ಕೊರಟಗೆರೆ:
ಪ್ರಜಾಪ್ರಭುತ್ವದಲ್ಲಿ ಪ್ರಮುಖವಾದ ವೈದ್ಯಕೀಯ ಕ್ಷೇತ್ರವು ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ವಹಿಸಿದೆ. ಸರ್ಕಾರ ವೈದ್ಯರನ್ನು ಸೇವೆಗೆ ಮಾತ್ರ ಸೀಮಿತಗೊಳಿಸಿದೆ. ಇದಕೊಂದು ಉದಾಹರಣೆ ಎಂದರೆ ಕೊರಟಗೆರೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದ ಕೇಂದ್ರ ಸ್ಥಾನದಲ್ಲಿ ವೈದ್ಯರು ವಾಸವಿರಬೇಕಾದ ವಸತಿ ಗೃಹಗಳು ಮೂಲಭೂತ ಸೌಕರ್ಯದಿಂದ ವಂಚಿತದಿAದ ಹಳ್ಳ ಹಿಡಿದು ಅನೈತಿಕ ಚಟುವಟಿಕೆಗೆ ತಾಣವಾಗಿ ಮಾರ್ಪಟ್ಟು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ..
ವೈದ್ಯರಿಗೆ ರಾತ್ರಿ ಸಮಯದಲ್ಲಿ ಕೇಂದ್ರ ಸ್ಥಾನದಲ್ಲಿ ಉಳಿದುಕೊಳ್ಳಲು ಸರ್ಕಾರವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದರು ಸಹ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಯಾವುದೇ ವೈದ್ಯರಾಗಲಿ, ಸಿಬ್ಬಂದಿಗಳಾಗಲಿ ವಾಸವಿಲ್ಲ. ಕಾರಣ, ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಈ ಹಿಂದೆ ನಿರ್ಮಾಣ ಮಾಡಲಾಗಿದ್ದ ವಸತಿ ಗೃಹಗಳು ಮೂಲಭೂತ ಸೌಕರ್ಯದಿಂದ ವಂಚಿತಗೊAಡು ಸುಮಾರು ೧೫ ವರ್ಷಗಳಿಂದ ಎಲ್ಲಾ ಕೊಠಡಿಗಳು ಶಿಥಿಲಗೊಂಡಿದೆ ಎಂದು ಮುಖ್ಯ ವೈದ್ಯರಿಂದ ಮಾಹಿತಿ ತಿಳಿದು ಬಂದಿದೆ..
ಮಾನ್ಯ ಗೃಹಸಚಿವರ ಕ್ಷೇತ್ರದಲ್ಲಿ ೧೫ ವರ್ಷಗಳಿಂದ ವೈದ್ಯರಿಗೆ ಸೂರಿಲ್ಲದೆ ಪರದಾಡುವ ಸ್ಥಿತಿ ಒದಗಿ ಬಂದಿದೆ, ಇದಕ್ಕೆ ಮುಖ್ಯ ಕಾರಣಕರ್ತರಾದ ತಾಲೂಕು ವೈದ್ಯಾಧಿಕಾರಿಯ ಡಾ.ವಿಜಯ್‌ಕುಮಾರ್‌ರವರ ನಿರ್ಲಕ್ಷö್ಯ ಎದ್ದು ಕಾಣುತ್ತಿದೆ..
ಡಾ.ವಿಜಯ್‌ಕುಮಾರ್ ತಾಲೂಕು ವೈದ್ಯಾಧಿಕಾರಿಗಳಾಗಿ ೧೦ ರಿಂದ ೧೩ ವರ್ಷಗಳು ಕಳೆದರೂ ಕೂಡ ಸರ್ಕಾರಿ ಆಸ್ಪತ್ರೆಗೆ ಬೇಕಾದ ವೈದ್ಯರಿಗೆ ಮತ್ತು ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಒದಗಿಸಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ಕಾಳಜಿಯಿಲ್ಲದೆ ನಿರ್ಲಕ್ಷö್ಯ ತೋರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಸಿ ಬಳಿಯುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಸಾರ್ವಜನಿಕರಿಂದ ಆರೋಪವು ಸಹ ಕೇಳಿ ಬರುತ್ತಿದೆ..
ಮುಖ್ಯಾಂಶಗಳು:
ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯರಿಗೆ ಬೇಕಾದ ಮೂಲಭೂತ ಸೌಕರ್ಯ :
ಬಹುಮುಖ್ಯವಾಗಿ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯದ ವ್ಯವಸ್ಥೆ ಇರುವ ವಸತಿ ಗೃಹಗಳ ಅವಶ್ಯಕತೆ ಇದೆ..
ಅಂಗವಿಕಲರಿಗೆ ಬೇಕಾದ ವಿಶೇಷ ಶೌಚಾಲಯದ ವ್ಯವಸ್ಥೆ.
ಆಸ್ಪತ್ರೆಗೆ ಬರುವ ಹೊರ ರೋಗಿಗಳಿಗೆ ಕುಡಿಯುವ ನೀರಿನ ಶುದ್ಧ ಘಟಕಗಳು ಹಾಗೂ ಬಿಸಿ ನೀರಿನ ವ್ಯವಸ್ಥೆ..
ಆಸ್ಪತ್ರೆಯಲ್ಲಿ ಖಾಯಂ ಅರವಳಿಕೆ ತಜ್ಞರ ಅವಶ್ಯಕತೆ ಇದೆ..
ಎಕ್ಸ್ ರೇ ತೆಗೆಯಲು ಸಿಬ್ಬಂದಿ ಅವಶ್ಯಕತೆ ಹೆಚ್ಚಿನದಾಗಿದೆ..
ಪಾರ್ಕಿಂಗ್ ವ್ಯವಸ್ಥೆ ತುರ್ತು ವಾಹನ ನಿಲುಗಡೆಗೂ ಸಹ ಸ್ಥಳವಕಾಶವಿಲ್ಲದಿರುವ ಹೊರಾಂಗಣ ನೋಟ..