪ್ಪ,ಬಸವಾರಾಜು,ಇAತಿಯಾಜ್,ಖಲೀಲ್,ಲಕ್ಮೀಕಾAತ್,ಲಕ್ಷöಮ್ಮ,ಮಹಾಲಕ್ಷಿö್ಮ,ಸಿದ್ದಗAಗಮ್ಮ,ಸಿದ್ದಲಿAಗಯ್ಯ,ಬೂಜರಾಜು,ಪರಮೇಶ್,ಶ್ರೀನಿವಾಸ ರಫೀಕಾಹ್ಮದ್, ಮುಂತಾದವರು ಭಾಗವಹಿಸಿದ್ದರು. ಮನವಿಯನ್ನು ಅಪಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.