ತುಮಕೂರು:
ಜಿಲ್ಲೆಯಲ್ಲಿ ಒಂದೇ ದಿನ ಮೂವರು ಪಿಎಸ್‌ಐಗಳು ಸೇರಿದಂತೆ ಐವರು ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಶೋಕ್ ಕೆ.ವಿ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ತುರುವೇಕೆರೆ ಪಿಎಸ್ ಐಗಳಾದ ಗಣೇಶ್, ರಾಮಚಂದ್ರಯ್ಯ, ಹೆಡ್ ಕಾನ್’ಸ್ಟೇಬಲ್ ರಘುನಂದನ್ ಅಮಾನತುಗೊಂಡಿದ್ದಾರೆ. ತುರುವೇರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ನಾಪತ್ತೆಯಾಗಿದ್ದರು. ಈ ಬಗ್ಗೆ ದೂರು ನೀಡಿದ್ದರೂ ಎಫ್‌ಐಆರ್ ಮಾಡದೆ ನಿರ್ಲಕ್ಷ್ಯ ವಹಿಸಿದ್ದಕ್ಕೆ ಅಮಾನತುಗೊಳಿಸಲಾಗಿದೆ.
ಮಧುಗಿರಿ ತಾಲೂಕು ಬಡವನಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜು, ಎಎಸ್‌ಐ ಸುರೇಶ್ ಅಮಾನತುಗೊಂಡಿದ್ದಾರೆ.
ತುಮಕೂರು: ಒಂದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐವರು ನಾಪತ್ತೆ ಬಡವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಲಿತರ ಮೇಲೆ ಸವರ್ಣೀಯರು ಹಲ್ಲೆ ಮಾಡಿದ್ದ ಆರೋಪವಿತ್ತು. ಈ ಬಗ್ಗೆ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಂತ್ರಸ್ತರು ದೂರು ನೀಡಿದ್ದರು. ಆದರೇ ಎಫ್ ಐಆರ್ ಮಾಡಿಕೊಳ್ಳದೆ ಪೊಲೀಸರು ನಿರ್ಲಕ್ಷ್ಯ ತೋರಿದ್ದರು. ಈ ಹಿನ್ನೆಲೆಯಲ್ಲಿ ಪಿಎಸ್ ಐ ಮತ್ತು ಎಎಸ್‌ಐ ಅವರನ್ನು ಅಮಾನತುಗೊಳಿಸಲಾಗಿದೆ.
ಎಎಸ್‌ಐ, ಒಬ್ಬರು ಹೆಡ್ ಕಾನ್ಸ್’ಸ್ಟೇಬಲ್ ಗಳನ್ನು ಅಮಾನತು ಮಾಡುವ ಮೂಲಕ ಎಸ್.ಪಿ ಅವರು ಪೊಲೀಸರಿಗೆ ಚುರುಕು ಮುಟ್ಟಿಸಿದ್ದಾರೆ. ಎಸ್.ಪಿ ನಡೆಗೆ ಪೊಲೀಸ್ ವಲಯ ಶಾಕ್ ಆಗಿದೆ.