ಪಾವಗಡ


ಮುಂದಿನ ಆರು ವಾರಗಳಲ್ಲಿ ಪಾವಗಡ ತಾಲೂಕಿನ ಅತ್ಯಂತ ಹೆಚ್ಚು ಬರ ಉಂಟಾಗಲಿದ್ದು ಇದರಿಂದಾಗಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಲಿದೆ ಎಂದು ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದ್ದಾರೆ
ಪಾವಗಡ ತಾಲೂಕಿನ ನಲಿಗಾನಹಳ್ಳಿ ಮತ್ತು ಟಿ ಎನ್ ಬೆಟ್ಟ ಗ್ರಾಮಗಳಲ್ಲಿ ಬರ ಪರಿಶೀಲನೆ ನಡೆಸಿ ರೈತರ ಜೊತೆ ಸಂವಾದ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಹಿಂದೆ ನಾನು ತುಮಕೂರು ಜಿಲ್ಲೆಯಲ್ಲಿ ಎರಡು ವರ್ಷಗಳ ಕಾಲ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದೆ, ಆ ಸಮಯದಲ್ಲೂ ಸಹ ಬರೆದ ಪರಿಸ್ಥಿತಿ ಇತ್ತು, ಹಿಂದಿನ ವರ್ಷ ಮಳೆ ಚೆನ್ನಾಗಿ ಆಗಿರುವುದರಿಂದ ಸದ್ಯ ಸ್ವಲ್ಪ ಸಮಸ್ಯೆಗಳ ಪ್ರಮಾಣ ಕಡಿಮೆಯಾಗಿದೆ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಇದೆ ಹಾಗೂ ಪಶು ಸಂಗೋಪನ ಇಲಾಖೆಯಿಂದ ಈಗಾಗಲೇ ಪಾವಗಡ ತಾಲೂಕಿನ ರೈತರಿಗೆ ಮೇವಿನ ಕಿಟ್ ವಿತರಿಸಲಾಗಿದೆ, ಪ್ರಮುಖವಾಗಿ ನಾವು ಈ ಅಧ್ಯಯನದಲ್ಲಿ ಮೇವಿನ ತೊಂದರೆಯ ಕುರಿತು ಪರಿಶೀಲನೆ ನಡೆಸಿದ್ದೇವೆ, ನಾವು ಸದ್ಯ ರೈತರ ಬೇಡಿಕೆ ಏನಿದೆ ಎನ್ನುವುದನ್ನು ನೇರವಾಗಿ ರೈತರಿಂದಲೇ ಮಾಹಿತಿ ಪಡೆದುಕೊಳ್ಳುವ ದೃಷ್ಟಿಯಿಂದ ಪಾವಗಡಕ್ಕೆ ಆಗಮಿಸಿರುತ್ತೇನೆ, ಈಗಾಗಲೇ ರೈತರ ಜೊತೆ ಸಂವಾದ ನಡೆಸಲಾಗಿದೆ, ರೈತರು ಹೇಳುವ ಪ್ರಕಾರ ಮುಂದಿನ ಆರು ವಾರಗಳಲ್ಲಿ ಹೆಚ್ಚಿನದಾಗಿ ಮೇವಿನ ಅಲಭ್ಯತೆ ಉಂಟಾಗಲಿದ್ದು, ರೈತರು ಸಹ ತಮ್ಮ ಸಮಸ್ಯೆಗಳನ್ನು ತೋಡಿಕೊಂಡಿದ್ದಾರೆ, ಮತ್ತು ನಲಿಗಾನಹಳ್ಳಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟಿದ್ದೇನೆ ಎಂದರು
ಪಾವಗಡ ತಾಲೂಕಿನ ನಾಲ್ಕು ಹೋಬಳಿಗಳ ಪೈಕಿ ನಿಡಗಲ್ ಮತ್ತು ಕಸಬಾ ಹೋಬಳಿಯ ಗ್ರಾಮಗಳಲ್ಲಿ ಮಾತ್ರ ಅಧ್ಯಯನ ನಡೆಸಿದ್ದು, ವಯನ್ ಹೊಸಕೋಟೆ ಹಾಗೂ ನಾಗಲಮಡಿಕೆ ಹೋಬಳಿಗಳಲ್ಲಿ ಹೆಚ್ಚಾಗಿ ಬರದ ಸಮಸ್ಯೆ ಉಂಟಾಗಿದ್ದು ಈ ಭಾಗಕ್ಕೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿ ತುರ್ತಾಗಿ ಅವರು ತುಮಕೂರಿನಲ್ಲಿ ಚುನಾವಣೆಗೆ ಸಂಬAಧಿಸಿದ ಸಭೆಯು ಕಾರಣ ಅವರು ತುಮಕೂರಿಗೆ ತೆರಳಿದರು
ಇನ್ನು ಜಿಲ್ಲಾಧಿಕಾರಿಗಳ ಬರ ಅಧ್ಯಯನ ಸಮಯದಲ್ಲಿ ಮಧುಗಿರಿ ಉಪ ವಿಭಾಗಾಧಿಕಾರಿ ರಿಷಿ ಆನಂದ್, ಪಾವಗಡ ತಹಸಿಲ್ದಾರ್ ಡಿಎನ್ ವರದರಾಜು , ಇ ಓ ಜಾನಕಿರಾಮ್, ಎಇಇ ಬಸವಲಿಂಗಪ್ಪ, ಪಶು ಸಂಗೋಪನೆ ಇಲಾಖೆಯ ಹೊರಕೆರಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಜಯ್ ಕುಮಾರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವಿಶ್ವನಾಥ್ ಗೌಡ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮುರಳೀಧರ್, ಗ್ರೇಟ್ ೨ ತಾಹಸೀಲ್ದಾರ್ ಎನ್ ಮೂರ್ತಿ, ಆರ್ ಐ ಗಳಾದ ರಾಜಗೋಪಾಲ್,ಶ್ರೀನಿವಾಸ್, ಕಿರಣ್ ಕುಮಾರ್, ತಾಲೂಕು ಕಚೇರಿಯ ಸಿಬ್ಬಂದಿ ಆಸಿಫ್, ಕೃಷಿ ಇಲಾಖೆಯ ವೇಣು, ಪಶು ಇಲಾಖೆಯ ತಿಪ್ಪೇಶಿ, ದಿನೇಶ್, ಸೇರಿದಂತೆ ಹಲವರು ಹಾಜರಿದ್ದರು.

(Visited 1 times, 1 visits today)