ಹುಳಿಯಾರು:
ಹುಳಿಯಾರಿನಿಂದ ಕೆಂಕೆರೆಗೆ ಹೋಗುವ ರಾಷ್ಟಿçÃಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹಾಕಿರುವ ಮಣ್ಣನ್ನು ಬದಲಾಯಿಸುವಂತೆ ಒತ್ತಾಯಿಸಿ ಕೆಲಸ ನಿರ್ವಹಿಸುತ್ತಿದ್ದ ಮಣ್ಣು, ಜಲ್ಲಿ ಲಾರಿಗಳನ್ನು ತಡೆದು ಪ್ರತಿಭಟನೆ ಮಾಡಿದ ಘಟನೆ ಹುಳಿಯಾರು ಹೋಬಳಿಯ ಕೆಂಕೆರೆಯಲ್ಲಿ ಬುಧವಾರ ಜರುಗಿದೆ.
ಹಿರಿಯೂರಿನಿಂದ ಕೆಂಕೆರೆ ಗ್ರಾಮದವರೆವಿಗೂ ರಾಷ್ಟಿçÃಯ ಹೆದ್ದಾರಿಯ ಅಗಲೀಕರಣ ಮಾಡಿ ಗುಣಮಟ್ಟದ ಕಾಮಗಾರಿ ಮಾಡಿದ್ದಾರೆ. ಆದರೆ ಕೆಂಕೆರೆಯಿAದ ಹುಳಿಯಾರಿನವರೆವಿಗೆ ನಾಲ್ಕು ಕಿಮೀ ರಸ್ತೆಯನ್ನು ಅಗಲೀಕರಣ ಮಾಡದೆ ಹಾಲಿ ಇದ್ದ ರಸ್ತೆಯ ಮೇಲೆಯೇ ಮರು ಡಾಂಬರೀಕರಣ ಮಾಡಿದ್ದಾರೆ. ಅಲ್ಲದೆ ರಸ್ತೆಯ ಇಕ್ಕೆಲಗಳಲ್ಲಿ ಗ್ರಾವೆಲ್ ಮಣ್ಣು ಹಾಕದೆ ಧೂಳು ಏಳುವ ಪೌಡರ್ ರೀತಿಯ ಮಣ್ಣು ಸುರಿದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ರಸ್ತೆ ಅಗಲೀಕರಣ ಮಾಡದೆ ಇರುವ ರಸ್ತೆಯ ಮೇಲೆ ಡಾಂಬರ್ ಹಾಕಿರುವುದರಿಂದ ರಸ್ತೆ ತೀರ ಕಿರಿದಾಗಿದ್ದು ಎರಡೂ ಕಡೆಯಿಂದ ವಾಹನಗಳು ಬಂದಾಗ ಅನಿವಾರ್ಯವಾಗಿ ರಸ್ತೆ ಕೆಳಗೆ ಇಳಿದು ಚಲಿಸಬೇಕಿದೆ. ಈ ಸಂದರ್ಭದಲ್ಲಿ ಧೂಳು ಎದ್ದು ಹಿಂಬದಿಯ ವಾಹನ ಸವಾರರಿಗೆ, ಪಾದಚಾರಿಗಳಿಗೆ ಧೂಳಿನ ಅಭಿಷೇಕ ಮಾಡಿಸಿಕೊಂಡು ಪ್ರಯಾಣಿಸಬೇಕಿದೆ. ಅಲ್ಲದೆ ಗಂಟಲು ಮತ್ತು ಮೂಗಿನ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ದೂರಿದ್ದಾರೆ.
ರಸ್ತೆಯ ಇಕ್ಕೆಲಗಳಲ್ಲಿ ಹಾಕಿರುವ ಮಣ್ಣು ಬದಲಾಯಿಸಿ ಎಂದು ಒತ್ತಾಯ ಮಾಡಿದಾಗ ಟ್ರಾಂಕರ್‌ಗಳಲ್ಲಿ ನೀರು ಹಾಕಿ ನಂತರ ಸುಮ್ಮನಾಗುತ್ತಾರೆ. ಹಾಕಿರುವ ಮಣ್ಣನ್ನು ತೆಗೆದು ಗ್ರಾö್ಯವೆಲ್ ಮಣ್ಣು ಹಾಕದ ವಿನಃ ಸಮಸ್ಯೆಗೆ ಮುಕ್ತಿಯಿಲ್ಲ. ಕಾಮಗಾರಿ ನಡೆಯುವಾಗ ಗುಣಮಟ್ಟದ ಕಾಮಗಾರಿ ಮಾಡಿಸದಿದ್ದರೆ ಕಾಮಗಾರಿ ಮುಗಿದ ನಂತರ ಗುತ್ತಿಗೆದಾರರು ನಮ್ಮ ಕೈಗೆ ಸಿಗುವುದಿಲ್ಲ. ಹಾಗಾಗಿ ಎಂಜಿನಿಯರ್ ಮತ್ತು ಗುತ್ತಿಗೆದಾರರು ಸ್ಥಳಕ್ಕೆ ಬಂದು ಧೋಳೇಳುವ ಮಣ್ಣು ತೆಗೆಸಬೇಕು. ಅಲ್ಲಿಯವರೆವಿಗೆ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಸ್ಥಳಕ್ಕೆ ಪಿಎಸ್‌ಐ ಧರ್ಮಾಂಜಿ ಅವರು ಬಂದು ಧೂಳಿನ ಸಮಸ್ಯೆಯನ್ನು ನಾನೂ ಕೂಡ ಎದುರಿಸುತ್ತಿದ್ದೇನೆ. ಎಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ಮಣ್ಣು ಬದಲಾಯಿಸಲು ಹೇಳುತ್ತೇನೆ ಎಂದೇಳಿ ದೂರವಾಣಿ ಕರೆ ಮಾಡಿ ಸಮಸ್ಯೆ ವಿವರಿಸಿ ತಕ್ಷಣ ಮಣ್ಣು ಬದಲಾಯಿಸುವಂತೆ ತಿಳಿಸಿ ತಡೆದಿರುವ ವಾಹನಗಳನ್ನು ಬಿಡಿ ಎಂದರು. ಪಿಎಸ್‌ಐ ಮಾತಿಗೆ ಬೆಲೆ ಕೊಟ್ಟು ಮಣ್ಣು ಬದಲಾಯಿಸುವ ಹೊಣೆ ನಿಮ್ಮದು ಎಂದೇಳಿ ಪ್ರತಿಭಟನೆ ಹಿಂಪಡೆದರು.