ತುಮಕೂರು:


ರಕ್ತ ಕೊಟ್ಟೆವು ಖಾಯಂಯಾತಿ ಬಿಡೆವು ಎಂಬ ಧ್ಯೇಯ ವಾಕ್ಯದೊಂದಿಗೆ ಅತಿಥಿ ಉಪನ್ಯಾಸಕರು ೨೭ನೇ ದಿನವೂ ರಕ್ತದಾನ ಮಾಡುವ ಮೂಲಕ ಇಂದು ವಿಶಿಷ್ಟವಾಗಿ ಪ್ರತಿಭಟನೆ ಧರಣಿ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ಧಿಷ್ಠಾವಧಿ ಧರಣಿಯನ್ನು ಮುಂದುವರೆಸಿರುವ ಅತಿಥಿ ಉಪನ್ಯಾಸಕರು ರಕ್ತದಾನ ಮಾಡುವ ಮೂಲಕ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ, ರಕ್ತ ಕೊಟ್ಟೆವು ಖಾಯಂಯಾತಿ ಬಿಡೆವು ಎಂದು ಘೋಷಣೆಗಳನ್ನು ಕೂಗುತ್ತಾ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಹದಿನೈದಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ರಕ್ತದಾನ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಡಾ.ಧರ್ಮವೀರ.ಕೆ.ಎಚ್ ಸುಮಾರು ೨೦ ವರ್ಷಗಳಿಂದ ಸರ್ಕಾರ ನಮ್ಮನ್ನು ರಕ್ತ ಹೀರುತ್ತಿದೆ ನಾವು ಸರ್ಕಾರಕ್ಕೆ ರಕ್ತ ಕೊಟ್ಟೆವು ಖಾಯಂಯಾತಿ ಬಿಡುವುದಿಲ್ಲ ಖಾಯಂ ಆಗುವವರೆಗೂ ನಮ್ಮ ಹೋರಾಟ ನಿಲ್ಲದು ಸುಮಾರು ಒಂದು ತಿಂಗಳಿAದ ಪ್ರತಿಭಟನೆ ನಡೆಸುತ್ತಿದ್ದರು ಸರ್ಕಾರ ಮಾತ್ರ ಜಾಣ ಕುರುಡನಂತೆ ವರ್ತಿಸುತ್ತಿರುವುದು ನಮ್ಮನ್ನು ಆತಂಕ್ಕೀಡುಮಾಡಿದೆ ಈಗಾಲಾದರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ನಾವು ಪಾದಯಾತ್ರೆಯನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.
ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾದ ಹನುಮಂತ ಗೌಡ ಕಲ್ಮನಿಯವರು ನಿರಂತರ ಸಂಪರ್ಕದಲ್ಲಿದ್ದು ಇನ್ನೊಂದೆರಡು ದಿನಗಳಲ್ಲಿ ತುಮಕೂರಿಂದ ಪಾದಯಾತ್ರೆ ಆರಂಭವಾಗಲಿದೆ ಎಲ್ಲಾ ಅತಿಥಿ ಉಪನ್ಯಾಸಕರು ಪಾದಯಾತ್ರೆಗೆ ಸಿದ್ಧಗೊಳ್ಳಬೇಕು ಎಂದು ಅತಿಥಿ ಉಪನ್ಯಾಸಕರಿಗೆ ಕರೆಕೊಟ್ಟ ಅವರು ಸರ್ಕಾರವನ್ನು ಕಣ್ತೆರಿಸುವಂತೆ ಮಾಡಲು ನಾವು ಪಾದಯಾತ್ರೆಯನ್ನು ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಹಿರಿಯ ಉಪನ್ಯಾಸಕ ಡಾ. ಕಂಚಿಗರಾಯಪ್ಪ ಮಾತನಾಡಿ ಯುಜಿಸಿ ನಿಯಮಾವಳಿಗಳ ಪ್ರಕಾರ ಎಲ್ಲ ಅರ್ಹತೆಗಳಿದ್ದರೂ ನಮಗೆ ಸರ್ಕಾರದ ಕೆಲಸ ಸಿಗದೇ ೫೫ ವರ್ಷ ಪೂರೈಸಿದ್ದೇನೆ ಇನ್ನುಳಿದ ಕೊನೆಯ ದಿನಗಳಲ್ಲಾದರೂ ನೆಮ್ಮದಿಯ ಜೀವನ ಮಾಡಲು ಸರ್ಕಾರ ನಮ್ಮನ್ನು ಖಾಯಂಯಾತಿ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರುಗಳಾದ ನಿರ್ಮಲ.ಜಿ, ಕೃಷ್ಣೆಗೌಡ, ಡಾ. ಸುರೇಶ್, ಕೃಷ್ಣಗೌಡ ಟಿ.ಎಸ್, ಡಾ.ಮನು, ನರಸಿಂಹ, ಶಂಕರ್ ಹಾರೋಗೆರೆ, ಮೂರ್ತಿ, ಆನಂದ್, ಮೋಹನ್ ಕುಮಾರ್, ಪುಟ್ಟರಾಜು, ತಿಪ್ಪೇಸ್ವಾವಿ, ಸುನಿಲ್ ಕುಮಾರ್.ಆರ್, ರಶ್ಮಿ .ಜಿ.ಎಸ್, ಪುಜಾ.ಆರ್, ಲತಾ.ಹೆಚ್, ಹರ್ಷ.ವೈ.ಸಿ, ತೇಜಸ್ವಿನಿ, ನಾರಾಯಣಪ್ಪ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

(Visited 1 times, 1 visits today)