ಕೊರಟಗೆರೆ
ಒಂದು ವಾರದಿಂದ ಸುರಿಯುತ್ತಿರುವ ಬಾರಿ ಮಳೆಗೆ ತಾಲೂಕಿನ ಬಹುತೇಕ ಕೆರೆಗಳು ತುಂಬಿ ಕೋಡಿ ಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿ ಗ್ರಾಮಗಳಿಗೆ ಜಲ ದಿಗ್ಬಂಧನ ಆದಂತೆ ಬಾಸವಾಗುತ್ತಿದೆ.
ಕೊರಟಗೆರೆ ತಾಲೂಕು ಬಯಲು ಸೀಮೆಯಾಗಿದ್ದು, ಈ ಬಾರಿ ಸುರಿದ ಬಾರಿ ಮಳೆಗೆ ಸಾವಿರಾರು ವರ್ಷಗಳ ಇತಿಹಾಸ ಇರುವ ಕೆರೆಗಳು ತುಂಬಿದ್ದು ರೈತರಿಗೆ ಒಂದು ಕಡೆ ಸಂತಸವಾದರೆ ಇನ್ನೊಂದು ಕಡೆ ಪ್ರತಿನಿತ್ಯ ಸಂಚಾರ ಮಾಡುವ ರಸ್ತೆಗಳು ನೀರು ಹರಿದು ಗುಂಡಿಗಳು ಬಿದ್ದು ರಸ್ತೆಗಳು ತುಂಬಾ ಹಾಳಾಗುತ್ತಿವೆ. ಸಾರ್ವಜನಿಕರು ಸಂಚಾರ ಮಾಡಲು ತೀರ್ವ ತೊಂದರೆ ಉಂಟಾಗಿದೆ.
ತಾಲೂಕಿನಾದ್ಯಾAತ ಅಬ್ಬರಿಸಿದ ಮಳೆಯ ಆರ್ಭಟಕ್ಕೆ ಜಯಮಂಗಲಿ, ಗರುಡಾಚಲ ನದಿ, ಸುವರ್ಣಮುಖಿ ನದಿಗಳು ಮೈದುಂಬಿ ಹರಿಯುತ್ತಿವೆ. ಅತಿ ಹೆಚ್ಚು ಮಳೆ ಬರುತ್ತಿರುವ ಕಾರಣ ತಾಲೂಕು ದಂಡಾಧಿಕಾರಿಗಳು ನದಿ ಪಾತ್ರದಲ್ಲಿರುವ ಕುಟುಂಬಗಳು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಯಾಗಿ ಇರುವಂತೆ ಸೂಚನೆ ನೀಡಿದ್ದಾರೆ. ತಹಸೀಲ್ದಾರ್ ಮಂಜುನಾಥ್ ತಾಲೂಕಿನಾದ್ಯಾಂತ ಸಂಚಾರ ಮಾಡಿ ತಾಲೂಕಿನಲ್ಲಿ ಯಾವುದೆ ಅಹಿತಕರ ಘಟನೆ ನಡೆದರೆ ತಕ್ಷಣ ಗ್ರಾಪಂ, ತಾಪಂ, ಹಾಗೂ ತಾಲೂಕು ಕಚೇರಿಗೆ ಮಾಹಿತಿ ನೀಡಿ ಎಂದು ಸೂಚನೆ ನೀಡಿದ್ದಾರೆ.
ತಾಲೂಕಿನ ನಾಲ್ಕು ದಿಕ್ಕುನಲ್ಲಿಯೂ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ನದಿ ಪಾತ್ರದ ಬೋಮ್ಮಲದೇವಿಪುರ, ಲಂಕೇನಹಳ್ಳಿ, ತೀತಾ, ದುಗೇನಹಳ್ಳಿ, ಕರಕಲಘಟ್ಟ, ಮಲಪನಹಳ್ಳಿ, ವಡ್ಡಗೆರೆ, ಚೀಲಗಾನಹಳ್ಳಿ, ಚನ್ನಸಾಗರ, ಗುಂಡಿನಪಾಳ್ಯ, ಕೋಡ್ಲಹಳ್ಳಿ, ಹನುಮೇನಹಳ್ಳಿ, ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ಸೇತುವೆಗಳು ಮುಳುಗಡೆಯಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ.