ಪಾವಗಡ


ಪಟ್ಟಣದ ಹಳೇ ಸಂತೆ ಮೈಧಾನದಲ್ಲಿ ಅಕ್ರಮವಾಗಿ ಮೆಕಾನಿಕ್ ಷಾಪ್ ಕಳೆದ ೧ ತಿಂಗಳ ಹಿಂದೆ ತಲೆ ಎತ್ತಿದ್ದು ಅಕ್ರಮವಾಗಿ ಈ ಪೆಟ್ಟಿಗೆ ಅಂಗಡಿಯನ್ನು ಇಟ್ಟುಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಮಾದ್ಯಮಗಳಲ್ಲಿ ವರದಿಯಾದರೂ ಸಹ ಈ ಬಗ್ಗೆ ಪುರಸಭೆ ಅಧಿಕಾರಿಗಳು ಈ ಶೇಡ್ ನ್ನು ತೆರವುಗೊಳಿಸಲು ಮುಂದಾಗುತ್ತಿಲ್ಲಾ ಇದರಿಂದ ಪಟ್ಟಣದ ಪುರಜನರು ಪುರಸಭೆಯ ವಿರುದ್ದ ತಮ್ಮ ತೀವ್ರತರಹದ ಆಕ್ರೋಶ ಹೊರಹಾಕುತ್ತಿದ್ದಾರೆ.
ಹಳೇ ಸಂತೆ ಮೈಧಾನ ಸುಮಾರು ಎರಡು ಎಕರೆ ಜಾಗ ಇದ್ದು, ಪಟ್ಟಣದ ಬಳ್ಳಾರಿ ರಸ್ತೆಯ ಮಾರ್ಗದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಳೆದ ೧೦ ವರ್ಷಗಳ ಹಿಂದೆ ಸ್ಥಳಾಂತರವಾಗಿದ್ದು, ಅಂದಿನಿAದ ಇಲ್ಲಿಯವರೆಗೂ ಈ ಸ್ಥಳ ಖಾಲಿ ಇದೆ, ಅದರೆ ಪುರಸಭೆ ಈ ಸ್ಥಳವನ್ನು ಅಭಿವೃದ್ದಿ ಮಾಡುವಲ್ಲಿ ವಿಫಲವಾಗಿದ್ದು, ಇದೆ ಸಂತೆ ಮೈಧಾನದಲ್ಲಿ ೧೦ ರಿಂದ ೨೦ ತರಕಾರಿ ಅಂಗಡಿಗಳನ್ನು ಪುರಸಭೆಯಿಂದ ಬಾಡಿಗೆಗೆ ನೀಡಲಾಗಿದೆ, ಉಳಿದ ಸ್ಥಳ ಖಾಲಿ ಇದ್ದು ಈ ಸ್ಥಳವನ್ನು ಸಾರ್ವಜನೀಕರು ಬೇಕಾಬಿಟ್ಟಿ ಉಪಯೋಗಿಸಿಕೊಳ್ಳುತ್ತಿದ್ದಾರೆ, ಸಂಜೆ ಹೊತ್ತು ಕುಡುಕರ ತಾಣವಾಗಿದೆ, ಪಟ್ಟಣದ ತ್ಯಾಜ್ಯವೆಲ್ಲಾ ಇದೆ ಸ್ಥಳದಲ್ಲಿ ಸುರಿಯುತ್ತಾರೆ, ಅದರೆ ಇಲ್ಲಿಯವರೆಗೂ ಪುರಸಭೆಯಿಂದ ಈ ಸ್ಥಳಕ್ಕೆ ನಾಮಫಲಕ ಅಳವಡಿಸಿಲ್ಲಾ,
ನಮಗೂ ಅವಕಾಶ ಕೊಡಿ
ಇನ್ನು ಕೆಲ ವ್ಯಾಪಾರಸ್ಥರು ನಮಗೂ ಅವಕಾಶ ಕಲ್ಪಿಸಿಕೊಡಬೇಕು ಇಲ್ಲಿ ಶೇಡ್ ಗಳನ್ನು ನಿರ್ಮಾಣ ಮಾಡಿಕೊಳ್ಳಲು ಅವಕಾಶ ಕಲ್ಪಸಿಕೊಡುವಂತೆ ಮನವಿ ಸಲ್ಲಿಸಲು ರೆಡಿಯಾಗಿದ್ದಾರೆ,
ಈ ಸ್ಥಳವನ್ನು ಯಾರೆಂದರೆ ಅವರು ಅಕ್ರಮವಾಗಿ ಅತಿ ಕ್ರಮಿಸಿಕೊಳ್ಳುತ್ತಿದ್ದು, ಇನ್ನು ಸ್ವಲ್ಪ ದಿನ ಕಳೆದರೆ ಹಳೆ ಸಂತೆ ಮೈಧಾನವನ್ನು ಪೂರ್ತಿ ಅಕ್ರಮಿಸಿಕೊಳ್ಳುತ್ತಾರೆ ಎಂದು ಪಟ್ಟಣದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ,
ನಿದ್ದೆಗೆ ಜಾರಿದ ಪುರಸಭಾ ಸದಸ್ಯರುಗಳು
ಪುರಸಭೆಯ ಅಧ್ಯಕ್ಷರ ಹುದ್ದೆ ಆಯ್ಕೆಗೆ ಸರ್ಕಾರದಿಂದ ಮಾರ್ಗಸೂಚಿ ಬಂದಿಲ್ಲಾವಾದ್ದರಿAದ ಮಧುಗಿರಿ ಉಪವಿಭಾಗಾಧಿಕಾರಿಗಳು ಅಡತಾಧಿಕಾರಿಗಳಾಗಿದ್ದು, ಅದರೆ ಎ.ಸಿ. ಸಾಹೇಬರು ಇಲ್ಲಿಯವರೆಗೂ ಪಾವಗಡದ ಪುರಸಭೆಗೆ ತಿರಿಗಿಯೂ ನೋಡಿಲ್ಲಾ ಎಂದು ಸಾರ್ವಜನಿಕರು ಅರೋಪಿಸುತ್ತಿದ್ದಾರೆ, ಇನ್ನು ೨೩ ವಾರ್ಡುಗಳ ಸದಸ್ಯರುಗಳು ಸಹ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲಾ, ಪಟ್ಟಣದ ಅಭಿವೃದ್ದಿ ಬಗ್ಗೆ ಚಿಂತೆ ಮಾಡುತ್ತಿಲ್ಲಾ ಎಂದು ಪಟ್ಟಣದ ಜನತೆ ಅಲವತ್ತುಕೊಳ್ಳುತ್ತಿದ್ದಾರೆ, ಹೀಗಲಾದರೂ ಪುರಸಭಾ ಅಧಿಕಾರಿಗಳು ಮತ್ತು ಸದಸ್ಯರುಗಳು ಎಚ್ಚೆತ್ತುಕೊಂಡು ಅಕ್ರಮವಾಗಿ ಹಳೆ ಸಂತೆ ಮೈಧಾನದಲ್ಲಿ ನಿರ್ಮಾಣ ಮಾಡಿರುವ ಮೆಕಾನಿಕ್ ಶೆಡ್ ನ್ನು ತೆರವುಗೊಳಿಸುತ್ತಾರೋ ಇಲ್ಲವೂ ಕಾದು ನೋಡಬೇಕಾಗಿದೆ.

ಈ ಹಳೆ ಸಂತೆ ಮೈಧಾನ ನನ್ನ ವ್ಯಾಪ್ತಿಗೆ ಬರುತ್ತದೆ, ಇಲ್ಲಿ ಶೇಡ್ ನಿರ್ಮಾಣ ವಾಗಿರುವ ವಿಷಯ ತಿಳಿದುಬಂದಿದ್ದು, ಈ ವಿಚಾರವಾಗಿ ಪುರಸಭಾ ಮುಖ್ಯಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಅವರು ಶೀಘ್ರದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಗೊರ್ತಿನಾಗರಾಜ್,
೧೬ ವಾರ್ಡ ಸದಸ್ಯರು

ಹೀಗಾಗಲೆ ಶೇಡ್ ತೆರವುಗೊಳಿಸಲು ಸಂಬAದಪಟ್ಟವರಿಗೆ ಸೂಚಿಸಿದ್ದೇನೆ ಅವರು ತೆರವು ಗೊಳಿಸಿಲ್ಲಾ ಎಂದರೆ ಪುರಸಭೆಯಿಂದ ಇನ್ನೆರಡು ದಿನಗಳಲ್ಲಿ ಖಡ್ಡಾಯವಾಗಿ ತೆರವುಗೊಳಿಸಲಾಗುವುದು.
ಷಂಷುದ್ದೀನ್,
ಮುಖ್ಯಾಧಿಕಾರಿಗಳು , ಪುರಸಭೆ

(Visited 1 times, 1 visits today)