ಹುಳಿಯಾರು:
ಹುಳಿಯಾರು ಹೋಬಳಿಯಲ್ಲಿ ಕಳೆದ ಮರ‍್ನಲ್ಕು ದಿನಗಳಿಂದ ಜೋರು ಮಳೆಯಾಗುತ್ತಿದ್ದರೂ ಯಾವುದೇ ಅವಘಡಗಳು ಸಂಬವಿಸಿರಲಿಲ್ಲ. ಆದರೆ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಕೆರೆಕಟ್ಟೆ ಭರ್ತಿಯಾಗುವ ಜೊತೆಗೆ ಅಲ್ಲಲ್ಲಿ ರಾಗಿ ಬೆಳೆ ನೆಲ್ಲಕಚ್ಚಿದೆ ಹಾಗೂ ಕೋಳಿಗಳನ್ನು ಬಲಿ ಪಡೆದುಕೊಂಡ ಘಟನೆ ನಡೆದಿದೆ.
ಸೋಮವಾರ ರಾತ್ರಿ ೭ ಗಂಟೆಗೆ ಮಳೆ ಅಬ್ಬರ ಆರಂಭವಾಯಿತು. ಗುಡುಗು ಸಿಡಿಲಿನ ಅಬ್ಬರದ ಜೊತೆಗೆ ೨ ಗಂಟೆಗೆ ಹೆಚ್ಚು ಕಾಲ ಒಂದೇ ಸಮನೆ ಮಳೆ ಸುರಿಯಿತು. ಸ್ವಲ್ಪ ಹೊತ್ತು ಬಿಡುವು ನೀಡಿ ಮತ್ತೆ ಮಳೆಯಾಯಿತು. ಬಿರುಸಿನ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹುಳಿಯಾರಿನ ವಾಲ್ಮೀಕಿ ಸರ್ಕಲ್ ಬಳಿ ನ್ಯಾಷನಲ್ ಹೈವೆಯಲ್ಲಿ ಎರಡು ಅಡಿಗಳಿಗೂ ಹೆಚ್ಚು ನೀರು ತುಂಬಿಕೊAಡು ವಾಹನ ಚಾಲಕರು ಪರದಾಡಿದರು. ನೀರು ಹರಿಯಲು ಜಾಗವಿಲ್ಲದೆ ಸಮಸ್ಯೆ ಉಂಟಾಯಿತು. ಹಲವೆಡೆ ಚರಂಡಿಗಳಲ್ಲಿ ನೀರು ತುಂಬಿಕೊAಡು ತ್ಯಾಜ್ಯ ಸಮೇತ ರಸ್ತೆಗಳಲ್ಲಿ ಹರಿಯಿತು.
ಹೋಬಳಿಯ ಬಹುತೇಕ ಕೆರೆಗಳಿಗೆ ನೀರು ಬಂದಿದೆ. ಚಿಕ್ಕಬಿದರೆ ಕೆರೆ ಕೋಡಿ ಬಿದ್ದಿದೆ. ಹಳ್ಳಿಗಳ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಹೊಲ ತೋಟಗಳು ಕೆರೆಗಳಾಗಿ ಮಾರ್ಪಟ್ಟಿವೆ. ಹಲವೆಡೆ ಟೊಮೆಟೊ, ಈರುಳ್ಳಿ, ಹೂವು ಬೆಳೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಫಸಲು ನಷ್ಟವಾಗಿದೆ. ೧೦ ದಿನಗಳಿಂದ ಹೋಬಳಿಯಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಲೇ ಇದ್ದು, ಮಲೆನಾಡಿನ ವಾತಾವರಣದಂತಾಗಿದೆ.
ಹುಳಿಯಾರು ಸಮೀಪದ ತೊರೆಸೂರಗೊಂಡನಹಳ್ಳಿ ಬಳಿ ಹುಳಿಯಾರಿನ ಅಂಜನಾದ್ರಿ ಮೊಬೈಲ್ಸ್ನ ಸನತ್ ಅವರಿಗೆ ಸೇರಿದ ಕೋಳಿ ಶೆಡ್‌ಗೆ ನೀರು ನುಗ್ಗಿ ೩ ತಿಂಗಳ ೪೦೦ ನಾಟಿ ಕೋಳಿ ಸಾವನ್ನಪ್ಪಿದೆ. ಅಲ್ಲದೆ ಮರ‍್ನಲ್ಕು ಚೀಲ ಕೋಳಿ ಫುಡ್ ಹಾನಿಯಾಗಿದೆ. ಕೆಂಕೆರೆಯಲ್ಲಿ ಲಾರಿಯೊಂದಿಗೆ ಡಿವೈಡರ್‌ನ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ತಾಲೂಕಿನ ಮಳೆ ಮಾಪನದ ಮಾಹಿತಿ ಪ್ರಕಾರ ಹುಳಿಯಾರಿನಲ್ಲಿ ೭೦.೪ ಮಿಮೀ, ಶೆಟ್ಟಿಕೆರೆ ೨೫.೨ ಮಿಮೀ, ಮತ್ತಿಘಟ್ಟ ೩೮.೨ ಮಿಮೀ, ಬೋರನಕಣಿವೆ ೮.೪ ಮಿಮೀ, ದೊಡ್ಡಎಣ್ಣೇಗೆರೆ ೩೮ ಮಿಮೀ ಹಾಗೂ ಸಿಂಗದಹಳ್ಳಿಯಲ್ಲಿ ೬೯ ಮಿಮೀ ಮಳೆಯಾಗಿದೆ.