ತುಮಕೂರು
ಜಿಲ್ಲೆಯಲ್ಲಿ ಆಯುಧ ಪೂಜೆಯ ನೆಪದಲ್ಲಿ ವಸೂಲಿಗಿಳಿದ ಪೋಲೀಸರ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ, ಪೂಜೆಯ ಹೆಸರಿನಲ್ಲಿ ಲಕ್ಷಗಟ್ಟಲೆ ವಸೂಲಿಗಿಳಿದ ಕೆಲವು ಪೋಲೀಸರ ವರ್ತನೆ ನೋಡಲಾಗುತ್ತಿಲ್ಲ.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಮತ್ತು ನಗರದ ಡಿವೈಎಸ್ಪಿ ಮತ್ತು ಕ್ಯಾತ್ಸಂದ್ರ ವೃತ್ತ ನಿರೀಕ್ಷಕರು ಆಯುಧ ಪೂಜೆಯ ಹೆಸರಿನಲ್ಲಿ ಹಣ ವಸೂಲಿ ಮಾಡದಂತೆ ಲಿಖಿತವಾಗಿ ಮೆಮೋ ಹಾಕಿದ್ದರೂ ಸಹ ಕ್ಯಾತ್ಸಂದ್ರ ಕಾನೂನು ಸುವ್ಯವಸ್ಥೆಯ ಸಬ್ ಇನ್ಸ್ಪೆಕ್ಟರ್ ಚೇತನ್ ರವರು ಹಿರಿಯ ಅಧಿಕಾರಿಗಳ ಆ ದೇಶವನ್ನು ಧಿಕ್ಕರಿಸಿ ತಮ್ಮ ಠಾಣೆಯ ಎಎಸ್‌ಐ ಸೇರಿದಂತೆ ಒಟ್ಟು ನಾಲ್ವರು ಸಿಬ್ಬಂದಿ ಗಳಿಂದ ಲಕ್ಷಾಂತರ ರೂ ಹಣ ವಸೂಲಿ ಮಾಡಿದ್ದಾರೆ, ಮತ್ತು ಮತ್ತೆ ವಸೂಲಿಯನ್ನು ಮುಂದು ವರಿಸುತ್ತಿದ್ದಾರೆ, ಅಕ್ರಮ ಅಡ್ಡೆಗಳು,ಧಂದೆಕೋರರು, ಮೈಮಾರಿ ಜೀವನ ನೆಡೆಸುವವರು. ಅಕ್ರಮ ಮಸಾಜ್ ಪಾರ್ಲರ್ಗಳು ಸೇರಿ ದಂತೆ ವಿವಿಧ ಕಂಪನಿಗಳು ಅಂಗಡಿಗಳು ವಾಹನ ಮಾಲಿಕರು ಕ್ರಷ್ಷರ್ ಮಾಲಿಕರು ಗ್ರಾನೈಟ್ ಮಾಲಿಕರು ಸೇರಿದಂತೆ ಅಕ್ರಮ ಮತ್ತು ಸಕ್ರಮವಾಗಿ ನೆಡೆಸುವ ಎಲ್ಲಾ ವ್ಯವಹಾರಸ್ಥರು ಜೂಜು ಅಡ್ಡೆಗಳು ಹಾಗೂ ಇನ್ನಿತರೆ ಕಡೆಗಳಲ್ಲಿ ಬಲವಂತವಾಗಿ ವಸೂಲಿ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮಧುಗಿರಿ ಪೋಲೀಸ್ ಉಪಾಧೀಕ್ಷಕರ ವ್ಯಾಪ್ತಿಯಲ್ಲಿ ಹಲವು ಠಾಣೆಗಳಲ್ಲಿ ಆಯುಧ ಪೂಜೆಯ ನೆಪದಲ್ಲಿ ಹಣ ವಸೂಲಿ ಹೆಚ್ಚು ಮಾಡುತಿದ್ದು ಅದರಲ್ಲೂ ಮಧುಗಿರಿ ಪೋಲಿಸ್ ಠಾಣೆಯ ಪಿಎಸ್‌ಐ ವಿಜಯಕುಮಾರ್ ರವರು ಸಹ ಎಸ್ಪಿ ರವರ ಆದೇಶಕ್ಕೆ ಮಾನ್ಯತೆ ನೀಡದೇ ಇಬ್ಬರು ಸಿಬ್ಬಂದಿಗಳನ್ನು ಆಯುಧ ಪೂಜೆಯ ವಸೂಲಿಗಾಗಿ ನೇಮಿಸಿ ಲಕ್ಷ ಗಟ್ಟಲೆ ಹಣ ಸಂಗ್ರಹಿಸುತ್ತಿದ್ದಾರೆ ಪೂಜೆಯ ಹೆಸರಲ್ಲಿ ಮತ್ತು ಅಕ್ರಮ ಮರಳು ಮಾಫಿಯಾದವರು, ಮಟ್ಕಾ ದಂಧೆಕೋರರು ಸೇರಿದಂತೆ ವಿವಿಧೆಡೆ ಬಲಂವAತವಾಗಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ಟೀಕೆ ಮತ್ತು ಇಲಾಖೆಯ ಬಗ್ಗೆ ನಿಂದನೆ ಯನ್ನು ಕೇಳಲಾಗುತ್ತಿಲ್ಲ ಎಂದು ಸಾರ್ವಜನಿಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಶಿರಾ ಪೋಲಿಸ್ ಉಪಾಧೀಕ್ಷಕರ ವ್ಯಾಪ್ತಿಯಲ್ಲಿ ನಿಲ್ಲದ ವಸೂಲಿ ಕಾರ್ಯಕ್ರಮ
ಗುಬ್ಬಿ ಪೋಲೀಸ್ ಠಾಣೆಯ ಮಹಿಳಾ ಪಿಎಸ್‌ಐ ದೇವಿಕಾ ಮೇಡಂ ತಮ್ಮ ಅಧೀನ ಸಿಬ್ಬಂದಿಗೆ ಆಯುಧ ಪೂಜೆಯ ಹಣ ವಸೂಲಿಗೆ ಇಬ್ಬರು ನುರಿತ ಅಧೀನ ಸಿಬ್ಬಂದಿ ಯವರನ್ನು ನೇಮಿಸಿದ್ದು ಅವರುಗಳು ಮಾಡುತ್ತಿರುವ ಹಣದ ವಸೂಲಿ ಕಾರ್ಯಕ್ರಮ ಎಗ್ಗಿಲ್ಲದೇ ಸಾಗುತ್ತಿದೆ ಇಸ್ಪೀಟು ಅಡ್ಡಗಳು ಜೂಜಾಟದ ಕ್ಲಬ್ ಗಳು ಸೇರಿದಂತೆ ಅನೇಕ ಕಡೆಗಳಲ್ಲಿ ನಿರಭಯವಾಗಿ ವಸೂಲಿ ಮಾಡುತ್ತಿದ್ದರೆ ಎಂದು ಸಾರ್ವಜನಿಕ ದೂರುಗಳು ಕೇಳಿಬರುತ್ತಿವೆ.
ಕೆಲವು ಪೋಲಿಸ್ ಠಾಣೆಗಳಲ್ಲಿ ಎಸ್ಪಿ ರವರ ಆದೇಶ ಪಾಲಿಸಿದರೆ ಕೆಲವು ಠಾಣೆಗಳಲ್ಲಿ ಯಾರ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಕೇವಲ. ಹಣ ವಸೂಲಿಯೊಂದೇ ಗುರಿಯಾಗಿಸಿಕೊಂಡು ಮಾನವೀಯತೆ ಬದಿಗಿಟ್ಟು ಅಮಾನವೀಯವಾಗಿ ವರ್ತಿಸುತ್ತಾ ದಾನಿಗಳನ್ನು ಹೊರತುಪಡಿಸಿ ಬೇರೆ ಕೆಲವರನ್ನು ಪೀಡಿಸಿ ಬಲಂತವಾಗಿ ಹಣ ಪಡೆಯುತ್ತಿರುವುದು ಇಲಾಖೆಗೆ ಶೋಭೆ ತರುವ ವಿಚಾರವಲ್ಲ ಎನ್ನುತ್ತಿದೆ ಸಾರ್ವಜನಿಕ ವಲಯ.
ತುಮಕೂರು ಜಿಲ್ಲೆಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಶೋಕ್ .ಕೆವಿ. ರವರು ಭ್ರಷ್ಟಾಚಾರ ರಹಿತ ಆಡಳಿತವನ್ನು ಪೋಲಿಸ್ ಇಲಾಖೆಯಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು ಉತ್ತಮ ದಕ್ಷ ಅಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಲೋಕಾಯುಕ್ತ ಎಸ್ಪಿ ಹುದ್ದೆಯಲ್ಲಿ ಉತ್ತಮ ಹೆಸರು ಗಳಿಸಿ ಆಡಳಿತಾರೂಢ ಬಿಜೆಪಿ ಶಾಸಕರನ್ನ ಬಂಧಿಸಿ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡಿದ್ದರು ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನ ವಾಗಿ ಕಾಣುತ್ತಿದ್ದ ಪ್ರಾಮಾಣಿಕ ಅಧಿಕಾರಿಯಾಗಿದ್ದರು.
ತುಮಕೂರು ಜಿಲ್ಲೆಯಲ್ಲಿಯೂ ಸಹ ತನ್ನ ಅಧೀನದಲ್ಲಿ ಇರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿAದ ಭ್ರಷ್ಟಾಚಾರ ರಹಿತ ಆಡಳಿತವನ್ನು ನಿರೀಕ್ಷಿಸಿದ್ದರು. ಅದರಂತೆಯೇ ತಮ್ಮ ಕಚೇರಿಯಿಂದ ಅಧಿಕೃತ ಆದೇಶ ಹೊರಡಿಸಿ ತಮ್ಮ ಇಲಾಖೆಯಲ್ಲಿ ಯಾರಾದರೂ ಆಯುಧ ಪೂಜೆಯ ಹೆಸರಲ್ಲಿ ಹಣ ವಸೂಲಿ ಮಾಡಿದರೆ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಅವರ ಎಚ್ಚರಿಕೆಯ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.?