ತಿಪಟೂರು :


ಋತುವಿಗೆ ಅನುಗುಣವಾಗಿ ಅಹಾರ ಪದ್ದತಿಯನ್ನು ಅಳವಡಿಸಿಕೊಂಡರೆ ಮನುಷ್ಯನ ಜೀವನವು ಆರೋಗ್ಯಕರವಾಗಿದ್ದು, ಜೊತೆಯಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ, ಪಠಣ ಅತಿ ಅವಶ್ಯಕ ಎಂದು ಆಯುಷ್ ಆಸ್ವತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಸುಮನಾ ತಿಳಿಸಿದರು.
ತಾಲ್ಲೂಕಿನ ಬಿದರೆಗುಡಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೊನೇಹಳ್ಳಿ ಆಯುಷ್ ಆಸ್ವತ್ರೆಯ ಸಹಯೋಗದಲ್ಲಿ ೯ನೇ ರಾಷ್ಟಿçÃಯ ಆರ್ಯುವೇದ ದಿನಾಚರಣೆಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಿಗೆ ಆಗಲೀ ಜೀವ ಇರುವ ಪ್ರಾಣಿ ಸಂಕಲುಗಳಿಗೆ ರೋಗ ಬರದಂತೆ ಆಯಾಸಗೊಳ್ಳದಂತೆ ಸದಾ ಲವಲವಿಕೆಯಿಂದ ಇರುವುದೇ ಆರೋಗ್ಯವೆಂದು ಧನ್ವಂತರಿಯಲ್ಲಿ ತಿಳಿಸಿದ್ದು, ಇತ್ತೀಚಿನ ದಿನಗಳಲ್ಲಿ ಹದಿಹರಯದ ಹೆಣ್ಣು ಮಕ್ಕಳು ಜಂಕ್‌ಫುಡ್‌ಗೆ ಮಾರುಹೋಗಿ ರಾಸಾಯನಿಕ ಆಹಾರಗಳನ್ನು ಹಾಗೂ ಅತಿಯಾದ ಎಣ್ಣೆ ಪದಾರ್ಥಗಳನ್ನು, ಬೀದಿ ಬದಿಯಲ್ಲಿನ ಆಹಾರಗಳನ್ನು ಸೇವಿಸುತ್ತಿರುವುದರಿಂದ ಋತು ಸಂಬAಧಿ ಕಾಯಿಲೆಗಳು ಸಹ ಹೆಚ್ಚಾಗುತ್ತಿದ್ದು ಅದರಿಂದ ಮುಟ್ಟಿನ ದಿನಗಳಲ್ಲಿ ಹೊಟ್ಟೆ ನೋವು, ಅನಿಮಯತ ರಕ್ತಸ್ರಾವ ಅಥವಾ ಸ್ರಾವ ಆಗದೇ ಇರುವುದು ಇಂತಹ ತೊಂದರೆಗಳು, ಪಿಸಿಓಡಿಯಂತಹ ಗರ್ಭಕೋಶದ ವೈಪರಿತ್ಯಗಳು ಕಂಡುಬರುತ್ತವೆ. ಇವುಗಳಿಗೆ ಆಯುರ್ವೇದದಲ್ಲಿ ತಿಳಿಸಿರುವ ಜೀವನ ಶೈಲಿ ಆಹಾರ ಪದ್ಧತಿ ಮತ್ತು ದಿನನಿತ್ಯ ಯೋಗ ಆಚರಣೆ ಪ್ರಾಣಾಯಾಮ ಧ್ಯಾನವೇ ಪರಿಹಾರವಾಗಿದೆ ಎಂದು ತಿಳಿಸಿದರು.
ಮಹಿಳೆಯರಲ್ಲದೆ ಎಲ್ಲ ಜನಸಾಮಾನ್ಯರು ತಮ್ಮ ಜೀವನ ಶೈಲಿಯಲ್ಲಿ ಆಹಾರ ಮತ್ತು ವಿಹಾರದಲ್ಲಿ ಬದಲಾವಣೆ ಮಾಡಿಕೊಂಡು ಆಯುರ್ವೇದ ಪದ್ಧತಿಯನ್ನು ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಪ್ರಕೃತಿಯಲ್ಲಿ ಸಿಗುವ ಪ್ರತಿಯೊಂದು ಸಸ್ಯಗಳು ಆರ್ಯುವೇದ ಅಂಶಗಳನ್ನು ಒಳಗೊಂಡಿದ್ದು ಅದರ ಉಪಯೋಗವನ್ನು ಪಡೆದುಕೊಂಡರೆ ಉತ್ತಮ ಆರೋಗ್ಯವನ್ನು ವೃದ್ದಿಸಿಕೊಳ್ಳಬಹುದು. ನಮ್ಮಲ್ಲಿಯೇ ಸಿಗುವ ಅಮೃತಬಳ್ಳಿ, ಶುಂಠಿ, ಬೇವು, ತುಂಬೆ, ಅರಿಸಿನ, ಹಾಗಲ, ನೆಲಿ,್ಲ ಪಪ್ಪಾಯಿ ಹೀಗೆ ಮುಂತಾದ ಸಸ್ಯಗಳು ಸಹ ಪ್ರತಿನಿತ್ಯದ ರೋಗನಿರೋಧಕ ಶಕ್ತಿಗಳಲ್ಲಿ ಒಂದಾಗಿದೆ ಎಂದರು.
ಜೊತೆ ಜೊತೆಗೆ ಸ್ಥಳೀಯವಾಗಿ ಸಿಗುವ ಗಿಡಮೂಲಿಕೆಗಳನ್ನು ಪ್ರಾತ್ಯಕ್ಷಿತವಾಗಿ ಪರಿಚಯಿಸುತ್ತಾ ಅವುಗಳನ್ನು ಬಳಸಿ ತಯಾರಿಸುವ ಔಷಧಗಳಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆಗಳಲ್ಲಿ ದೊರಕಬಹುದಾದ ಆಯುರ್ವೇದ ಔಷಧಗಳನ್ನು ಪ್ರದರ್ಶಿಸಿ ಅವುಗಳ ಬಳಕೆಯಿಂದಾಗುವ ಉಪಯೋಗದ ಮಾಹಿತಿ ನೀಡಿ ಈ ಎಲ್ಲಾ ಮಾಹಿತಿಗಳ್ಳ ಕರಪತ್ರಗಳೊಂದಿಗೆ ಕೆಲವೊಂದು ಮಹಿಳೆಯರಿಗೆ ಅವಶ್ಯಕವಾದ ಔಷಧಿಗಳನ್ನು ವಿತರಿಸಲಾಯಿತು.
ಆಯುರ್ವೇದದಲ್ಲಿ ತಿಳಿಸಿಕೊಟ್ಟ ಅಭ್ಯಂಗ ಎಣ್ಣೆಸ್ನಾನದಿಂದ ಸಂಧಿಗಳಲ್ಲಿ ನೋವು,ಬಿಗಿತನ ಕಡಿಮೆಯಾಗಿ ಪುಷ್ಠಿಯಾಗುತ್ತದೆ ಕೆಲವೊಂದು ಚರ್ಮರೋಗಗಳು ನಿವಾರಣೆಯಾಗುತ್ತದೆ ಎಂದು ಅದರಿಂದಾಗುವ ಲಾಭಗಳ ಬಗ್ಗೆ ವಿವರವಾಗಿ ತಿಳಿಸಿದರು.
ದೀಪಾವಳಿಯಲ್ಲಿ ಎಳ್ಳನ್ನು ಉಪಯೋಗಿಸುವುದರಿಂದ ಚಳಿಗಾಲದಲ್ಲಿ ಉಂಟಾಗುವ ಚರ್ಮಶೃಷ್ಕತೆಯನ್ನು ನಿವಾರಿಸುವದರ ಜೊತೆಗೆ ಉಷ್ಣಗುಣದಿಂದ ದೇಹವನ್ನು
ಚಳಿಯಿಂದ ರಕ್ಷಣೆಗೆ ಸಿಗುತ್ತದೆ ಹಾಗೂ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುವುದರಿಂದ ಹಲ್ಲು ಮೂಳೆ ಕೂದಲಿಗೆ ಸೂಕ್ತ ಪೋಷಕಾಂಶ, ಜೊತೆಗೆ ದೇಹಕ್ಕೆ ಬೇಕಾಗುವ ಪೋಷಕಾಂಶ ದೊರಕುತ್ತದೆಂದು ತಿಳಿಸಿಕೊಡಲಾಯಿತು.
ನಾವು ಸೇವಿಸುತ್ತಿರುವ ಆಹಾರ ಸರಿಯೋ ತಪ್ಪು ಎಂಬುದನ್ನು ಮನದಟ್ಟು ಮಾಡಿಕೊಳ್ಳಲು ಒಮ್ಮೆ ಈ ಇಂತಹ ಆಹಾರವನ್ನು ನಮ್ಮ ಹಿರಿಯರು ತಿನ್ನುತ್ತಿದ್ದರೆ? ಎಂದು ನಮಗೆ ನಾವೇ ಪ್ರಶ್ನೆ ಮಾಡಿಕೊಂಡರೆ ಅದು ತಿನ್ನಬಹುದಾದದ್ದೆ ಅಲ್ಲವೇ ಎಂದು ನಮಗೇ ತಿಳಿಯುತ್ತದೆ. ಎಂದು ತೆಗೆದುಕೊಳ್ಳುವ ಆಹಾರದ ಬಗ್ಗೆ ಇರುವ ಗೊಂದಲ ನಿವಾರಿಸಿಕೊಳ್ಳೋ ಬಗೆಯನ್ನು ತಿಳಿಸಿದರು.
ಆರ್ಥಿಕ ಸಾಕ್ಷರತಾ ಕೇಂದ್ರದ ಹಿರಿಯ ಆರ್ಥಿಕ ಸಮಾಲೋಚಕರು ರೇಖಾ.ಪಿ ಆಯುರ್ವೇದ ಕುರಿತು ಪ್ರಶ್ನೋತ್ತರ ಕಾರ್ಯಕ್ರಮ ನಡೆಸುವುದರೊಂದಿಗೆ ಆರ್ಥಿಕ ಸಾಕ್ಷರತಾ ಕೇಂದ್ರದ ವತಿಯಿಂದ ಜನ ಸುರಕ್ಷಾ ಕ್ಯಾಂಪ್ ಗಳು ನಡೆಯುತ್ತಿದ್ದು ನಿಮ್ಮ ನಿಮ್ಮ ಹಳ್ಳಿಯಲ್ಲಿ ಶಿಬಿರಗಳನ್ನು ನಡಸಬೇಕೆಂದರೆ ಆರ್ಥಿಕ ಸಾಕ್ಷರತಾ ಕೇಂದ್ರವನ್ನು ಸಂಪರ್ಕಿಸಿದಲ್ಲಿ ಸರ್ಕಾರದ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಹಾಗೂ ಪಿಂಚಣಿ ಯೋಜನೆಗಳ ನೋಂದಣಿಯನ್ನು ನಿಮ್ಮ ಗ್ರಾಮಗಳಲ್ಲಿ ಬಂದು ಮಾಡಿಕೊಡಲಾಗುವುದು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಡಾ.ಗೋವಿಂದೇಗೌಡ ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿಗೆ ಹಾಜರಾಗಿರುವ ಕೃಷಿ ಸಖಿಯರು ಹಾಗೂ ಇತರ ರೈತರು ಅಂಗನವಾಡಿ ಕಾರ್ಯಕರ್ತೆಯರು
ಕಾರ್ಯಕ್ರಮದ ಲಾಭ ಪಡೆದುಕೊಂಡು ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಿರಿಯ ಸಮಾಲೋಚಕಿ ಕುಸುಮ ಯೋಗ ಪ್ರದರ್ಶನ ನಡೆಸಿ, ಗಿಡ ಮೂಲಿಕೆಗಳನ್ನು ಪ್ರಾತ್ಯಕ್ಷತೆಯಾಗಿ ಪ್ರದರ್ಶನ ಮಾಡಲಾಯಿತು. ಉಚಿತ ಆರೋಗ್ಯ ತಪಾಸಣೆಯನ್ನು ನೆಡಸಲಾಯಿತು. ಪ್ರಗತಿಪರ ರೈತ ಯೋಗನಂದಸ್ವಾಮಿ, ಮಂಜುನಾಥ್, ನೇತ್ರಾ, ಸ್ತ್ರೀಶಕ್ತಿ ಸಂಘದವರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕೃಷಿಕರು ಹಾಗೂ ಇನ್ನಿತರ ಸಂಘ ಸಂಸ್ಥೆಯವರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

(Visited 1 times, 1 visits today)