ತುಮಕೂರು


೨೦೨೩ರ ಅಕ್ಟೋಬರ್ ಮಾಹೆಯ ಅಂತ್ಯಕ್ಕೆ ಬಾಕಿ ಇರುವ ಎಲ್ಲಾ ಸಾಲ ಮತ್ತು ಸಬ್ಸಿಡಿ ಮಂಜೂರಾತಿ ಅರ್ಜಿಗಳನ್ನು ಕಡ್ಡಾಯವಾಗಿ ಇತ್ಯರ್ಥಪಡಿಸದ ಬ್ಯಾಂಕ್ ಅಧಿಕಾರಿಗಳ ವಿರುದ್ದ ಎಸ್‌ಎಲ್‌ಬಿಸಿ(ರಾಜ್ಯ ಮಟ್ಟದ ಬ್ಯಾಂರ‍್ಸ್ಗಳ ಸಮಿತಿ) ಹಾಗೂ ಆರ್‌ಬಿಐಗೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಪ್ರಭು ಹೇಳಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಸಹಯೋಗದೊಂದಿಗೆ ಜಿಲ್ಲಾ ಪಂಚಾಯಿತಿಯ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ‘ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಸಮಾಲೋಚನೆ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಪ್ರಸಕ್ತ ಸಾಲಿನ ಯೋಜನೆಗಳು, ಕಳೆದ ತ್ರೈಮಾಸಿಕದÀಲ್ಲಿ ಅನುಷ್ಠಾನಗೊಂಡಿರುವ ಕಾರ್ಯಕ್ರಮಗಳ ಶೇಕಡಾವಾರು ಪ್ರಗತಿ ಬಗ್ಗೆ ಮಾಹಿತಿ ಪಡೆದ ಅವರು, ಪ್ರಧಾನ ಮಂತ್ರಿ ಮುದ್ರಾ ಯೋಜನೆ(ಪಿಎಂಎAವೈ), ಎನ್.ಎಲ್.ಎಂ, ಪಿಎಂಇಜಿಪಿ, ಉದ್ಯೋಗಿನಿ, ಪಿಎಂಎವೈ, ಎಪಿವೈ, ಪಿ.ಎಂ ಸ್ವನಿಧಿ ಮತ್ತು ವಸತಿ ಯೋಜನೆ ಮೊದಲಾದ ಯೋಜನೆಗಳಡಿ ವಿವಿಧ ಇಲಾಖೆಗಳಿಂದ ಬ್ಯಾಂಕುಗಳಿಗೆ ಸಲ್ಲಿಸಲಾಗಿರುವ ಅರ್ಜಿಗಳ ಪ್ರಗತಿ ಪರಿಶೀಲನೆ ಮಾಡಿದ ಅವರು ಸಮಾಜದ ಬಡ ಹಾಗೂ ಅಶಕ್ತ ವರ್ಗದವರಿಗಾಗಿ, ನಿರುದ್ಯೋಗಿಗಳಿಗಾಗಿ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರ ಕಲ್ಯಾಣಕ್ಕಾಗಿ ಸರ್ಕಾರದಿಂದ ರೂಪಿಸಲ್ಪಟ್ಟಿರುವ ಯೋಜನೆಗಳಡಿಯಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಬ್ಯಾಂಕುಗಳು ಅನಗತ್ಯ ವಿಳಂಬ ಮಾಡದೇ ಸಂಬAಧಿಸಿದ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ತ್ವರಿತವಾಗಿ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಿದರು..
ಜಿಲ್ಲಾ ಮಾರ್ಗದರ್ಶಿ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಬಂಧಕ ಪ್ರಕಾಶ್ ಸರ್ವರನ್ನು ಸ್ವಾಗತಿಸಿ, ಮಾತನಾಡಿ, ಬ್ಯಾಂಕ್‌ಗಳ ಠೇವಣಿಯಲ್ಲಿ ೨೦೨೩ ಜೂನ್. ೩೦ರ ಅಂತ್ಯಕ್ಕೆ ೧೮,೨೮೦.೫೦ ಕೋಟಿ ಜಮಾ ಆಗಿದ್ದು. ಮುಂಗಡ ಸಾಲವಾಗಿ ೧೭,೭೦೨.೨೦ ಕೋಟಿ ನೀಡಿ ಉತ್ತಮ ಪ್ರಗತಿ ಸಾಧಿಸಲಾಗಿದ್ದು, ಸಾಲದಲ್ಲಿ ದುರ್ಬಲ ವರ್ಗಗಳಿಗೆ ಎಸ್‌ಸಿ/ಎಸ್‌ಟಿ ವರ್ಗದವರಿಗೆ ಹಾಗೂ ಅಲ್ಪಸಂಖ್ಯಾತ ಸಮುದಾಯದವರಿಗೆ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದ್ದು, ಬ್ಯಾಂಕಿAಗ್ ಸಾಲ ಸೌಲಭ್ಯ ವಿಸ್ತರಿಸುವ ಕಾರ್ಯ ಚುರುಕುಗೊಳಿಸಲು ಉದ್ದೇಶಿಸಲಾಗಿದೆ ಎಂದರು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಯೋಜನಾ ನಿರ್ದೇಶಕರಾದ ನಾರಯಣಸ್ವಾಮಿ, ನಬಾರ್ಡ್ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಭಾ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಜಿಲ್ಲಾಧಿಕಾರಿ, ಕೃಷಿ ಇಲಾಖೆಯ ಜಂಟಿ ನಿದೇಶಕ, ತೋಟಗಾರಿಕೆ ಇಲಾಖೆ ಉಪನಿರ್ದೇಶP, ರೇಷ್ಮೇ ಇಲಾಖೆಯ ಉಪನಿರ್ದೇಶಕರಾದ ರಾಮಕೃಷ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ್, ಎನ್‌ಜಿಒಗಳು (ಸರಕಾರೇತರ ಸಂಸ್ಥೆಗಳು) ಎಲ್ಲಾ ಬ್ಯಾಂಕ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
‘ಲೀಡ್ ಬ್ಯಾಂಕ್ ಯೋಜನೆ’ ಭಾರತೀಯ ರಿಸರ್ವ್ ಬ್ಯಾಂಕ್ ‘ಲೀಡ್ ಬ್ಯಾಂಕ್ ಯೋಜನೆ’ ದೇಶದ ಅತ್ಯಂತ ಹಳೆಯ ಹಣಕಾಸು ಸೇರ್ಪಡೆ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ೧೯೬೯ ರಲ್ಲಿ ಪ್ರಾರಂಭವಾದ ಈ ಯೋಜನೆಯು ಜಿಲ್ಲೆಯ ಬ್ಯಾಂಕಿನ ಒಟ್ಟಾರೆ ಸಾಮರ್ಥ್ಯಗಳ ಆಧಾರದ ಮೇಲೆ ಪ್ರತಿ ಜಿಲ್ಲೆಯ ಸಾರ್ವಜನಿಕ ವಲಯದ ಬ್ಯಾಂಕ್‌ಗೆ ಲೀಡ್ ಬ್ಯಾಂಕ್‌ನ ಪಾತ್ರವನ್ನು ನಿಯೋಜಿಸುತ್ತದೆ. ಭಾರತದ ಪ್ರತಿ ಜಿಲ್ಲೆಯಲ್ಲಿ ಆರ್ಥಿಕ ಸೇವೆಗಳನ್ನು ಸಂಘಟಿಸುವ ‘ಲೀಡ್ ಬ್ಯಾಂಕ್’ ಅನ್ನು ಒಳಗೊಂಡಿರುತ್ತದೆ ಮತ್ತು ರಾಜ್ಯದಲ್ಲಿ ಲೀಡ್ ಬ್ಯಾಂಕ್‌ಗಳ ಈ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವ ಪ್ರತಿ ರಾಜ್ಯದಲ್ಲಿ ‘ಕನ್ವೀನರ್ ಬ್ಯಾಂಕ್’ ಅನ್ನು ಒಳಗೊಂಡಿರುತ್ತದೆ. ಲೀಡ್ ಬ್ಯಾಂಕ್ ಸ್ಥಳೀಯ ಹಣಕಾಸು-ಮಾರುಕಟ್ಟೆ ಏಜೆಂಟ್‌ಗಳೊAದಿಗೆ ಹಣಕಾಸು ಸೇವೆಗಳನ್ನು ಒದಗಿಸುವಲ್ಲಿನ ಅಡಚಣೆಗಳನ್ನು ಗುರುತಿಸಿ, ಪರಿಹರಿಸುತ್ತದೆ.

(Visited 1 times, 1 visits today)