ಹುಳಿಯಾರು


ಬೀದಿಬದಿ ವ್ಯಾಪಾರಿಗಳು, ಖಾಸಗಿ ಬಸ್ ಏಜೆಂಟರು ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವ ಮೂಲಕ ಕನ್ನಡ ಭಾಷೆ, ನೆಲ, ಜಲದ ಸಾರ್ವಭೌಮತ್ವ ಸಾರುತ್ತಿದ್ದಾg. ಅಲ್ಲದೆೆ ಕನ್ನಡ ಭಾಷೆಯ ಸೊಗಡು ಉಳಿಸಲು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಚಿಕ್ಕನಾಯಕನಹಳ್ಳಿ ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಶ್ಲಾಘಿಸಿದರು.
ಹುಳಿಯಾರು ಬಸ್ ನಿಲ್ದಾಣದಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬದುಕಿಗಾಗಿ ನಾವು ಎಷ್ಟೇ ಭಾಷೆಗಳನ್ನು ಕಲಿತರೂ, ಎಷ್ಟೇ ದೇಶ ಸುತ್ತಿದರೂ ಮಾತೃಭಾಷೆಯ ಮುಂದೆ ಯಾವುದೋ ದೊಡ್ಡದಲ್ಲ. ಅದರಲ್ಲೂ ಶಾಸ್ತಿçÃಯ ಭಾಷೆಯಾಗಿರುವ ಕನ್ನಡವು ತನ್ನದೇ ಆದ ವಿಶೇಷ ಸ್ಥಾನಮಾನ ಹೊಂದಿದೆ. ಕನ್ನಡ ಭಾಷೆ ಅತ್ಯಂತ ಶ್ರೀಮಂತವಾದುದು. ಸಾರಸ್ವತ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ನಮ್ಮ ಭಾಷೆಗೆ, ಸಾಹಿತ್ಯದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ಹೊಂದಿದೆ. ಆದರೂ ಇತ್ತೀಚೆಗೆ ಕನ್ನಡದ ಬಗ್ಗೆ ಅಸಡ್ಡೆ ಹೆಚ್ಚಾಗುತ್ತಿದೆ. ಮಾತೃಭಾಷೆ ಕಲಿಕೆ ಬಗ್ಗೆ ಕೀಳರಿಮೆ ಇರಬಾರದು. ಈ ನಿಟ್ಟಿನಲ್ಲಿ ಪೋಷರು ನಾಡುನುಡಿಯ ಮಹತ್ವವನ್ನು ತಮ್ಮ ಮಕ್ಕಳಿಗೆ ತಿಳಿಸಬೇಕು. ಕನ್ನಡ ಭಾಷೆ, ಪರಂಪರೆ, ಸಂಸ್ಕöÈತಿ ಹಾಗೂ ಹೆಗ್ಗಳಿಕೆಗಳ ಬಗ್ಗೆ ಪ್ರತಿಯೊಬ್ಬರು ಹೆಮ್ಮೆಯ ಭಾವನೆ ಹೊಂದಬೇಕು ಎಂದು ತಿಳಿಸಿದರು.
ಬೆಸ್ಕಾಂನ ಎಇಇ ಎನ್.ಬಿ.ಗವೀರಂಗಯ್ಯ ಅವರು ಮಾತನಾಡಿ ಕನ್ನಡ ನಾಡಿಗೆ ಗಡಿ ಇದೆ. ಆದರೆ ಭಾಷೆಗೆ ಗಡಿಯಿಲ್ಲ. ಆದ್ದರಿಂದ ನಾವು ಎಲ್ಲೇ ಇದ್ದರೂ ಕನ್ನಡವನ್ನು ಬಳಸಬೇಕು. ಮತ್ತು ಕನ್ನಡದ ಕಂಪನ್ನು ಜಗತ್ತಿನೆಲ್ಲೆಡೆ ಪಸರಿಸಬೇಕು. ಅದಕ್ಕಾಗಿ ಮೊದಲು ನಮ್ಮಲ್ಲಿ ಕನ್ನಡದ ಬಗ್ಗೆ ಅಭಿಮಾನವಿರಬೇಕು. ಅಂತಹ ಅಭಿಮಾನವನ್ನು ಜಾಗೃತಿಗೊಳಿಸುವ ಮತ್ತು ಸಂಭ್ರಮಿಸುವ ದಿನವೇ ಈ ರಾಜ್ಯೋತ್ಸವ ಎಂದು ಅಭಿಪ್ರಾಯಪಟ್ಟರು.
ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಹೂವಿನ ಬಸವರಾಜು, ತಾ.ಪಂ.ಮಾಜಿ ಸದಸ್ಯ ಎಚ್.ಎನ್.ಕುಮಾರ್, ಹುಳಿಯಾರು ಕಸಾಪ ಅಧ್ಯಕ್ಷ ನಾರಾಯಣಪ್ಪ, ಕವಿ ಎಂ.ಷಬ್ಬೀರ್, ಬೆಸ್ಕಾಂ ಎಸ್‌ಒ ರಘುರಾಮ್, ಬೀದಿಬದಿ ವ್ಯಾಪಾರಿಗಳಾದ ಬಾಳೆಹಣ್ಣು ನರಸಿಂಹಮೂರ್ತಿ, ಶಾರದಮ್ಮ, ಗಂಗಮ್ಮ, ಉಮಕ್ಕ, ಲಕ್ಷಿ÷್ಮಕಾಂತ್ ಬಾಳೆಹಣ್ಣು ಮತ್ತಿತರರು ಇದ್ದರು.

(Visited 1 times, 1 visits today)