ತುಮಕೂರು
ಸಾಮಾಜಿಕ ಕಳಕಳಿಯ ಬದ್ಧತೆಯನ್ನು ಹೊತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷ ಜನಾಗ್ರಹ ಚಳಿವಳಿ ಅ. ೭ ರಂದು ಪ್ರತಿಭಟನೆ ಮತ್ತು ಮೆರವಣಿಗೆಯನ್ನು ನಡೆಸಲಿದೆ
ಕೊಟ್ಟ ಭರವಸೆ ಈಡೇರಿಸಿ ಜನರ ನೈಜ ಸಮಸ್ಯೆಗಳನ್ನು ಪರಿಹರಿಸಲು ಅಕ್ಟೋಬರ್ ೭ರಂದು ಬೆಳಗ್ಗೆ ೧೧:೦೦ ಟೌನ್ ಹಾಲ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿಗಳ ವರೆಗೆ ಮೆರವಣಿಗೆಯ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹಿಂದಿನ ೪೦% ಪರ್ಸೆಂಟ್ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನರು ಬೇಸತ್ತು. ಬದಲಾವಣೆ ಬಯಸಿ ಕಾಂಗ್ರೆಸ್ ಸರ್ಕಾರವನ್ನು ಆಡಳಿತಕ್ಕೆ ತಂದಿದ್ದಾರೆ. ಬಹುಮತದಿಂದ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೊಳಿಸುವ ಬರದಲ್ಲಿ ಬೆಲೆ ಏರಿಕೆ ಮತ್ತು ತೆರಿಗೆ ಹೊರೆ ಮಾಡಿ ಜನರಿಗೆ ಬೇಸರ ತಂದಿದೆ. ಸಿದ್ದರಾಮಯ್ಯ ಮತ್ತು ಡಿ ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜನತೆಗೆ ಆರು ಗ್ಯಾರಂಟಿಗಳನ್ನು ಕೊಟ್ಟಿದ್ದು ಅವುಗಳಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ.
ಆದರೆ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ತಾತ್ಕಾಲಿಕವಾದ ನೆರವು ನೀಡಿದೆ. ಸರ್ಕಾರದ ಈ ನಡೆಯನ್ನು ಭಾರತೀಯ ಕಮ್ಯನಿಸ್ಟ್ ಪಕ್ಷ ತಮ್ಮ ನಿಲುವನ್ನು ಸ್ವಾಗತಿಸುತ್ತದೆ. ಸಂಘಟಿತ ಕಾರ್ಮಿಕ ವರ್ಗದ ವಿಚಾರದಲ್ಲಿ ಈಗಿನ ಸರ್ಕಾರ ಮಲತಾಯಿ ಧೋರಣೆ ಹೊಂದಿದೆ. ಕಾರ್ಮಿಕ ಸವಲತ್ತು ಕಾರ್ಯಕ್ರಮಕ್ಕೆ ಸಂಬAಧ ಭಾರತೀಯ ಕಮ್ಯುನಿಸ್ಟ್ ಪಕ್ಷ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿದ್ದು. ಸಂಘಟಿತ ಕಾರ್ಮಿಕರಿಗಾಗಿ ಘೋಷಿಸಿದ ಆರನೇ ಗ್ಯಾರಂಟಿ ಜಾರಿಗೊಳಿಸಬೇಕೆಂದು ಆಗ್ರಹಿಸುತ್ತಾ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಕೆಲವು ಪ್ರಮುಖ ಭರವಸೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮತ್ತು ಜನ ಸಮುದಾಯದ ಎದು ರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಅಕ್ಟೋಬರ್ ೭ರಂದು ೨೦೨೩ನೇ ರಾಜ್ಯದ್ಯಂತ ಜನಾಗ್ರಹ ಚಳುವಳಿ ಕಾರ್ಯಕ್ರಮವನ್ನು ಭಾರತೀಯ ಕಮ್ಯನಿಸ್ಟ ಪಕ್ಷ ಹಮ್ಮಿಕೊಂಡಿದೆ.
ಹಾಗೆಯೇ ತುಮಕೂರು ನಗರದಲ್ಲಿಯೂ ಸಿಪಿಐ ನೇತೃತ್ವದಲ್ಲಿ ಜಿಲ್ಲಾ ಘಟಕ ತುಮಕೂರು ಟೌನ್ ಹಾಲ್ ಸರ್ಕಲ್ ನಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಾರ್ಮಿಕರ ಬೇಡಿಕೆಗಳ ಒತ್ತಾಯದ ವಿಚಾರವಾಗಿ ಪ್ರತಿಭಟನೆ ಮತ್ತು ಮೆರವಣಿಗೆ ಕಾರ್ಯಕ್ರಮಕ್ಕೆ ಸಂಬAಧ ತುಮಕೂರು ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಸುದ್ದಿಘೋಷ್ಠಿ ನಡೆಸಲಾಯಿತು. ಸುದ್ದಿಘೋಷ್ಠಿಯಲ್ಲಿ ಈ ಪ್ರತಿಭಟನೆಗೆ ಕಾರ್ಮಿಕರು. ಪಕ್ಷದ ಕಾರ್ಯಕರ್ತರು.ರೈತರು.ಮಹಿಳೆಯರು.ವಿದ್ಯಾರ್ಥಿ ಯುವಜನರು ಭಾಗವಹಿಸಿ ಯಶಸ್ವಿ ಗೊಳಿಸಬೇಕು ಎಂದು ಮನವಿ ಮಾಡಿದರು. ಗೋಷ್ಟಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಗಿರೀಶ್ ರವರು. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರು ಕಂಬೇಗೌಡರವರು. ಜಿಲ್ಲಾ ಖಜಾಂಚಿ ಅಶ್ವಥ್ ನಾರಾಯಣ್ ರವರು. ಚಂದ್ರಶೇಖರ್ ಜಿಲ್ಲಾ ಸಹ ಕಾರ್ಯದರ್ಶಿಗಳು. ಗೋವಿಂದರಾಜು ಜಿಲ್ಲಾ ಸಹಕಾರಿದರ್ಶಿಗಳು. ಗೋವಿಂದರಾಜು ಸಿಎಸ್ ತಾಲೂಕು ಕಾರ್ಯದರ್ಶಿ ತಿಪಟೂರು. ರಾಮಕೃಷ್ಣ ಕಾರ್ಯದರ್ಶಿ ಪಾವಗಡ ತಾಲೂಕು ಕಾರ್ಯದರ್ಶಿ. ಸಿರಾ ಶಶಿಕಾಂತ್. ರುದ್ರಪ್ಪ ಇನ್ನೂ ಮುಂತಾದವರು ಭಾಗವಹಿಸಿದ್ದರು.