ತುಮಕೂರು:

ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆ ಹೋಬಳಿ ರಾಮಘಟ್ಟದಲ್ಲಿ ಇತ್ತೀಚಗೆ ನಡೆದ ಅಗ್ನಿ ದುರಂತದಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಕುರಿ ಮತ್ತು ಕೋಳಿಗಳನ್ನು ಕಳೆದುಕೊಂಡಿದ್ದ ರೈತ ಕುಟುಂಬಕ್ಕೆ ಡಿಸಿಸಿ ಬ್ಯಾಂಕ್ ವತಿಯಿಂದ ಅತಿ ಕಡಿಮೆ ದರದಲ್ಲಿ ಸುಮಾರು ೬.೫೦ಲಕ್ಷ ರೂಗಳ ಸಾಲದ ಆದೇಶ ಪತ್ರವನ್ನು ಸಹಕಾರ ಸಚಿವ ಹಾಗೂ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರು ವಿತರಿಸಿದರು.
ಹಂದನಕೆರೆ ಹೋಬಳಿ ರಾಮಘಟ್ಟದ ಚೇತನಕುಮಾರ್ ಅವರ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ರೈತ ಕುಟುಂಬದ ಆಧಾರ ಸ್ಥಂಬವಾಗಿದ್ದ ೧೧೦ ಟಗರು, ೩೦ ಮೇಕೆ, ೧೫೦ ಕೋಳಿಗಳು ಸುಟ್ಟು ಕರಕಲಾಗಿದ್ದು, ಇಡೀ ಕುಟುಂಬವೇ ಕಂಗಾಲಾಗಿತ್ತು.ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಅವರು ಕುಟುಂಬದ ಸದಸ್ಯರನ್ನು ಭೇಟಿಯಾಗಿ ನೆರವು ನೀಡುವ ಧೈರ್ಯ ತುಂಬಿದ್ದರು. ಇದರಂತೆ ಇಂದು ಡಿಸಿಸಿ ಬ್ಯಾಂಕ್ ವತಿಯಿಂದ ಅತಿ ಕಡಿಮೆ ಬಡ್ಡಿದರದಲ್ಲಿ ಸುಮಾರು ೬.೫೦ ಲಕ್ಷ ರೂಗಳ ಸಾಲದ ಆದೇಶ ಪತ್ರವನ್ನು ಸಂತ್ರಸ್ಥ ಕುಟುಂಬದ ಚೇತನಕುಮಾರ್ ಅವರಿಗೆ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಸಂತ್ರಸ್ಥ ಚೇತನಕುಮಾರ್,ಬೆಂಕಿ ಅವಘಡದಿಂದ ಇಡೀ ಕುಟುಂಬವೇ ಕಂಗಾಗಲಾಗಿತ್ತು. ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಿಂಗದಹಳ್ಳಿ ರಾಜ್ ಕುಮಾರ್ ಅವರು ಧೈರ್ಯ ತುಂಬಿ ಸಹಾಯ ನೀಡುವ ಭರವಸೆ ನೀಡಿದ್ದರು. ಇಂದು ಸಾಲದ ಚೆಕ್ ನೀಡುವ ಮೂಲಕ ಕುಟುಂಬಕ್ಕೆ ನೆರವಾಗಿದ್ದಾರೆ. ಡಿಸಿಸಿ ಬ್ಯಾಂಕ್ ನವರ ಉಪಕಾರವನ್ನು ಎಂದಿಗೂ ಮೆರೆಯುವುದಿಲ್ಲ. ಈ ಹಣದಲ್ಲಿ ಕುರಿಗಳನ್ನು ಕೊಂಡು, ಪಶು ಸಾಕಾಣಿಕೆಯಲ್ಲಿ ತೊಡಗುವ ಮೂಲಕ ಕುಟುಂಬ ನಿರ್ವಹಣೆ ಮಾಡುವುದಾಗಿ ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಮಾತನಾಡಿ,,ಸೋಮವಾರ ಕುರಿಶೆಡ್‌ಗೆ ಬೆಂಕಿ ಬಿದ್ದ ಪರಿಣಾಮ ನೂರಾರು ಕುರಿ, ಮೇಕೆಗಳು ಸುಟ್ಟು ಹೋಗಿ ಕುಟುಂಬ ತೀವ್ರ ಸಂಕಷ್ಟದಲ್ಲಿತ್ತು, ತಕ್ಷಣಕ್ಕೆ ಹಂದನಕೆರೆ ವ್ಯವಸಾಯ ಸೇವಾ ಸಹಕಾರ ಸಂಸ್ಥೆಯಿAದ ೭೫ ಸಾವಿರ ರೂ ಸಾಲವನ್ನು ಸಹಕಾರ ಸಚಿವರ ನಿರ್ದೇಶಕನದಂತೆ ಶೂನ್ಯ ಬಡ್ಡಿದರದಲ್ಲಿ ನೀಡಲಾಗಿತ್ತು.ಅಲ್ಲದೆ ಸಚಿವರ ಸಲಹೆಯಂತೆ ಕುಟುಂಬಕ್ಕೆ ಕುರಿ ಸಾಕಾಣಿಕೆಗೆ ೬.೫೦ ಲಕ್ಷ ರೂಗಳನ್ನು ಕಡಿಮೆ ಬಡ್ಡಿದರದಲ್ಲಿ ನೀಡಲಾಗಿದೆ.ಸ್ವಯಂ ಉದ್ಯೋಗ ನಡೆಸುವ ಇಂತಹ ಯುವಕರಿಗೆ ಆತ್ಮಸ್ಥೆöÊರ್ಯ ತುಂಬಬೇಕೆAಬ ಉದ್ದೇಶದಿಂದ ಈ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದರು.

(Visited 1 times, 1 visits today)