ತುಮಕೂರು


ಅಮೆರಿಕದ ಸ್ಟಾö್ಯನ್‌ಫೋರ್ಡ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ವಿಶ್ವದ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿವಿಯ ಇಬ್ಬರು ಪ್ರಾಧ್ಯಾಪಕರು ಗುರುತಿಸಿಕೊಂಡಿದ್ದಾರೆ. ಭೌತಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ. ಎಚ್. ನಾಗಭೂಷಣ ಮತ್ತು ರಸಾಯನಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುರೇಶ್ ಡಿ. ಈ ಹಿರಿಮೆಗೆ ಪಾತ್ರರಾಗಿರುವವರು.
ಅಂತರಾಷ್ಟಿçÃಯವಾಗಿ ಪ್ರಕಟವಾದ ಸಂಶೋಧನ ಪ್ರಕಟಣೆಗಳು, ಉಲ್ಲೇಖಗಳು, ಸಹ-ಲೇಖಕ ಸಂಶೋಧನ ಪ್ರಕಟಣೆಗಳು ಮತ್ತು ಎಚ್-ಇಂಡೆಕ್ಸ್ಗಳನ್ನು ಪರಿಶೀಲಿಸಿದ ನಂತರ ವಿಶ್ವದ ಶೇ. ೨ ಅಗ್ರ ವಿಜ್ಞಾನಿಗಳ ಪಟ್ಟಿಯನ್ನು ಸ್ಟಾö್ಯನ್‌ಫೋರ್ಡ್ ವಿಶ್ವವಿದ್ಯಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ತುಮಕೂರು ವಿವಿಯ ಇಬ್ಬರು ಪ್ರಾಧ್ಯಾಪಕರು ಸೇರಿರುವುದು ವಿಶೇಷವಾಗಿದೆ.
ಜಾಗತಿಕ ಮಟ್ಟದಲ್ಲಿ ಸಿದ್ಧಪಡಿಸಲಾದ ಸ್ಟಾö್ಯನ್‌ಫೋರ್ಡ್ ವಿಶ್ವವಿದ್ಯಾನಿಲಯದ ಪಟ್ಟಿಯು ವಿಜ್ಞಾನಿಗಳನ್ನು ೨೨ ವೈಜ್ಞಾನಿಕ ಕ್ಷೇತ್ರಗಳು ಮತ್ತು ೧೭೪ ಉಪಕ್ಷೇತ್ರಗಳಾಗಿ ವರ್ಗೀಕರಿಸುತ್ತದೆ. ವಿಶ್ವದ ವಿವಿಧ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ತಮ್ಮ ಸಂಶೋಧನ ಸಾಧನೆಗಳ ಆಧಾರದಲ್ಲಿ ಇದರಲ್ಲಿ ಗುರುತಿಸಿಕೊಳ್ಳುತ್ತಾರೆ.
ಇದರೊಂದಿಗೆ, ಎಡಿ ಸೈಂಟಿಫಿಕ್ ಇಂಡೆಕ್ಸ್ ಬಿಡುಗಡೆ ಮಾಡಿರುವ ವಿಜ್ಞಾನಿಗಳ ರ‍್ಯಾಂಕಿAಗ್ ಪಟ್ಟಿಯಲ್ಲಿಯೂ ತುಮಕೂರು ವಿವಿಯ ಹಲವು ಪ್ರಾಧ್ಯಾಪಕರು ಸ್ಥಾನ ಪಡೆದಿದ್ದಾರೆ. ಪ್ರೊ. ಬಿ. ಟಿ. ಸಂಪತ್ ಕುಮಾರ್, ಪ್ರೊ. ಮನೋಹರ್ ಶಿಂಧೆ, ಡಾ. ಶರತ್ಚಂದ್ರ ಆರ್. ಜಿ., ಡಾ. ಡಿ. ಬಿ. ಅರುಣ್ ಕುಮಾರ್, ಪ್ರೊ. ಪರಮಶಿವಯ್ಯ ಪಿ., ಪ್ರೊ. ಜಿ. ಸುದರ್ಶನ ರೆಡ್ಡಿ, ಪ್ರೊ. ನೂರ್ ಅಫ್ಜಾ, ಡಾ. ನರಹರಿ ಎನ್., ಡಾ. ನಿರ್ಮಲ ಬಿ., ಡಾ. ಮೊನ್ಬಿಂದರ್ ಕೌರ್, ಡಾ. ಪ್ರಿಯಾ ಠಾಕೂರ್, ಡಾ. ರೂಪೇಶ್ ಕುಮಾರ್ ಎ., ಪ್ರೊ. ಕೇಶವ, ಡಾ. ಸುರೇಶ್ ಬಿ. ಕೆ., ಡಾ. ದೇವರಾಜಪ್ಪ ಎಸ್., ಡಾ. ಪದ್ಮನಾಭ ಕೆ. ವಿ., ಡಾ. ಸುಮಾದೇವಿ ಎಸ್., ಡಾ. ಕೃಷ್ಣ, ಡಾ. ಪರಿಮಳ ಬಿ., ಡಾ. ಈ. ವನಜಾಕ್ಷಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರಾಧ್ಯಾಪಕರ ಈ ಸಾಧನೆಗೆ ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹಾಗೂ ಕುಲಸಚಿವೆ ನಾಹಿದಾ ಜûಮ್ ಜûಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

(Visited 1 times, 1 visits today)