ತುಮಕೂರು
ಜಿಲ್ಲೆಯ ಕುಚ್ಚಂಗಿ ಕೆರೆಯ ಬಳಿ ಕಾರೊಂದು ಸಂಪೂರ್ಣ ಸುಟ್ಟು ಹೋಗಿ, ಕಾರಿನಲ್ಲಿ ಮೂವರ ಮೃತದೇಹ ಪತ್ತೆಯಾಗಿರುವ ಘಟನೆ ಶುಕ್ರವಾರ ವರದಿಯಾಗಿತ್ತು. ಈ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೂವರು ಸಾವನ್ನಪ್ಪಿರುವುದು ಪತ್ತೆ ಹಚ್ಚಲಾಗಿತ್ತು. ಈ ಘಟನೆಗೆ ಸಂಬAಧಪಟ್ಟAತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಪ್ರಕರಣದ ಪ್ರಮುಖ ಆರೋಪಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲ ಆರೋಪಿಗಳನ್ನು ಮಾ.೨೨ರ ರಾತ್ರಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಪೊಲೀಸರು ಇನ್ನೂ ಕೂಡ ಅಧಿಕೃತ ಮಾಹಿತಿ ನೀಡಿಲ್ಲ.
ಹನ್ನೊಂದು ದಿನದ ಹಿಂದೆ ತುಮಕೂರಿಗೆ ವ್ಯವಹಾರ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಮದ್ದಡ್ಕದ ರಫೀಕ್ ಎಂಬುವವರ ಮಾಲೀಕತ್ವದ ಎಸ್‌ಪ್ರೆಸ್ ಕಾರನ್ನು ಬೆಳ್ತಂಗಡಿ ತಾಲೂಕಿನ ಇಸಾಕ್(೫೬), ಶಾಹುಲ್ ಹಮೀದ್ (೪೫), ಇಮ್ತಿಯಾಝ್ ಸಿದ್ದೀಕ್( ೩೪) ಎಂಬವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ತಿಳಿದುಬಂದಿದೆ.
ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಇಮ್ತಿಯಾಝ್ ಸಿದ್ದೀಕ್, ಇಸಾಕ್, ಶಾಹುಲ್ ಹಮೀದ್
ನಕಲಿ ಚಿನ್ನದ ದಂಧೆಯ ಆಸೆಗೆ ಇವರು ಬಲಿಯಾಗಿದ್ದಾರೆ ಎಂದು ಪ್ರಾಥಮಿಕ ವಿಚಾರಣೆ ಸಂದರ್ಭ ತಿಳಿದು ಬಂದಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವ ಸಂದರ್ಭ ಚಿನ್ನದ ಹಂಡೆ ದೊರಕಿದ್ದು, ಚಿನ್ನವನ್ನು ಕಡಿಮೆ ಬೆಲೆಗೆ ನಿಮಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆದು ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಳ್ಳಲಾಗಿತ್ತು ಎಂದು ಹೇಳಲಾಗಿದೆ. ನಂತರ ಇವರ ಕೈಕಾಲನ್ನು ಕಟ್ಟಿ ಹಾಕಿ, ಕಾರಿನೊಳಗೆ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮಾ.೨೨ರAದು ಸುಮೊಟೋ ಪ್ರಕರಣವನ್ನು ಕೋರಾ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿ, ತನಿಖೆ ನಡೆಸಲಾಗುತ್ತಿದೆ. ಬೆಳ್ತಂಗಡಿಯ ಮೂವರ ಶವ ಸಂಪೂರ್ಣವಾಗಿ ಸುಟ್ಟು ಹೋಗಿರುವ ಪರಿಣಾಮ ಡಿಎನ್‌ಎ ಪರೀಕ್ಷೆ ನಂತರ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ ಎಂದು ತಿಳಿದುಬಂದಿದೆ. ಒಂದು ವಾರ ಡಿಎನ್‌ಎ ವರದಿ ಬರಲು ಬೇಕಾಗುತ್ತದೆ ಎಂದು ಪೊಲೀಸರು ಮನೆಮಂದಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಗುರುವಾರ ಸಂಜೆವರೆಗೂ ಕುಟುಂಬಸ್ಥರ ಜೊತೆ ಸಂಪರ್ಕದಲ್ಲಿದ್ದ ಇಸಾಕ್!
ಮೃತಪಟ್ಟವರ ಪೈಕಿ ಇಸಾಕ್ ರಿಯಲ್ ಎಸ್ಟೇಟ್ ವ್ಯವಹಾರ ಹೊಂದಿದ್ದರೆAದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಇಸಾಕ್ ಅವರು, ‘ಒಂದು ಡೀಲ್ ಇದೆ’ ಎಂದು ಸ್ನೇಹಿತ ರಫೀಕ್ ಅವರ ಕಾರನ್ನು ೧೫ ದಿನಗಳ ಹಿಂದೆ ಬಾಡಿಗೆಗೆ ಪಡೆದುಕೊಂಡಿದ್ದರು. ತನ್ನ ಜೊತೆ ಸಾಹುಲ್ ಹಮೀದ್ ಹಾಗೂ ಇಮ್ತಿಯಾಝ್ ಸಿದ್ದೀಕ್ ಅವರನ್ನು ಕೂಡ ಕರೆತಂದಿದ್ದರು.
“ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹುಂಡಿ ಸಿಕ್ಕಿದೆ. ಕಡಿಮೆ ಬೆಲೆಗೆ ಚಿನ್ನ ಕೊಡುತ್ತೇವೆ” ಎಂದು ಮೂವರನ್ನ ಕರೆಸಿಕೊಂಡಿದ್ದ ತುಮಕೂರು ಮೂಲದ ಸ್ವಾಮಿ ಇತರರೊಂದಿಗೆ ಸೇರಿ, ಚಿನ್ನ ಖರೀದಿಗೆಂದು ತಂದಿದ್ದ ಹಣ ದೋಚಲು ಮೂವರನ್ನ ಕೊಲೆಗೈದಿರುವುದಾಗಿ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಸುಮಾರು ಒಂದು ಕೋಟಿ ರೂ. ವ್ಯವಹಾರ ನಡೆದಿರುವುದಾಗಿ ತಿಳಿದುಬಂದಿದೆ.
ಮೂವರನ್ನು ಥಳಿಸಿ, ಕೈ ಕಾಲು ಕಟ್ಟಿ ಹಾಕಿ ಕೊಲೆಗೈದಿದ್ದು, ಕಾರಿನ ಡಿಕ್ಕಿಗೆ ಇಬ್ಬರ ಮೃತದೇಹ ಹಾಗೂ ಕಾರಿನ ಮಧ್ಯಭಾಗದ ಸೀಟಿನಲ್ಲಿ ಒಬ್ಬನ ಮೃತದೇಹ ಇಟ್ಟು, ಕಾರಿಗೆ ಬೆಂಕಿ ಹಚ್ಚಿ ಭೀಕರವಾಗಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ಮೃತಪಟ್ಟವರಲ್ಲಿ ಇಸಾಕ್ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದರೆ, ಸಾಹುಲ್ ಹಮೀದ್ ಆಟೋ ಚಾಲಕನಾಗಿದ್ದರು ಹಾಗೂ ಇಮ್ತಿಯಾಝ್ ಸಿದ್ದೀಕ್ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.ಗುರುವಾರ ಸಂಜೆವರೆಗೂ ಕುಟುಂಬಸ್ಥರ ಜೊತೆ ಸಂಪರ್ಕದಲ್ಲಿದ್ದ ಇಸಾಕ್ ಅವರ ಮೊಬೈಲ್, ಗುರುವಾರ ರಾತ್ರಿ ವೇಳೆ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಸದ್ಯ ಪ್ರಮುಖ ಆರೋಪಿ ಸ್ವಾಮಿ ಸೇರಿ ಒಟ್ಟು ೬ ಜನರನ್ನು ಪೊಲೀಸರ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿರುವುದಾಗಿ ತಿಳಿದುಬಂದಿದೆ.
ವಿಶೇಷ ತನಿಖಾ ತಂಡ ರಚಿಸಲು ಆಗ್ರಹ
ಘಟನೆಯ ಹಿನ್ನೆಲೆಯಲ್ಲಿ ಸದ್ಯ ತುಮಕೂರಿನಲ್ಲಿರುವ ಎಸ್‌ಡಿಪಿಐ ಬೆಳ್ತಂಗಡಿ ತಾಲೂಕು ಅಧ್ಯಕ್ಷ ನವಾಝ್ ಕಟ್ಟೆ ಈ ದಿನ.ಕಾಮ್‌ನೊಂದಿಗೆ ಮಾತನಾಡಿದ್ದು, ವಿಶೇಷ ತನಿಖಾ ತಂಡ ರಚಿಸಬೇಕೆಂದು ಆಗ್ರಹಿಸಿದ್ದಾರೆ.
“ಕೊಲೆಗೀಡಾದವರು ನಮ್ಮ ತಾಲೂಕಿನ ಮಂದಿ. ಅಲ್ಲದೇ, ಕೊಲೆಗೀಡಾದ ಸಾಹುಲ್ ಹಮೀದ್ ಉಜಿರೆ ಸಾಮಾಜಿಕ ಕೆಲಸಗಳಲ್ಲಿ ಕೂಡ ತೊಡಗಿಸಿಕೊಂಡಿದ್ದರಿAದ ನಮಗೂ ಕೂಡ ಪರಿಚಯವಿತ್ತು. ಪಕ್ಷದ ಕಾರ್ಯಗಳಲ್ಲೂ ಭಾಗಿಯಾಗಿದ್ದರು. ಹೀಗಾಗಿ, ಘಟನೆಯ ಬಗ್ಗೆ ಮಾಹಿತಿ ಪಡೆಯಲು ತುಮಕೂರಿಗೆ ಬಂದಿದ್ದೇವೆ. ಇದು ನಿಜಕ್ಕೂ ಆಘಾತಕಾರಿ ಘಟನೆ. ನಮಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಚಿನ್ನದಾಸೆ ತೋರಿಸಿ ಈ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿದೆ. ಸುಮಾರು ಒಂದು ಕೋಟಿ ರೂ. ವ್ಯವಹಾರ ಆಗಿರುವ ಸಾಧ್ಯತೆ ಇದೆ. ನೀಡಿದ್ದ ಹಣವನ್ನು ಕೇಳಲು ಬಂದಿದ್ದಾಗ ಪೂರ್ವ ಯೋಜಿತವಾಗಿ ಈ ಕೊಲೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
“ಇದರ ಹಿಂದೆ ದೊಡ್ಡ ವ್ಯವಸ್ಥಿತ ಜಾಲವೇ ಇರುವ ಶಂಕೆ ನಮಗೆ ಇದೆ. ಈ ಹಿಂದೆ ಕೂಡ ಹೀಗೆ ಹಲವಾರು ಮಂದಿ ಮೋಸ ಹೋಗಿರುವುದು ಅಲ್ಲಲ್ಲಿ ಕೇಳಿ ಬಂದಿತ್ತು. ದಕ್ಷಿಣ ಕನ್ನಡ ಜಿಲ್ಲೆಯವರನ್ನೇ ಗುರಿಯಾಗಿರಿಸಿ ಈ ರೀತಿ ನಿರಂತರವಾಗಿ ಮೋಸ ನಡೆಯುತ್ತಿರುವ ಬಗ್ಗೆ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ಹಾಗಾಗಿ, ಸರ್ಕಾರವು ಕೂಡಲೇ ಇದರ ಹಿಂದೆ ಇರುವವರನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ ರಚಿಸಬೇಕು. ಇಂಥದ್ದಕ್ಕೆ ಕಡಿವಾಣ ಹಾಕಬೇಕು ಎಂಬುದು ನಮ್ಮ ಆಗ್ರಹ” ಎಂದು ಎಸ್‌ಡಿಪಿಐ ಮುಖಂಡ ನವಾಝ್ ಕಟ್ಟೆ ಈ ದಿನ.ಕಾಮ್ ಜೊತೆಗೆ ಮಾತನಾಡುತ್ತಾ ತಿಳಿಸಿದ್ದಾರೆ.
“ಇಂತಹ ಕ್ರೂರ ಕೃತ್ಯದಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆಯಾಗಬೇಕು ಮತ್ತು ಕೊಲೆಗೀಡಾದ ಮೂವರು ಅಮಾಯಕರ ಕುಟುಂಬಕ್ಕೆ ರಾಜ್ಯ ಸರಕಾರ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದ್ದಾರೆ.