ತುಮಕೂರು:

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕ್ರೀಡಾಕೂಟದ ಅಂಗವಾಗಿ ಶಾಲೆಗೆ ಭೇಟಿ ನೀಡಿ ಸಿ.ಎಸ್.ಐ ಸಭೆಯ ಪಾಲಕರು ಹಾಗೂ ಸಮುದಾಯದ ಮುಖಂಡರಿಗೆ ಶುಭ ಕೋರಿದರು.


ಸಿಎಸ್‌ಐ ವೆಸ್ಲಿ ದೇವಾಲಯದ ೧೭೫ ವರ್ಷಾಚರಣೆಯ ಅಂಗವಾಗಿ ಅಂತರ ಸಭೆಗಳ ಕ್ರೀಡಾಕೂಟವನ್ನು ಬಿಷಫ್ ಸಾರ್ಜೆಂಟ್ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕ್ರೀಡಾಕೂಟದ ಅಂಗವಾಗಿ ಶಾಲೆಗೆ ಭೇಟಿ ನೀಡಿ ಸಿ.ಎಸ್.ಐ ಸಭೆಯ ಪಾಲಕರು ಹಾಗೂ ಸಮುದಾಯದ ಮುಖಂಡರಿಗೆ ಶುಭ ಕೋರಿದರು.
ಸಿಎಸ್‌ಐ ವೆಸ್ಲಿ ದೇವಾಲಯದ ೧೭೫ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿರುವ ಕ್ರೀಡಾಕೂಟವನ್ನು ಕೆಪಿಸಿಸಿ ವಕ್ತಾರರಾದ ನಿಕೇತ್‌ರಾಜ್ ಮೌರ್ಯ,ಏರಿಯಾ ಚೆರ್ಮನ್ ಮನೋಜ್‌ಕುಮಾರ್ ವೆಸ್ಲಿ ದೇವಾಲಯದ ಸಭಾ ಪಾಲಕರಾದ ಮಾರ್ಗನ್ ಸಂದೇಶ್, ಸುಧೀರ್,ವಿಕ್ಬರ್ ಜೀ.ಹೆಬಿಕ್ ,ಮಿಥುನ್ ಕುಮಾರ್, ವೋಕೇಷನ್ ಸೆಂಟರ್‌ನ ಅಧೀಕ್ಷಕರಾ ಪ್ರಸಾದ್, ಯುಸಿಸಿ ಪ್ರಾಂಶುಪಾಲರಾದ ಜಾಯ್ ನರೇಲ್,ವೆಸ್ಲಿ ದೇವಾಲಯದ ಕಾರ್ಯದರ್ಶಿ ಸುರೇಶ್‌ಬಾಬು,ಖಜಾಂಚಿ ಸುಂದರ್‌ರಾಜ್ ಅವರುಗಳು ಶಾಂತಿಯ ಸಂಕೇತವಾದ ಪಾರಿವಾಳ ಮತ್ತು ಬಲೂನ್ ಹಾರಿ ಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ನಿಕೇತರಾಜ್ ಮೌರ್ಯ,ಒಂದು ಕಾಲದಲ್ಲಿ ಶಿಕ್ಷಣವೆಂಬುದು ದಲಿತರಿಗೆ, ಆದಿವಾಸಿಗಳಿಗೆ, ಹಿಂದುಳಿದ ಸಮುದಾಯಗಳಿಗೆ ದೂರವಾಗಿದ್ದ ಸಂದರ್ಭದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಶೋಷಿತ ಸಮುದಾಯಗಳಿಗೆ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೊದಲ ಪ್ರಯತ್ನ ನಡೆಸಿದರು.ರೋಗಿಗಳ ಸೇವೆಯಲ್ಲಿ ದೇವರನ್ನು ಕಾಣು ಎಂಬAತಹ ರೀತಿಯಲ್ಲಿ ಬದುಕಿದ ಮದರ್ ತೇರೆಸಾ ಜೀವನವನ್ನು ನಾವ್ಯಾರು ಮರೆಯುವಂತಿಲ್ಲ. ಮನುಷ್ಯನೊಳಗೂ ಒಬ್ಬ ದೇವರಿದ್ದಾನೆ ಎಂದು ತೋರಿಸಿಕೊಟ್ಟ ಸಮುದಾಯ ಕ್ರಿಶ್ಚಿಯನ್ ಸಮುದಾಯ.ಜಾತಿ,ಧರ್ಮದ ನಡುವೆ ಮನುಷ್ಯರ ನಡುವೆ ದ್ವೇಷ ಬಿತ್ತುತ್ತಿರುವ ಈ ಕಾಲದಲ್ಲಿ, ಈ ಕ್ರೀಡಾಕೂಟದ ಮೂಲಕ ಮನುಷ್ಯ, ಮನುಷ್ಯರ ನಡುವೆ ಸೇತುವೆ ಕಟ್ಟುವ ಕೆಲಸವನ್ನು ನಾವು ಮಾಡೋಣ ಎಂದು ಶುಭ ಹಾರೈಸಿದರು.
ಸಿಎಸ್‌ಐ ಏರಿಯಾ ಚೆರ್ಮನ್ ರೇವರೆಂಡ್ ಮನೋಜ್‌ಕುಮಾರ್ ಮಾತನಾಡಿ,ಸಮುದಾಯದ ಯುವಜನರನ್ನು ಸಂಘಟಿಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.ಸಿಎಸ್‌ಐ ವೆಸ್ಲಿಮ ದೇವಾಲಯದ ವ್ಯಾಪ್ತಿಗೆ ಒಳಪಡುವ ಎಲ್ಲಾ ಜಿಲ್ಲೆಗಳ ಕ್ರಿಕೆಟ್, ಥ್ರೋಬಾಲ್, ಬ್ಯಾಡ್ಮಿಂಟನ್, ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುವ ನೂರಾರು ಕ್ರೀಡಾಪಟುಗಳು ಇಲ್ಲಿ ಆಗಮಿಸಿದ್ದಾರೆ. ಎಲ್ಲರೂ ಶಾಂತಿಯಿAದ ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಿ, ಕ್ರೀಡಾಕೂಟವನ್ನು ಯಶಸ್ವಿಗೊಳಿಸೋಣ ಎಂದು ಸಲಹೆ ನೀಡಿದರು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖಂಡರಾದ ಅನಿಲ್ ನರೋನ ಅಬ್ರಾಹಂ, ಹೆನ್ರಿ ವಿಜಯಕುಮಾರ್, ರಾಜನ್ ಕುಮಾರಿ,ಮನನೋಜ್ ಪ್ರಭಾಕರ್, ಕಾರ್ಯಕ್ರಮದ ಸಂಯೋಜನಕರಾದ ಸಂಜೀವ್‌ಸುAದರ್ ಕುಮಾರ್, ಹಾಗೂ ಎಲ್ಲಾ ಸಭೆಯ ಸದಸ್ಯರು ಮತ್ತು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

(Visited 1 times, 1 visits today)