ತುರುವೇಕೆರೆ:
ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಫಾರೀಕ್ ಪಾಷ (೩೦), ಮೊಹಮದ್ ಸಾಹಿಲ್ (೨೦) ಬಂಧಿತ ಆರೋಪಿಗಳಾಗಿದ್ದು, ಇವರಿಂದ ಒಂದು ಮೊಬೈಲ್ಅನ್ನು ವಶಪಡಿಸಿಕೊಳ್ಳಲಾಗಿದೆ.
ತಾಲ್ಲೂಕಿನ ದಂಡಿನಶಿವರ ಪೊಲೀಸ್ ಠಾಣೆಯ ವ್ಯಾಪ್ತಿಯ ಕೆಬ್ಬೆಪಾಳ್ಯ ಗ್ರಾಮದ ರಾಮಯ್ಯ ಎಂಬುವವರ ಪುತ್ರಿ ಭಾಗ್ಯಲಕ್ಷಿöಯವರು ಕಾಲೇಜು ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಬಾಣಸಂದ್ರ ಮಾರ್ಗದಿಂದ ಬಂದ ಅಪರಿಚಿತರಿಬ್ಬರು ವಿದ್ಯಾರ್ಥಿನಿ ಭಾಗ್ಯಲಕ್ಷಿöಯನ್ನು ವಿಳಾಸ ಕೇಳುವ ನೆಪದಲ್ಲಿ ಮನೆವರೆಗೂ ಹಿಂಬಾಲಿಸಿದ್ದಾರೆ ಮತ್ತು ಕೆಟ್ಟ ದೃಷ್ಟಿಯಿಂದ ನೋಡಿ ಲೈಂಗಿಕ ಕಿರುಕುಳ ನೀಡಿರುತ್ತಾರೆ. ಭಯಗೊಂಡ ವಿದ್ಯಾರ್ಥಿನಿಯು ತನ್ನ ಅಕ್ಕನಿಗೆ ಕರೆ ಮಾಡಲು ಹೋದಾಗ ಮೊಬೈಲ್ ಕಸಿದುಕೊಂಡು ಹೋಗಿರುತ್ತಾರೆ. ಈ ಸಂಬAಧವಾಗಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣ ಪತ್ತೆಗೆ ಕುಣಿಗಲ್ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಲಕ್ಷಿöÃಕಾಂತ್ ಅವರ ನೇತೃತ್ವದಲ್ಲಿ ತುರುವೇಕೆರೆ ವೃತ್ತದ ಸಿ.ಪಿ.ಐ ಲೋಹಿತ್.ಬಿ.ಎನ್ರವರ ಕ್ರೆöÊಂ ತಂಡವನ್ನು ರಚಿಸಲಾಗಿತ್ತು.